ಮಡಿಕೇರಿ, ಡಿ. ೧೮: ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ೧೬ನೇ ವರ್ಷದ ಗನ್ ಕಾರ್ನಿವಲ್ - ತೋಕ್ ನಮ್ಮೆ ಮೂರ್ನಾಡಿನ ಕಾಫಿ ಕ್ಯಾಸಲ್ ಕೂರ್ಗ್ ರೆಸಾರ್ಟ್ನಲ್ಲಿ ನಡೆಯಿತು.

ಡಿಸೆಂಬರ್ ೧೮ ರಂದು ವಿಶ್ವರಾಷ್ಟ್ರ ಸಂಸ್ಥೆ ಘೋಷಿತ ಜಾಗತಿಕ ಅಲ್ಪಸಂಖ್ಯಾತರ ಹಕ್ಕುಗಳ ದಿನದಂದು ಸಿ.ಎನ್.ಸಿ ಪ್ರತಿವರ್ಷ ಈ ಆಚರಣೆ ನಡೆಸುತ್ತಾ ಬಂದಿದೆ. ಆಚರಣೆಯ ಅಂಗವಾಗಿ, ಪೂಜೆಗಾಗಿ ಬಂದೂಕುಗಳನ್ನು ಹೂವುಗಳಿಂದ ಅಲಂಕರಿಸಿ, ವಾಹನದಲ್ಲಿರಿಸಿ ದುಡಿಕೊಟ್ಟ್ ಪಾಟ್‌ನೊಂದಿಗೆ ಮೆರವಣಿಗೆ ನಡೆಸಲಾಯಿತು. ನಂತರ ಮಕ್ಕಳು, ಮಹಿಳೆಯರು ಮತ್ತು ಪುರುಷರಿಗಾಗಿ ಶೂಟಿಂಗ್ ಸ್ಪರ್ಧೆಗಳು ನಡೆದವು. ಆರಂಭದಲ್ಲಿ ನಂದಿನೆರವAಡ ನಿಶಾ ಅಚ್ಚಯ್ಯ ಅವರು ಬಾಚರಣಿಯಂಡ ಅಪ್ಪಣ್ಣ ವಿರಚಿತ ತೋಕ್‌ಪಾಟ್ ಹಾಡಿದರು. ಸಿ.ಎನ್.ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಆದಿಮ ಸಂಜಾತ ಆನಿಮಿಸ್ಟಿಕ್ ನಂಬಿಕೆಯ ಏಕಜನಾಂಗೀಯ ಕೊಡವರ ಧಾರ್ಮಿಕ ಸಂಸ್ಕಾರವಾದ ತೋಕ್ - ಗನ್ ಹಕ್ಕನ್ನು ಸಿಖ್ಖರ ಕಿರ್ಪಾಣ್ ಮಾದರಿಯಲ್ಲಿ ಸಂವಿಧಾನದ ೨೫-೨೬ ನೇ ವಿಧಿ ಪ್ರಕಾರ ಎಸೆನ್ಶಿಯಲ್, ರಿಲೀಜಿಯಸ್ ಅಕ್ಟಿವಿಟೀಸ್ ಆಕ್ಟ್ ನಡಿಯಲ್ಲಿ ಶಾಶ್ವತ ರಾಜ್ಯಾಂಗ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು. ೨೦೨೬-೨೭ರ ರಾಷ್ಟಿçÃಯ ಜನಗಣತಿಯಲ್ಲಿ ಕೊಡವರು ಎಂದೇ ಎಲ್ಲಾ ಕಾಲಂನಲ್ಲೂ ದಾಖಲಿಸಬೇಕು, ಇಲ್ಲದಿದ್ದರೆ ೨೦೨೯ರ ನಂತರ ನಮ್ಮ ವಿಶೇಷ ತೋಕ್ ಹಕ್ಕನ್ನು ಬಹುಸಂಖ್ಯಾತ ಸಮುದಾಯಗಳ ಸಮೀಕರಣದಿಂದ ನಮ್ಮ ಅಪೂರ್ವ ಮತ್ತು ಅಪರೂಪದ ಹೆಗ್ಗುರುತು ಹಾಗೂ ಎಲ್ಲಾ ಹಕ್ಕುಗಳನ್ನು ಕಳೆದುಕೊಳ್ಳುವ ಅಪಾಯವಿದೆ ಎಂದರು. ಜನಗಣತಿಯಲ್ಲಿ ಕೊಡವ ಎಂದೇ ದಾಖಲೀಕರಣಗೊಳ್ಳುವ ಮೂಲಕ ನಮ್ಮ ಭವಿಷ್ಯ ನಿರ್ಣಯಕ್ಕೆ ಬುನಾದಿ ಹಾಕಬೇಕೆಂದು ಅಭಿಪ್ರಾಯಪಟ್ಟರು.

