ಮಡಿಕೇರಿ, ಡಿ. ೧೬: ಬಾಟಾ ಕಂಪನಿ ಲಿಮಿಟೆಡ್‌ನ ಅಧಿಕೃತ ಶೋ ರೂಂ ನವೀಕರಣಗೊಂಡು ಪುತ್ತೂರಿನ ವರುಣ್ ಟ್ರೇಡಿಂಗ್ ಸಹಭಾಗಿತ್ವದಲ್ಲಿ ಮಡಿಕೇರಿ ನಗರದ ಚೌಕಿ ಮುಖ್ಯ ರಸ್ತೆಯಲ್ಲಿ ಶುಭಾರಂಭಗೊAಡಿದೆ. ಮಾಜಿ ಶಾಸಕ ಕೆ.ಜಿ ಬೋಪಯ್ಯ ಅವರು ಮಳಿಗೆ ಉದ್ಘಾಟಿಸಿದರು. ಮಾಜಿ ಎಂ.ಎಲ್.ಸಿ ವೀಣಾ ಅಚ್ಚಯ್ಯ, ಮೂಡಾ ಅಧ್ಯಕ್ಷ ಬಿ.ವೈ ರಾಜೇಶ್, ಬೆಂಗಳೂರಿನ ಸಹಕಾರ ಮಂಡಲ ಅಧ್ಯಕ್ಷ ಚಂದ್ರ ಕೋಲ್ಚಾರ್, ಬಾಟಾ ಸಂಸ್ಥೆ ಜನರಲ್ ಮ್ಯಾನೇಜರ್ ಮಹಮ್ಮದ್ ಹಾಗೂ ಇತರ ಅತಿಥಿಗಳು ಈ ಸಂದರ್ಭ ಹಾಜರಿದ್ದರು.