ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಡಿ. ೧೧: ರಾಜ್ಯದಲ್ಲಿ ಮದ್ಯ ಮಾರಾಟದ ಪ್ರಮಾಣ ಈ ವರ್ಷ ಗಣನೀಯವಾಗಿ ಕುಸಿದಿದ್ದು, ವಿಶೇಷವಾಗಿ ಬಿಯರ್ ಮಾರಾಟ ಪಾತಾಳಕ್ಕೆ ಇಳಿದಿದೆ. ಅಬಕಾರಿ ಇಲಾಖೆಯ ಅಧಿಕೃತ ಅಂಕಿಅAಶಗಳ ಪ್ರಕಾರ, ೨೦೨೪ರಲ್ಲಿ ೨೭೮.೭೯ ಲಕ್ಷ ಬಾಕ್ಸ್ ಬಿಯರ್ ಮಾರಾಟವಾಗಿದ್ದರೆ, ೨೦೨೫ರಲ್ಲಿ (ಏಪ್ರಿಲ್‌ನಿಂದ ಅಕ್ಟೋಬರ್‌ವರೆಗೆ) ಕೇವಲ ೨೨೭.೬೨ ಲಕ್ಷ ಬಾಕ್ಸ್ಗಳಷ್ಟೇ ಮಾರಾಟವಾಗಿದೆ. ಅಂದರೆ, ಬರೋಬ್ಬರಿ ೫೧.೧೭ ಲಕ್ಷ ಬಾಕ್ಸ್ಗಳಷ್ಟು ಕುಸಿತ ದಾಖಲಾಗಿದೆ.

ಇದರಿಂದಾಗಿ ರಾಜ್ಯ ಸರ್ಕಾರದ ಪ್ರಮುಖ ಆದಾಯ ಮೂಲವಾದ ಅಬಕಾರಿ ಇಲಾಖೆಯಿಂದ ನಿರೀಕ್ಷೆಯಂತೆ ಆದಾಯ ಸಂಗ್ರಹ ಕೂಡ ಆಗುತ್ತಿಲ್ಲ ಎನ್ನಲಾಗಿದೆ.

ಕಳೆದ ೨೦೨೪ರ ನವೆಂಬರ್ ಅವಧಿಯವರೆಗೆ ೪೦೭ ಲಕ್ಷ ಬಾಕ್ಸ್ ಐಎಮ್‌ಎಲ್ ಮಾರಾಟ ಆಗಿದ್ದು, ಈ ವರ್ಷ ನವೆಂಬರ್ ಅಂತ್ಯದವರೆಗೆ ಮಾರಾಟ ೪೦೩ ಲಕ್ಷ ಬಾಕ್ಸ್ಗಳಿಗೆ ಇಳಿದಿದೆ. ಅಂದರೆ ೪.೩೬ ಲಕ್ಷ ಬಾಕ್ಸ್ಗಳ ಮಾರಾಟ ಕುಸಿದಿದೆ. ಸರ್ಕಾರ ಪದೇ ಪದೇ ಮದ್ಯದ ಬೆಲೆ ಏರಿಸುವುದರಿಂದ ಮದ್ಯಪ್ರಿಯರು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆಯೇ ಅನ್ನೋ ಪ್ರಶ್ನೆಯೂ ಎದುರಾಗಿದೆ. ಅಲ್ಲದೇ ಗಾಂಜಾ-ಅಫೀಮು ಹಾವಳಿಯಿಂದ ಮದ್ಯ ಮಾರಾಟ ಕುಸಿದಿದೆ ಎನ್ನಲಾಗುತ್ತಿದೆ.

ಸಿದ್ದರಾಮಯ್ಯ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ನಾಲ್ಕು ಬಾರಿ ಮದ್ಯದ ದರ ಏರಿಕೆ ಮಾಡಿದೆ. ೨೦೨೪-೨೫ನೇ ಸಾಲಿನಲ್ಲಿ ಅಬಕಾರಿ ಇಲಾಖೆಯು ೩೫.೫೩೦ ಕೋಟಿ ರೂ. ಆದಾಯ ಸಂಗ್ರಹಿಸಿತ್ತು. ಅದರ ಹಿಂದಿನ ಸಾಲಿನಲ್ಲಿ ೩೪,೬೨೯ ಕೋಟಿ ರೂ. ಸಂಗ್ರಹವಾಗಿತ್ತು. ಇನ್ನು ೨೦೨೫-೨೬ನೇ ಸಾಲಿನಲ್ಲಿ ೪೦,೦೦೦ ಕೋಟಿ ರೂಪಾಯಿ ಆದಾಯದ ಗುರಿಯನ್ನು ಅಬಕಾರಿ ಇಲಾಖೆ ನೀಡಲಾಗಿದೆ. ಆದರೆ ಈ ಗುರಿ ತಲುಪುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಕೊಡಗಿನಲ್ಲೂ ಮಾರಾಟ ಕುಸಿತ

ಪುಟ್ಟ ಜಿಲ್ಲೆ ಕೊಡಗು ಮದ್ಯ ಮಾರಾಟದಲ್ಲಿ ಮುಂದೆ ಇರುತ್ತಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಇಲ್ಲೂ ಮಾರಾಟ ಕುಸಿತವಾಗಿದೆ. ೨೦೨೩-೨೪ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ೫,೭೫,೧೧೭ ಬಾಕ್ಸ್ ಹಾಗೂ ೨೦೨೪- ೨೫ ರಲ್ಲಿ ೧೦,೭೨,೮೫೫ ಬಾಕ್ಸ್ ಮತ್ತು ನವೆಂಬರ್ ಅಂತ್ಯದವರೆಗೆ ೬,೬೫,೧೮೬ ಬಾಕ್ಸ್ ಭಾರತೀಯ ತಯಾರಿಕೆಯ ಮದ್ಯ (Iಒಐ) ಮಾರಾಟ ಆಗಿದೆ. ಕಳೆದ ವರ್ಷದ ಸರಾಸರಿ ೪ಐದನೇ ಪುಟಕ್ಕೆ

ಮದ್ಯ

ಮಾರಾಟ ತಿಂಗಳಿಗೆ ೯೦ ಸಾವಿರ ಬಾಕ್ಸ್ ಆಗಿದ್ದರೆ ೮ ತಿಂಗಳಿಗೆ ಸುಮಾರು ೭ ಲಕ್ಷ ಬಾಕ್ಸ್ ಗಳಿಗೂ ಅಧಿಕ ಮದ್ಯ ಮಾರಾಟ ಆಗಬೇಕಿತ್ತು. ಆದರೆ ಸರಾಸರಿಗಿಂತ ೬೦ ಸಾವಿರ ಬಾಕ್ಸ್ ಕಡಿಮೆ ಮಾರಾಟ ಆಗಿದೆ.

ಬಿಯರ್ ಮಾರಾಟ ಗಣನೀಯ ಕುಸಿತ ದಾಖಲಿಸಿದ್ದು, ೨೦೨೪-೨೫ನೇ ಸಾಲಿನಲ್ಲಿ ೭,೭೭,೨೫೪ ಬಾಕ್ಸ್ ಬಿಯರ್ ಮಾರಾಟ ಆಗಿದ್ದು, ಈ ಹಣಕಾಸು ವರ್ಷದಲ್ಲಿ ೮ ತಿಂಗಳು ಕಳೆದಿದ್ದರೂ ಮಾರಾಟ ೩,೨೬,೪೩೫ ಬಾಕ್ಸ್ ಮಾತ್ರ ಮಾರಾಟವಾಗಿದೆ. ಬಿಯರ್ ಮಾರಾಟದಲ್ಲಿ ಈವರ್ಷ ಶೇಕಡಾ ೩೫ ರಷ್ಟು ಕುಸಿತ ದಾಖಲಾಗುವ ಸಂಭವವಿದೆ.

ಮಾರಾಟ ಕುಸಿದಿದ್ದರೂ ಸರ್ಕಾರದ ಆದಾಯ ಕಡಿಮೆ ಆಗಿಲ್ಲ

ಕೊಡಗಿನಿಂದ ಕಳೆದ ಮೂರು ವರ್ಷಗಳಿಂದ ಅಬಕಾರಿ ಇಲಾಖೆ ಸರಾಸರಿ ಸುಮಾರು ೧೪ ಕೋಟಿ ರೂಪಾಯಿಗಳಷ್ಟು ಆದಾಯ ಪಡೆದಿದೆ. ೨೦೨೩-೨೪ ರಲ್ಲಿ ೧೪ ಕೋಟಿ, ೨೦೨೪-೨೫ ರಲ್ಲಿ ೧೪.೧ ಕೋಟಿ ಮತ್ತು ಈ ವರ್ಷದ ಮೊದಲ ೮ ತಿಂಗಳಿನಲ್ಲಿ ೧೩.೯ ಕೋಟಿ ರೂಪಾಯಿ ಆದಾಯ ಬಂದಿದೆ. ಈ ವರ್ಷ ಆದಾಯ ೧೬ ಕೋಟಿ ತಲುಪುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ. ದರ ಏರಿಕೆಯ ಕಾರಣದಿಂದಾಗಿ ಆದಾಯ ಕುಸಿತ ಆಗಿಲ್ಲ ಎಂದು ಅಬಕಾರಿ ಅಧಿಕಾರಿ ತಿಳಿಸಿದರು.

ರಾಜ್ಯದಲ್ಲಿ ಮಾದಕ ದ್ರವ್ಯ, ಗಾಂಜಾ ಬಳಕೆ ಹೆಚ್ಚಳ?

ಜನರು ಮದ್ಯ ಸೇವಿಸುವುದು ನಶೆಗಾಗಿ. ಹೀಗಾಗಿ ಸರ್ಕಾರ ಮದ್ಯದ ದರವನ್ನು ಏರಿಸುತ್ತಿದ್ದಂತೆ ಮದ್ಯ ಪ್ರಿಯರು ನಶೆಗಾಗಿ ಕಾನೂನುಬಾಹಿರವಾಗಿರುವ ಗಾಂಜಾ, ಎಂಡಿಎAಎ, ಅಫೀಮಿನ ಮೊರೆ ಹೋಗುತ್ತಿದ್ದಾರೆ ಎನ್ನಲಾಗಿದೆ. ಯುವ ಜನಾಂಗ ಇದೀಗ ನಶೆಗಾಗಿ ಸಿಂಥೆಟಿಕ್ ಡ್ರಗ್, ಗಾಂಜಾ ಬಳಕೆ ಮಾಡಲು ಪ್ರಾರಂಭಿಸಿದ್ದು, ಮದ್ಯ ಮಾರಾಟ ಕುಸಿತಕ್ಕೆ ಇದೂ ಒಂದು ಕಾರಣ ಎನ್ನಲಾಗಿದೆ.