ಮಡಿಕೇರಿ, ಡಿ. ೨೧: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ೨೧ನೇ ವಾರ್ಷಿಕ ಘಟಿಕೋತ್ಸವವು ಜನವರಿ ಕೊನೆಯ ವಾರದಲ್ಲಿ ನಡೆಸಲು ತೀರ್ಮಾನಿಸಲಾಗಿದ್ದು, ೨೦೧೩-೧೪ ಮತ್ತು ೨೦೧೪-೧೫ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು ಪದವಿ ಪೂರ್ಣಗೊಳಿಸಿರುವ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

೨೦೧೩-೧೪ನೇ ಮತ್ತು ೨೦೧೪-೧೫ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು (ಏಪ್ರಿಲ್/ ಮೇ-೨೦೨೪ ರವರೆಗೆ) ಉತ್ತೀರ್ಣಗೊಂಡಿರುವ ಬಿ.ಎ, ಬಿ.ಕಾಂ, ಬಿ.ಲಿಬ್.ಐ.ಎಸ್ಸಿ, ಬಿ.ಎಡ್ ಮತ್ತು ಬಿ.ಎಡ್ ಸ್ಪೆಷಲ್ ಸರ್ಟಿಫಿಕೇಟ್ ಕಾರ್ಯಕ್ರಮಗಳ ಸ್ನಾತಕ ಪದವಿ ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

೨೦೧೩-೧೪ ಮತ್ತು ೨೦೧೪-೧೫ನೇ ಶೈಕ್ಷಣಿಕ ಸಾಲಿನಲ್ಲಿ ಪ್ರವೇಶಾತಿ ಪಡೆದು (ಏಪ್ರಿಲ್/ ಮೇ-೨೦೨೪ ರವರೆಗೆ) ಉತ್ತೀರ್ಣಗೊಂಡಿರುವ ಎಲ್ಲಾ ಎಂ.ಎ, ಎಂ.ಕಾA, ಎಂ.ಬಿಎ, ಎಂ.ಎಡ್, ಎಲ್ಲಾ ಎಂ.ಎಸ್ಸಿ, ಎಂ.ಲಿಬ್.ಐ.ಎಸ್ಸಿ, ಪಿ.ಜಿ.ಡಿಪ್ಲೊಮಾ, ಕಾರ್ಯಕ್ರಮಗಳ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿರುವ ವಿದ್ಯಾರ್ಥಿಗಳು ಪದವಿ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ.

ದಂಡ ಶುಲ್ಕವಿಲ್ಲದೆ ಶುಲ್ಕ ಪಾವತಿಸಲು ಜನವರಿ ೧೦ ಕೊನೆಯ ದಿನ ಹಾಗೂ ರೂ. ೧೦೦ ದಂಡ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಜನವರಿ ೧೫ ಅಂತಿಮ ದಿನಾಂಕವಾಗಿರುತ್ತದೆ. ಘಟಿಕೋತ್ಸವ ನಡೆಯುವ ನಿಗದಿತ ದಿನಾಂಕ, ಸಮಯ ಮತ್ತು ಸ್ಥಳವನ್ನು ವಿಶ್ವವಿದ್ಯಾನಿಲಯದ ಅಧಿಕೃತ ಜಾಲತಾಣದಲ್ಲಿ ಪ್ರಕಟಿಸಲಾಗುತ್ತದೆ. ಘಟಿಕೋತ್ಸವ ಪ್ರಮಾಣ ಪತ್ರಕ್ಕೆ ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಕರಮುವಿಯ ಅಧಿಕೃತ ವೆಬ್‌ಸೈಟ್ ತಿತಿತಿ.ಞsoumಥಿsuಡಿu.ಚಿಛಿ.iಟಿ ನಲ್ಲಿ ಅರ್ಜಿ ಸಲ್ಲಿಸಬಹುದು.

ಹೆಚ್ಚಿನ ಮಾಹಿತಿಗೆ ಪ್ರಾದೇಶಿಕ ನಿರ್ದೇಶಕರು ಕರಾಮುವಿ ಮಡಿಕೇರಿ ಪ್ರಾದೇಶಿಕ ಕೇಂದ್ರ, ನಂ.೨೭ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣ, ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕ್ರೀಡಾಂಗಣ ಕಟ್ಟಡ, ಮಡಿಕೇರಿ-೫೭೧೨೦೧. ದೂ.ಸಂ. ೯೪೮೩೫೭೦೯೦೦, ೯೮೪೪೩೯೫೯೮೬, ೮೨೯೬೨೧೫೭೧೪, ೯೬೧೧೩೨೦೧೯೧, ೯೪೭೩೫೭೬೩೩೮ ನ್ನು ಸಂಪರ್ಕಿಸುವAತೆ ಕರಮುವಿ ಮಡಿಕೇರಿ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ತಿಳಿಸಿದ್ದಾರೆ.