ಬಂದೂಕು/ತೋಕ್ ಆದಿಮ ಸಂಜಾತ ಆನಿಮಿಸ್ಟಿಕ್ ನಂಬಿಕೆಯ ಏಕಜನಾಂಗೀಯ ಕೊಡವ ಕುಲದ ಧಾರ್ಮಿಕ-ಜನಾಂಗೀಯ ಸಂಸ್ಕಾರವಾಗಿದೆ. ತೋಕ್ ಕೊಡವರ ಪ್ರಾಚೀನ ಹೆಮ್ಮೆಯ ಹೆಗ್ಗುರುತು. ಪೂರ್ವಕಾಲದ ಸಂಪ್ರದಾಯದ ಆಚರಣೆಗಳು ಮತ್ತು ಜಾನಪದ ಕಾನೂನು ವ್ಯವಸ್ಥೆಗಳನ್ನು ಪ್ರದರ್ಶಿಸಲು ಮತ್ತು ಸಂರಕ್ಷಿಸಲು, ಸಿ.ಎನ್.ಸಿ ವಾರ್ಷಿಕವಾಗಿ ತೋಕ್ ನಮ್ಮೆ ಸಾರ್ವಜನಿಕ ಗನ್ ಕಾರ್ನಿವಲ್ ಅನ್ನು ಆಯೋಜಿಸುತ್ತ ಬಂದಿದೆ ಎಂದರು.

ನಿಶಸ್ತಿçÃಕರಣ ಕಾಯಿದೆ ಜಾರಿಗೆ ಬಂದಾಗಿನಿAದ, ಆದಿಮಸಂಜಾತ ಕೊಡವ ಜನಾಂಗವು ಶಸ್ತಾçಸ್ತçಗಳನ್ನು ಹೊಂದಲು ಪರವಾನಗಿಗಳನ್ನು ಪಡೆಯುವುದರಿಂದ ವಿನಾಯಿತಿ ಪಡೆದಿದೆ, ಇದು ಕಾಲಾನಂತರದಲ್ಲಿ ವಿವಿಧ ಆಡಳಿತಗಾರರಿಂದ ಗುರುತಿಸಲ್ಪಟ್ಟಿದೆ. ಭಾರತ ಸ್ವಾತಂತ್ರ‍್ಯ ಪಡೆದ ನಂತರ, ಭಾರತೀಯ ಶಸ್ತಾçಸ್ತç ಕಾಯಿದೆಯ ಸೆಕ್ಷನ್ ೩ ಮತ್ತು ೪ ರ ಅಡಿಯಲ್ಲಿ ಈ ವಿನಾಯಿತಿ ಮುಂದುವರೆಯಿತು. ಅದಾಗ್ಯೂ, ೧೯೫೬ ರಲ್ಲಿ ರಾಜ್ಯ ಮರುಸಂಘಟನೆ ಕಾಯಿದೆಯಡಿಯಲ್ಲಿ ಕೊಡಗು ರಾಜ್ಯವನ್ನು ಕರ್ನಾಟಕದಲ್ಲಿ ವಿಲೀನಗೊಳಿಸಿದ ನಂತರ, ಆಡಳಿತ ವರ್ಗವು ವಿವಿಧ ದುರುದ್ದೇಶಪೂರಿತ ತಂತ್ರಗಳ ಮೂಲಕ ನಮ್ಮ ಧಾರ್ಮಿಕ ಸಂಸ್ಕಾರವಾದ ತೋಕ್/ಬಂದೂಕು ಹಕ್ಕುಗಳನ್ನು ಅಪಾಯಕ್ಕೆ ತರಲು ಪ್ರಾರಂಭಿಸಿತು. ಹಳೇ ಮೈಸೂರಿನ ಪ್ರಬಲ ಸಮುದಾಯಗಳಿಂದ ಪ್ರಭಾವಿತವಾಗಿರುವ ಸರ್ಕಾರಿ ಅಂಗಗಳು ಕೊಡವ ಹಕ್ಕುಗಳನ್ನು ದುರ್ಬಲಗೊಳಿಸಲು ಸಂವಿಧಾನೇತರ ಶಕ್ತಿ ಕೇಂದ್ರಗಳನ್ನು ಬಳಸಿಕೊಂಡಿವೆ. ಅವರು ಕೊಡವ ಅಸ್ತಿತ್ವ ಮತ್ತು ಗುರುತನ್ನು ನಿರರ್ಥಕಗೊಳಿಸಲು ಮತ್ತು ಕಾನೂನುಬಾಹಿರಗೊಳಿಸಲು ಸಂಚು ನಡೆಸುತ್ತಿವೆ ಎಂದು ಆರೋಪಿಸಿದರು.

