“ಆಗದು ಎಂದು ಕೈ ಕಟ್ಟಿ ಕುಳಿತರೆ ಕಾಫಿ ತೋಟ ನಿರ್ವಹಣೆ ನಡೆಯದು ಮುಂದೆ..!!''

ಬಾಳೆಹೊನ್ನೂರು ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಕಾರ್ಯಕ್ರಮದಲ್ಲಿ ತಾ. ೨೨ ರಂದು ರಾಜ್ಯದ ಹೆಸರಾಂತ ಕಾಫಿ ಕೃಷಿ ತಜ್ಞ ಡಾ. ಹೆಚ್.ಎಸ್. ಧರ್ಮರಾಜ್ ಸವಿವರವಾಗಿ ಕಾಫಿ ಕೃಷಿಕರಿಗೆ ನೀಡಿರುವ ಕೃಷಿ ಮಂತ್ರ, ತಂತ್ರಗಳ ಮುಖ್ಯಾಂಶಗಳು.

* ಕಾಪಿ ಜತೆ ಈಗ ಅಧಿಕ ವರಮಾನ ನೀಡುತ್ತಿರುವ ಏಲಕ್ಕಿಗೆ ಕೃಷಿಕರು ಮತ್ತೆ ಆದ್ಯತೆ ನೀಡಿದ್ದೇ ಆದಲ್ಲಿ ಬಂಪರ್ ಆದಾಯ ಖಂಡಿತ. ಏಲಕ್ಕಿಯ ವೈಭವದ ದಿನಗಳತ್ತ ಕೃಷಿಕರು ಮನಸ್ಸು ಮಾಡಲೇಬೇಕು.

* ಉತ್ತಮ ತಳಿ, ಮಣ್ಣಿನ ಫಲವತ್ತತೆ, ಉತ್ತಮ ನೀರು ಸಿಂಪಡಿಸುವಿಕೆ, ಆರೋಗ್ಯವಂತ ಸಸಿಗಳು ವಿಶೇಷ ಪೋಷಕಾಂಶಗಳಿAದಾಗಿ ಉತ್ತಮ ಕಾಫಿ ಕೃಷಿ ಖಂಡಿತಾ ಸಾಧ್ಯವಿದೆ.

* ಕಾಫಿಗೆ ತಗುಲಿರುವ ಬೋರರ್ ಸೇರಿದಂತೆ ಹಲವು ಕಾಯಿಲೆಗಳಿಗೆ ಕಡಿವಾಣ ಹಾಕಬೇಕಾದಲ್ಲಿ.. ನೆರಳಿನ ನಿರ್ವಹಣೆ ಮತ್ತು ಸಸಿಯಲ್ಲಿನ ಚಿಗುರಿನ ನಿರ್ವಹಣೆ ಅತೀ ಮುಖ್ಯವಾಗಲಿದೆ.

* ಕಾಫಿಗೆ ಉತ್ತಮ ಬೆಲೆ ಲಭಿಸಿರುವುದು ವಾಸ್ತವ. ಆದರೆ ಇದೇ ಬೆಲೆ ಪ್ರತೀ ವರ್ಷ ದೊದಕುವ ವಿಶ್ವಾಸ ಯಾರಲ್ಲಿಯೂ ಇಲ್ಲ. ಹೀಗಿರುವಾಗ ಬೆಲೆ ಇರುವ ಸಂದರ್ಭದಲ್ಲಿಯೇ ಕಾಫಿಯ ತೋಟಗಳಲ್ಲಿ ಪರ್ಯಾಯ ಬೆಳೆಗೆ ಕೃಷಿಕರು ಮಂದಾಗಬೇಕು. ಮುಖ್ಯವಾಗಿ ಬೇಡಿಕೆ ಇರುವ ಸಂಬಾರ ಬೆಳೆಗಳತ್ತ ಮನಸ್ಸು ಮಾಡಬೇಕು.

* ಪ್ರತೀ ಕೃಷಿಕರು ತನ್ನ ತೋಟದ ಮಣ್ಣಿನ ಬಗ್ಗೆ ತಿಳಿದುಕೊಳ್ಳಿ. ತನ್ನ ತೋಟದ ಮಣ್ಣಿಗೆ ಸರಿಹೊಂದುವ ಸಸಿಯನ್ನೇ ಬೆಳೆಯಿರಿ. ಮಣ್ಣಿನ ಆರೋಗ್ಯವೇ ಸರಿಯಿಲ್ಲದ ಮೇಲೆ ಕಾಫಿ ಸಸಿಯ ಆರೋಗ್ಯ ಯಾವ ರೀತಿಯಲ್ಲಿ ಉತ್ತಮವಾಗಿರಲು ಸಾಧ್ಯ ?

* ಭೂಮಿಗೆ ಹೊದಿಕೆಯಂತೆ ಕಾಫಿ ತೋಟಗಳಲ್ಲಿ ತರಗೆಲೆಗಳು ಇರಲೇಬೇಕು. ಈ ತರಗೆಲೆಗಳೇ ಸೂಕ್ಷö್ಮ ಜೀವಿಗಳ ಉಗಮಕ್ಕೆ ಕಾರಣವಾಗಲಿದೆ. ಈ ಅಂಶವೇ ಕಾಫಿ ಸಸಿಗಳ ಪೋಷಕಾಂಶಗಳಾಗಿದೆ.

