ಪೊನ್ನಂಪೇಟೆ, ಡಿ. ೨೨: ಪೊನ್ನಂಪೇಟೆ ಅರಣ್ಯ ಮಹಾ ವಿದ್ಯಾಲಯದ ಒಳಾಂಗಣ ಕ್ರೀಡಾಂಗಣದಲ್ಲಿ, ಅಮ್ಮ ಕೊಡವ ಯೂತ್ ವಿಂಗ್ ವತಿಯಿಂದ ಆಯೋಜಿಸಲಾಗಿದ್ದ ಮೊದಲನೇ ವರ್ಷದ ಅಮ್ಮ ಕೊಡವ ಬ್ಯಾಡ್ಮಿಂಟನ್ ಪಂದ್ಯಾವಳಿಯು ಅತ್ಯಂತ ಯಶಸ್ವಿಯಾಗಿ ನಡೆಯಿತು.

ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕ್ರೀಡೆಯು ಜನಾಂಗದಲ್ಲಿ ಒಗ್ಗಟ್ಟು ಮೂಡಿಸುವುದರ ಜೊತೆಗೆ ಅರೋಗ್ಯವನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಕ್ರೀಡೆ ಎಂದ ಮೇಲೆ ಸೋಲು ಗೆಲುವು ಇದ್ದೇ ಇರುತ್ತದೆ. ಎಲ್ಲರೂ ಕ್ರೀಡಾ ಸ್ಫೂರ್ತಿಯಿಂದ ಭಾಗವಹಿಸಿ, ಪಂದ್ಯಾವಳಿಯ ಯಶಸ್ಸಿಗೆ ಸಹಕರಿಸಬೇಕು ಎಂದರು.

ರಾಜ್ಯ ಮಟ್ಟದ ಮಾಸ್ಟರ್ಸ್ ಈಜು ಸ್ಪರ್ಧೆಯ ಚಿನ್ನ ಹಾಗೂ ಬೆಳ್ಳಿಪದಕ ವಿಜೇತ ಹೆಮ್ಮಚ್ಚಿಮನೆ ಮಿಥಿ ಸೋಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪ್ರಥ್ಯು, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಜಿ. ಎಂ. ದೇವಗಿರಿ, ವೋಲ್ವೋ ಗ್ರೂಪ್ ಇಂಡಿಯಾದ ಡಿಜಿಎಂ ಬಾನಂಡ ಸುನೀತ್ ಇದ್ದರು.

ಪಂದ್ಯಾವಳಿ ವಿಜೇತರು : ಟೂರ್ನಮೆಂಟ್‌ನ ಪುರುಷರ ವಿಭಾಗದಲ್ಲಿ ಬಾನಂಡ ಸುನೀತ್ ಮತ್ತು ಚಿರಾಗ್ ಜೋಡಿ ಪ್ರಥಮ ಸ್ಥಾನ, ಪುತ್ತಾಮನೆ ಅನಿಲ್ ಪ್ರಸಾದ್ ಮತ್ತು ಚೀರಮ್ಮನ ಅಭಯ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು.

ಮಹಿಳೆಯರ ವಿಭಾಗದಲ್ಲಿ ಮನ್ನಕ್ಕಮನೆ ಸುಮಿತ್ ಮತ್ತು ನವ್ಯ ಜೋಡಿ ಪ್ರಥಮ, ಮನ್ನಕ್ಕಮನೆ ಸೌಮ್ಯ ಬಾಲು ಹಾಗೂ ದೀಕ್ಷಿತ್ ಜೋಡಿ ದ್ವಿತೀಯ ಸ್ಥಾನ ಪಡೆದುಕೊಂಡಿತು.ಮಕ್ಕಳ ವಿಭಾಗದಲ್ಲಿ ಪುತ್ತಾಮನೆ ತನಿಷ್ ಹಾಗೂ ಗ್ರಂಥ್ ಜೋಡಿ ಪ್ರಥಮ, ಮನ್ನಕ್ಕಮನೆ ವಜ್ರ ಮತ್ತು ಅಚ್ಚಿಯಂಡ ತನ್ಮಯಿ ಜೋಡಿ ದ್ವಿತೀಯ ಸ್ಥಾನ ಪಡೆದು ಕೊಂಡಿತು.

ಸಮಾರೋಪ ಸಮಾರಂಭ

ಈಜು ಪಟು ಹೆಮ್ಮಚ್ಚಿಮನೆ ಮಿಥಿ ಸೋಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅಖಿಲ ಅಮ್ಮ ಕೊಡವ ಸಮಾಜ ಅಧ್ಯಕ್ಷ ಬಾನಂಡ ಪೃಥ್ಯು, ೪ಆರನೇ ಪುಟಕ್ಕೆ

್ಕ

(ಮೊದಲ ಪುಟದಿಂದ) ರಾಷ್ಟಿçÃಯ ಮಾಜಿ ಹಾಕಿ ಆಟಗಾರ ಹೆಮ್ಮಚ್ಚಿಮನೆ ಸಂದೀಪ್ ಸೋಮಯ್ಯ, ಅಮ್ಮ ಕೊಡವ ವಿದ್ಯಾಭಿವೃದ್ಧಿ ಸಂಘದ ಖಜಾಂಚಿ ಮನ್ನಕ್ಕಮನೆ ಬಾಲಕೃಷ್ಣ, ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಈಶ್ವರ. ಕೆ. ಎ, ಕೊತೂರು ಶ್ರೀ ಕೃಷ್ಣ ಅಮ್ಮ ಕೊಡವ ಸಂಘದ ಹೆಮ್ಮಚ್ಚಿಮನೆ ಆಶಿತ್, ಕೋತೂರು ಅನ್ನಪೂರ್ಣೇಶ್ವರಿ ಮಹಿಳಾ ಸಂಘದ ಮಾಜಿ ಅಧ್ಯಕ್ಷೆ ಶ್ವೇತಾ ರವಿ ವಿಜೇತರಿಗೆ ಬಹುಮಾನ ವಿತರಿಸಿದರು.

ಈ ಸಂದರ್ಭ ಪಂದ್ಯಾವಳಿ ಸಂಯೋಜಕರಾದ ಪುತ್ತಾಮನೆ ಅನಿಲ್ ಪ್ರಸಾದ್, ಪುತ್ತಾಮನೆ ಯತೀಶ್, ಪುತ್ತಾಮನೆ ಪರ್ವತ್, ಅಮ್ಮಕೊಡವ ಯೂತ್ ವಿಂಗ್ ಸದಸ್ಯರು ಹಾಗೂ ಅಮ್ಮ ಕೊಡವ ಜನಾಂಗ ಬಾಂಧವರು ಹಾಜರಿದ್ದರು. ತೀರ್ಪುಗಾರರಾಗಿ ನೀಲ್ ನಾಚಪ್ಪ, ನಿಶಾಂತ್, ಅನಿರುದ್ಧ್, ಪವನ್, ವಿಷ್ಣು, ಜೈ ದೀಪ್, ಅನಿಲ್ ಪ್ರಸಾದ್, ಅಭಯ್ ಕಾರ್ಯನಿರ್ವಹಿಸಿದರು. ಪುತ್ತಾಮನೆ ವಿದ್ಯಾ ಜಗದೀಶ್ ಪ್ರಾರ್ಥಿಸಿ, ಸ್ವಾಗತಿಸಿದರು. ಪುತ್ತಾಮನೆ ಅನಿತಾ ಜೀವನ್ ವಂದಿಸಿ, ಪುತ್ತಾಮನೆ ಪೂಜಾ ಶರಣು ಹಾಗೂ ಹೆಮ್ಮಚ್ಚಿಮನೆ ಕಾವ್ಯ ಅಶ್ವಥ್ ಕಾರ್ಯಕ್ರಮ ನಿರೂಪಿಸಿದರು. -ಚನ್ನನಾಯಕ