ಮಡಿಕೇರಿ, ಡಿ. ೨೨: ಕೊಯಮತ್ತೂರುವಿನ ಇಶಾ ಯೋಗ ಕೇಂದ್ರದ ಅಧ್ಯಾತ್ಮ ಸಾಧÀಕರು ಕೈಗೊಂಡಿರುವ ಆದಿಯೋಗಿ ರಥಯಾತ್ರೆಗೆ ಮಡಿಕೇರಿಯಲ್ಲಿ ಭಕ್ತಿ ಭಾವದ ಸ್ವಾಗತ ದೊರಕಿತು. “ ಮಹಾಶಿವರಾತ್ರಿಗೆ ಅಧ್ಯಾತ್ಮಿಕ ದಿವ್ಯ ಪಯಣ” ಎಂಬ ಧ್ಯೇಯದೊಂದಿಗೆ ಡಿ. ೭ ರಿಂದ ಉಡುಪಿಯಿಂದ ಪ್ರಾರಂಭ ಗೊಂಡು ಫೆ. ೧೩ ಕ್ಕೆ ಕೊಯಮತ್ತೂರುವಿನಲ್ಲಿ ಮಹಾಶಿವರಾತ್ರಿ ಸಂದರ್ಭ ಈ ರಥಯಾತ್ರೆ ಪರಿಸಮಾಪ್ತಿ ಗೊಳ್ಳಲಿದೆ. ಸುಮಾರು ೪೦ ಮಂದಿ ಶಿವ ಸಾಧಕರು ರಥವನ್ನು ಎಳೆಯುತ್ತ ಬಂದಿದ್ದ ಈ ರಥಯಾತ್ರೆಯು ಸುಳ್ಯ ಮಾರ್ಗ ವಾಗಿ ಇಂದು ಸಂಜೆ ಮಡಿಕೇರಿ ತಲುಪಿತು. ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತದಿಂದ ಚಿಕ್ಕಪೇಟೆ, ಕೋಟೆ, ಮಹದೇವ ಪೇಟೆ, ಚೌಕಿಗಾಗಿ ಭಕ್ತರಿಂದ ರಥ ಎಳೆಯಲ್ಪಟ್ಟು ನಗರದ ಕಾಶಿ ಮಠದಲ್ಲಿ ಇಂದು ಮುಕ್ತಾ ಯಗೊಂಡಿತು. ರಥಯಾತ್ರೆಯು ಮಂಗಳವಾರ ಸುಂಟಿಕೊಪ್ಪÀಕ್ಕೆ ತೆರಳಿ ಬಳಿಕ ಮುಂದುವರಿಯಲಿದೆ. ಭಕ್ತಾದಿಗಳು ಶಿವ ನಾಮ ಸ್ಮರಣೆಯೊಂದಿಗೆ ಭಾವುಕತೆಯಿಂದ ಹೆಜ್ಜೆ ಹಾಕಿದರು. ಶಿವನ ಕಲಾಕೃತಿಯೊಂದಿಗೆ ೪ಆರನೇ ಪುಟಕ್ಕೆ

(ಮೊದಲ ಪುಟದಿಂದ) ಸದ್ಗುರುವಿನ ಪಾದ ಪಡಿಯಚ್ಚಿನೊಂದಿಗೆ ರಥವು ತೆರಳುತ್ತಿದ್ದು ಸುಮಾರು ೧೦೦ ಹಳ್ಳಿಗಳನ್ನು ಕ್ರಮಿಸಲಿದೆ. ಆಯಾ ಊರುಗಳಲ್ಲಿ ಸ್ಥಳೀಯರು ರಥ ಎಳೆಯುವಲ್ಲಿ ಕೈ ಜೋಡಿಸುತ್ತ್ತಿದ್ದಾರೆ. ಒಟ್ಟು ಒಂದು ಸಾವಿರಕ್ಕೂ ಅಧಿಕ ಕಿ.ಮೀ ಚಲಿಸಲಿದ್ದು ೭೦ ದಿನಗಳ ದೀರ್ಘ ರಥಯಾತ್ರೆ ಇದಾಗಿದೆ. ಮುಖ್ಯವಾಗಿ ಅಧ್ಯಾತ್ಮಿಕ, ಧಾರ್ಮಿಕ, ಸನಾತನ ಸಂಸ್ಕೃತಿಯ ಜಾಗೃತಿ ಇದರ ಮುಖ್ಯ ಉದ್ದೇಶವಾಗಿದೆ ಎಂದು ಸಂಘಟಕರು ವಿವರಿಸಿದ್ದಾರೆ. ಈ ಸಂದರ್ಭ ಈ ಕಾರ್ಯದಲ್ಲಿ ಕೊಡಗಿನ ರಥಯಾತ್ರೆಯ ಜವಾಬ್ದಾರಿ ಹೊತ್ತಿರುವ ಅಗೋಳಿಕಜೆ ಧನಂಜಯ್, ಜೆ.ಗಣೇಶ್ ಶೆಣೈ, ಎಂ.ಅಗಸ್ತö್ಯ, ಎಂ. ಎನ್. ಅಖಿಲ್, ರಂಜಿತ್, ನಾಗರಾಜ್ ಮೊದಲಾದವರು ಪಾಲ್ಗೊಂಡಿದ್ದರು. ಅಲ್ಲದೆ, ಮಡಿಕೇರಿಯ ಅನೇಕ ಪ್ರಮುಖರು ನಗರದ ರಥ ಯಾತ್ರೆಯಲ್ಲಿ ಕೈ ಜೋಡಿಸಿದರು.