ಮಡಿಕೇರಿ, ಡಿ. ೧೪: ಕರ್ನಾಟಕ ವಿಕಾಸ ರಂಗ ಕುಶಾಲನಗರ ತಾಲೂಕು ಘಟಕದ ಉದ್ಘಾಟನೆ ಹಾಗೂ ಪದಗ್ರಹಣ ಕಾರ್ಯಕ್ರಮ ತಾ. ೧೩ ರಂದು ನಡೆÀಯಿತು.

ಕುಶಾಲನಗರದ ಖಾಸಗಿ ಹಾಲ್‌ನ ಸಭಾಂಗಣದಲ್ಲಿ ಕರ್ನಾಟಕ ವಿಕಾಸ ರಂಗ ಸಂಘಟನೆಯ ರಾಜ್ಯ ಘಟಕದ ಉಪಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ಉದ್ಘಾಟಿಸಿದರು. ರಂಗ ಜಿಲ್ಲಾ ಘಟಕದ ಅಧ್ಯಕ್ಷ ವೈಲೇಶ ಪಿ.ಎಸ್. ಅಧ್ಯಕ್ಷತೆಯಲ್ಲಿ ಸಸಿಗೆ ನೀರೆರೆಯುವ ಮೂಲಕ ಚಾಲನೆ ನೀಡಲಾಯಿತು.

ಸಭೆಯಲ್ಲಿದ್ದ ಸಾಹಿತಿಗಳ ಸಮ್ಮುಖದಲ್ಲಿ ಪದಗ್ರಹಣ ಕಾರ್ಯಕ್ರಮ ನೆರವೇರಿತು. ಕರ್ನಾಟಕ ವಿಕಾಸ ರಂಗ ಕುಶಾಲನಗರ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ವಿಜಯಶ್ರೀ ಅನಿಲ್ ಕೆದಿಲಾಯ, ವಿನಯಾ ರಾಜಶೇಖರ್ ಪ್ರಧಾನ ಕಾರ್ಯದರ್ಶಿಯಾಗಿ, ದೀಪಿಕಾ ರಾಘವೇಂದ್ರ ಕಾರ್ಯದರ್ಶಿಯಾಗಿ, ಸುಬ್ರಮಣ್ಯ ಆಚಾರ್ ಮತ್ತು ಸರಳಾ ಸುಬ್ರಮಣ್ಯ ಉಪಾಧ್ಯಕ್ಷರಾಗಿ, ಮಮತಾ ರಾಜೇಶ್, ಅಮೃತಾ ನಿರ್ದೇಶಕರಾಗಿ ಮತ್ತು ಮಾಲಾಮೂರ್ತಿ ಎನ್. ಕೋಶಾಧಿಕಾರಿಯಾಗಿ ಪದಗ್ರಹಣ ಪ್ರಮಾಣವಚನ ಸ್ವೀಕರಿಸಿದರು.

ಕರ್ನಾಟಕ ವಿಕಾಸ ವೇದಿಕೆಯ ಜಿಲ್ಲಾ ಉಪಾಧ್ಯಕ್ಷೆ ನಳಿನಿ ಸತ್ಯನಾರಾಯಣ ಹಾಗೂ ಕಾರ್ಯದರ್ಶಿ ಹೇಮಂತ್ ಪಾರೇರಾ ಉಪಸ್ಥಿತರಿದ್ದರು. ದೀಪಿಕಾ ರಾಘವೇಂದ್ರ ನಿರೂಪಿಸಿ, ನಳಿನಿ ಹೆಚ್. ಆರ್. ಸ್ವಾಗತಿಸಿದರು. ಮಮತಾ ರಾಜೇಶ್ ಪ್ರಾರ್ಥಿಸಿ, ವಿನಯಾ ರಾಜಶೇಖರ್ ವಂದಿಸಿದರು.