* ಕಳೆನಾಶಕವನ್ನು ಭೂಮಿಗೆ ಸಿಂಪಡಿಸುವುದಿಲ್ಲ ಎಂದು ಪ್ರತಿಯೋರ್ವರು ಪ್ರತಿಜ್ಞೆ ಮಾಡಲೇಬೇಕು. ಕಳೆನಾಶ ಮಾಡುವ ಬದಲಿಗೆ ಕಳೆ ನಿಯಂತ್ರಣ ಮಾಡುವತ್ತ ಕೃಷಿಕರು ಗಮನ ನೀಡಲೇಬೇಕು. ಕಳೆ ಹೆಚ್ಚಾಗಿ ಬರುತ್ತಿದ್ದರೆ ನಿಮ್ಮ ತೋಟದ ಮಣ್ಣಿನ ಆರೋಗ್ಯ ಉತ್ತಮವಾಗಿದೆ ಎಂದೇ ಅರ್ಥ.

* ಕಾಫಿ ಮಂಡಳಿ ನೀಡುವ ಅಂಗಾAಶ ಗಿಡಗಳನ್ನು ನೆಡುವುದು ಸೂಕ್ತ ಆಯ್ಕೆ. ನರ್ಸರಿಯಿಂದ ಸಸಿ ಖರೀದಿಸುವ ಮುನ್ನ ಸಾಕಷ್ಟು ಎಚ್ಚರಿಕೆ ವಹಿಸಿ. ಮುಖ್ಯವಾಗಿ ಪ್ರತೀ ಕೃಷಿಕನೂ ಸ್ವಂತ ನರ್ಸರಿ ರೂಪಿಸಿಕೊಳ್ಳುವುದು ಉತ್ತಮ ವಿಧಾನ.

* ಸಣ್ಣ ಗಿಡಗಳ ಆಯ್ಕೆ ಸಮರ್ಥನೀಯವಲ್ಲ. ೧೨ ಇಂಚು ಉದ್ದ, ೬ ಇಂಚು ಅಗಲದ ಬುಟ್ಟಿಯಲ್ಲಿರುವ ಸಸಿಗಳನ್ನು ನೆಡುವುದು ಅತ್ಯುತ್ತಮ ಆಯ್ಕೆ.

* ಕಾಫಿಗೆ ತಗುಲುವ ರೋಗಗಳು, ಕೀಟಭಾದೆಗಳ ಬಗ್ಗೆ ಸಕಾಲಿಕವಾಗಿ ಮಾಹಿತಿ ಪಡೆದುಕೊಳ್ಳುತ್ತಿರಬೇಕು. ಮುಂಜಾಗ್ರತೆ ವಹಿಸಿದ್ದೇ ಆದಲ್ಲಿ ಕಾಫಿ ಸಸಿಗಳನ್ನು ರೋಗ, ಕೀಟ ಮುಕ್ತಗೊಳಿಸಿ ನಿಶ್ಚಿಂತೆಯಿAದಿರಬಹುದು.

* ಕಾಫಿ ಕೃಷಿಕನಿಗೆ ತಾಳ್ಮೆ ಅತೀ ಮುಖ್ಯ. ಎಲ್ಲವೂ ಸಾಧ್ಯ ಎಂಬುದು ಮನಸ್ಸಿನಲ್ಲಿರಬೇಕು. ಆಗುವುದಿಲ್ಲ ಎಂದು ಕೈಕಟ್ಟಿಕುಳಿತರೆ ಯಾವುದೇ ಕೃಷಿಕನಿಗೂ ತೋಟ ನಿರ್ವಹಣೆ ಮಾಡಲಾಗದು. ಆಗದು ಎಂದು ಕೈಕಟ್ಟಿ ಕುಳಿತರೆ ಕಾಫಿ ತೋಟ ಮಾಡಲಾಗದು.

* ನಿಮ್ಮ ತೋಟದ ನಿಮ್ಮದೇ ಮಣ್ಣನ್ನು ಪ್ರೀತಿಸಿ...ಮಣ್ಣಿನ ಆರೋಗ್ಯ ಉತ್ತಮವಾಗಿದ್ದರೆ ಉತ್ತಮ ಇಳುವರಿ ಲಭಿಸಿ ಉತ್ತಮ ಆದಾಯ ಖಂಡಿತಾ. ಆ ಮೂಲಕ ಕೃಷಿಕನ ಆರೋಗ್ಯವೂ ಉತ್ತಮವಾಗಿರುತ್ತದೆ. ಅರ್ಥಾತ್ ಮಣ್ಣಿನ ಆರೋಗ್ಯದಲ್ಲಿಯೇ ಕೃಷಿಕನ ಆರೋಗ್ಯವೂ ಅವಲಂಭಿತವಾಗಿದೆ ಎಂಬುದನ್ನು ಮರೆಯದಿರಿ. - ಅನಿಲ್ ಹೆಚ್. ಟಿ.