ಸಭೆಯಲ್ಲಿ ಕೊಡವರ ಗುರಿಗಳು ಮತ್ತು ಶಾಸನಬದ್ಧ ಹಕ್ಕೊತ್ತಾಯಗಳನ್ನು ಪರಿಗಣಿಸಬೇಕೆಂಬ ನಿರ್ಣಯ ಅಂಗೀಕರಿಸಲಾಯಿತು. ಅಲ್ಲದೇ ವಿಶ್ವದಲ್ಲೇ ಈ ವೈಶಿಷ್ಟ್ಯ ಪೂರ್ಣ ಕೊಡವ ಗನ್ ಕಾರ್ನಿವಲ್-ತೋಕ್ ನಮ್ಮೆಯನ್ನು ಕೇಂದ್ರ-ರಾಜ್ಯ ಸರ್ಕಾರಗಳು ಮಧ್ಯ-ಏಷ್ಯಾ ದೇಶಗಳಲ್ಲಿ ನಡೆಸುತ್ತಿರುವ ಸಾಂಪ್ರದಾಯಿಕ "ಬುಜಕಾಸಿ" ಉತ್ಸವದಂತೆ ನಡೆಸಲು ಉತ್ತೇಜನ ಮತ್ತು ಪ್ರೋತ್ಸಾಹ ನೀಡಬೇಕೆಂದು ಎನ್.ಯು.ನಾಚಪ್ಪ ಅವರು ಪ್ರತಿಪಾದಿಸಿದರು.

