ವೀರಾಜಪೇಟೆ, ಡಿ.೧೪: ವೀರಾಜಪೇಟೆ ಬಳಿಯ ಕಾವಾಡಿ ಗ್ರಾಮದ ಮಾಚಿಮಂಡ ರತನ್ ಮತ್ತು ಅವರ ಮನೆಯ ನಾಲ್ಕು ಮಂದಿ ಆಸ್ತಿ ವಿಚಾರದಲ್ಲಿ ಮತ್ತು ಐನ್‌ಮನೆ ಕುಟುಂಬದವರಿಗೆ ಅನೇಕ ವರ್ಷಗಳಿಂದ ವೈಯುಕ್ತಿಕ ಸಭೆ ಸಮಾರಂಭಗಳಲ್ಲಿ ವಿನಾಕಾರಣ ಕಿರುಕುಳ ನೀಡುತ್ತಿರುವುದರಿಂದ ಪೊಲೀಸ್ ಇಲಾಖೆ ಅವರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಮಾಚಿಮಂಡ ಸರೋಜ ಅಪ್ಪಚ್ಚು ಅವರ ನೇತೃತ್ವದಲ್ಲಿ ಕುಟುಂಬದ ಸದಸ್ಯರುಗಳು ಇಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಲುಪಿಸುವಂತೆ ವೀರಾಜಪೇಟೆ ಡಿವೈಎಸ್‌ಪಿ ಮಹೇಶ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ದೂರು ಮನವಿ ಸಲ್ಲಿಸುವ ಸಂದರ್ಭ ಕಾವಾಡಿ ಮಾಚಿಮಂಡ ಐನ್ ಮನೆಯ ಮಾಚಿಮಂಡ ಕುಟುಂಬದ ಬಿ..ವಸಂತ, ಸುವಿನ್ ಗಣಪತಿ, ಪೆಮ್ಮಯ್ಯ ಗ್ರೇಸ್ಮಾ ಅಪ್ಪಯ್ಯ, ವಿಠಲ ಪೂವಯ್ಯ, ಪುಷ್ಪ ಪೂವಯ್ಯ, ನಂದು ಅಯ್ಯಣ್ಣ, ರಾಜ ನಾಚಪ್ಪ, ಉಮೇಶ್, ಬೊಪಣಿ, ಜಿ.ಮುತ್ತಪ್ಪ, ಸೇರಿದಂತೆ ಸುಮಾರು ೬೦ ಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.