ಕುಶಾಲನಗರ, ಡಿ. ೧೮: ಕುಶಾಲನಗರ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ಮತ್ತು ವಾಸವಿ ಕ್ಲಬ್ ಕೊಡಗು ಸಂಯುಕ್ತ ಆಶ್ರಯದಲ್ಲಿ ಕುಶಾಲನಗರ ವಾಸವಿ ಮಹಲ್ ಸಭಾಂಗಣದಲ್ಲಿ ಸಿದ್ಧ ಕಣ್ಣಿನ ಹನಿ ಕಾರ್ಯಕ್ರಮ ನಡೆಯಿತು. ಭದ್ರಾವತಿಯ ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಪಾರಂಪರಿಕ ಔಷಧಿ ಹನಿ ಕಣ್ಣಿಗೆ ಹಾಕುವ ಮೂಲಕ ಕಣ್ಣಿನ ಮೇಲೆ ಪೊರೆ ಬರುವುದನ್ನು ತಪ್ಪಿಸಲು, ಕಣ್ಣಲ್ಲಿ ಆಗಾಗ ನೀರು ಬರುತ್ತಿರುವುದು, ಕಣ್ಣು ಕೆಂಪಾಗುವುದು ಮತ್ತಿತರ ತೊಂದರೆ ಇರುವವರಿಗೆ ಈ ಔಷಧಿ ಬಳಸಬಹುದು ಎಂದು ಕಾರ್ಯಕ್ರಮ ಆಯೋಜಕರಾದ ಕೊಡಗು ವಾಸವಿ ಕ್ಲಬ್ ಅಧ್ಯಕ್ಷ ಮಂಜುನಾಥ್ ವಿ.ಆರ್. ಹೇಳಿದರು.

ಪ್ರತಿ ತಿಂಗಳ ೧೮ ರಂದು ಈ ಶಿಬಿರ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು. ಗುರುವಾರ ನಡೆದ ಶಿಬಿರದಲ್ಲಿ ಸುಮಾರು ೨೫೦ ಅಧಿಕ ಮಂದಿ ಪಾಲ್ಗೊಂಡಿದ್ದರು. ಕುಶಾಲನಗರದ ಆಯುರ್ವೇದ ವೈದ್ಯ ಡಾ. ಉದಯಕುಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಾಸವಿ ಕ್ಲಬ್ ಪ್ರಮುಖರಾದ ಚೇತನ್, ಅರ್ಜುನ್ ಗುಪ್ತ, ಸುಕನ್ಯಾ ಸುರೇಶ್, ನಾಗಮಣಿ, ದೀಪ್ತಿ ಚೇತನ್ ಮತ್ತಿತರರು ಇದ್ದರು.