ಕೊಡವ ವಿಭೂಷಣ ಪ್ರಶಸ್ತಿಗೆ ಭಾಜನರಾದವರು

ಕಾರ್ಯಕ್ರಮದಲ್ಲಿ ಕೊಡವ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾಟಿಮಾಡ ಜಿಮ್ಮಿ ಅಣ್ಣಯ್ಯ - ಕಿಗ್ಗಟ್‌ನಾಡ್ ಹಿರಿಯ ನಾಗರೀಕರ ವೇದಿಕೆಯ ಅಧ್ಯಕ್ಷರು, ಕುಕ್ಕೇರ ಜಯ ಚಿಣ್ಣಪ್ಪ - ಹಿರಿಯ ಸಮಾಜ ಸೇವಕರು, ಜಮ್ಮಡ ಪ್ರೀತ್ ಅಯ್ಯಣ್ಣ - ಮೈಸೂರಿನಲ್ಲಿ ನೆಲೆಸಿರುವ ಹೆಸರಾಂತ ಪರ್ವತಾರೋಹಿ, ಬೊಟ್ಟಂಗಡ ಸವಿತಾ ಪೆಮ್ಮಯ್ಯ ತೆರಾಲು ಗ್ರಾಮದ ಸಾಮಾಜಿಕ ಕಾರ್ಯಕರ್ತೆ, ಅಪ್ಪಚ್ಚೀರ ರಮ್ಮಿ ನಾಣಯ್ಯ ಹಾಗೂ ರೀನಾ ನಾಣಯ್ಯ ಕೊಳಕೇರಿ - ಪ್ರತಿಕೂಲ ಪರಿಸ್ಥಿತಿಯಲ್ಲೂ ಸಿಎನ್‌ಸಿ ಗನ್ ಕಾರ್ನಿವಲ್‌ಗೆ ಹಲವಾರು ವರ್ಷಗಳಿಂದ ಆಶ್ರಯದಾತರು, ಕೋಳೇರ ರಾಜು ನರೇಂದ್ರ ನಡಿಕೇರಿ - ಅಂಜಿಗೇರಿ ನಾಡಿನ ಮುಚ್ಚಿ ಹೋದ ಬುದ್ರೋಡೆ ನಾಡ್ ಮಂದ್‌ಗೆ ಮರುಜೀವ ಕಲ್ಪಿಸಿದವರು, ಮೇದುರ ಪೂವಯ್ಯ - ಸೂರ್ಲಬ್ಬಿ ನಾಡಿನ ಹೆಸರಾಂತ ಕೊಡವ ಜಾನಪದ ಕಲಾತಜ್ಞರು, ಬೊಳ್ಳಿಮಾಡ ಲೆಫ್ಟಿನೆಂಟ್ ನಂಜಪ್ಪ - ನಿವೃತ್ತ ಸೇನಾಧಿಕಾರಿ ಹಾಗೂ ತಿತಿಮತಿಯ ಸಮಾಜ ಸೇವಕರು, ಬಾಚೆಟ್ಟಿರ ಮಿಟ್ಟು ಬೊಳ್ಯಪ್ಪ ಕಿಗ್ಗಾಲು - ನಿವೃತ್ತ ಕೃಷಿ ವಿಜ್ಞಾನಿಗಳು, ಬಟ್ಟಿರ ವೇಣು ನಾಚಪ್ಪ ಚೆಟ್ಟಳ್ಳಿ - ನಾಟಿ ವೈದ್ಯರು,

ತೋಕ್ ನಮ್ಮೆ ವಿಜೇತರು

ಗುಂಡು ಹೊಡೆಯುವ ಸ್ಪರ್ಧೆಯಲ್ಲಿ ನೆಲ್ಲಮಕ್ಕಡ ವಿವೇಕ್ ಮೊದಲ ಸ್ಥಾನ ಗಳಿಸಿದರಲ್ಲದೇ ಮ್ಯಾನ್ ಆಫ್ ದಿ ಇವೆಂಟ್ ಮೆಡಲ್‌ಗೆ ಭಾಜನರಾದರು. ಪುಗ್ಗೇರ ರಾಜೇಶ್, ಮಚ್ಚಂಡ ನೀಲ್ ಬೆಳ್ಯಪ್ಪ, ನೆಲ್ಲಮಕ್ಕಡ ವಿನೋದ್, ಮಚ್ಚಂಡ ನಾಣಯ್ಯ, ಮಂದಪAಡ ಮನೋಜ್, ಪುತ್ತರಿರ ನಂಜಪ್ಪ, ಮಚ್ಚಂಡ ಹ್ಯಾಪಿನ್, ಜಮ್ಮಡ ಪ್ರೀತ್ ಅಯ್ಯಪ್ಪ, ಮಂದಪAಡ ರಚನಾ ಮನೋಜ್, ಚೋಳಪಂಡ ಜ್ಯೋತಿ ನಾಣಯ್ಯ, ಪುತ್ತರಿರ ವನಿತಾ ಮುತ್ತಪ್ಪ, ಪುಲ್ಲೇರ ಸ್ವಾತಿ, ಬೊಟ್ಟಂಗಡ ಸವಿತಾ ಗಿರೀಶ್ ವಿಜೇತರಾದರು.

ಕಾರ್ಯಕ್ರಮದಲ್ಲಿ ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಲಿಯಂಡ ಮೀನಾ ಪ್ರಕಾಶ್, ಪುಲ್ಲೇರ ಸ್ವಾತಿ ಕಾಳಪ್ಪ, ಚೋಳಪಂಡ ಜ್ಯೋತಿ ನಾಣಯ್ಯ, ನಂದೇಟಿರ ಕವಿತಾ ಸುಬ್ಬಯ್ಯ, ಬೊಟ್ಟಂಗಡ ಸವಿತಾ ಪೆಮ್ಮಯ್ಯ, ಅರೆಯಡ ಸವಿತಾ ಗಿರೀಶ್, ಪಚ್ಚಾರಂಡ ಶಾಂತಿ ಪೊನ್ನಪ್ಪ, ಮಂದಪAಡ ರಚನಾ ಮನೋಜ್, ನಂದಿನೆರವAಡ ರೇಖಾ ನಾಚಪ್ಪ, ಬಿದ್ದಂಡ ಉಷಾ ದೇವಮ್ಮ, ಬೊಳ್ಳಚೆಟ್ಟಿರ ಜಯಂತಿ, ಕರವಂಡ ಸರಸು, ಅಪ್ಪಚ್ಚಿರ ರೀನಾ ನಾಣಯ್ಯ, ಅಚ್ಚಕಾಳೇರ ಕಿಶಾನ್ ಕಾರ್ಯಪ್ಪ, ಅಚ್ಚಕಾಳೇರ ಸವಿತಾ ನಾಣಯ್ಯ, ನಂದಿನೆರವAಡ ನಿಶಾ ಅಚ್ಚಯ್ಯ, ನಂದಿನೆರವAಡ ಬೀನಾ ಅಯ್ಯಣ್ಣ, ಮಚ್ಚಂಡ ನೀಲ್ ಬೆಳ್ಯಪ್ಪ, ಸರ್ವಶ್ರೀ ಕಲಿಯಂಡ ಪ್ರಕಾಶ್, ಬಾಚರಣಿಯಂಡ ಚಿಪ್ಪಣ್ಣ, ಬಡುವಂಡ ವಿಜಯ, ನಂದೇಟಿರ ರವಿ ಸುಬ್ಬಯ್ಯ, ನೆಲ್ಲಮಕ್ಕಡ ವಿವೇಕ್, ಬೊಳ್ಳಚೆಟ್ಟಿರ ಸುರೇಶ್, ಬೊಳ್ಳಚೆಟ್ಟಿರ ಪ್ರಕಾಶ್, ಅಪ್ಪಚ್ಚಿರ ರಮ್ಮಿ ನಾಣಯ್ಯ, ಕಾಟುಮಣಿಯಂಡ ಉಮೇಶ್, ಅಜ್ಜಿಕುಟ್ಟೀರ ಲೋಕೇಶ್, ಕಾಂಡೇರ ಸುರೇಶ್, ಚಂಬAಡ ಜನತ್, ಪುಲ್ಲೇರ ಕಾಳಪ್ಪ, ಬೇಪಡಿಯಂಡ ದಿನು, ತೋಲಂಡ ಸೋಮಯ್ಯ, ಕಿರಿಯಮಾಡ ಶರಿನ್, ನಂದಿನೆರವAಡ ವಿಜು, ಚೋಳಪಂಡ ನಾಣಯ್ಯ, ಅರೆಯಡ ಗಿರೀಶ್, ಬೊಟ್ಟಂಗಡ ಗಿರೀಶ್, ಬಾಚಮಾಡ ರಾಜಾ ಪೂವಣ್ಣ, ಮೇದುರ ಮಾದಪ್ಪ, ಮೇದುರ ಪೂವಯ್ಯ, ನಂದಿನೆರವAಡ ಅಯ್ಯಣ್ಣ, ಅಜ್ಜಿನಿಕಂಡ ಮಹೇಶ್ ನಾಚಯ್ಯ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು.