ವೀರಾಜಪೇಟೆ, ಡಿ. ೧೧: ವೀರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕ ಡಾ. ಪ್ರಭು ಡಿ. ಅವರು ರಚಿಸಿದ ಚಂಪೂ ಸರೋವರದ ಭಕ್ತಿಯ ಅಲೆಗಳು ಮತ್ತು ಪರಿಶೋಧ ಎಂಬ ಎರಡು ಕೃತಿಗಳನ್ನು ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕ ಪ್ರೊ. ಮಣಿ ಪಿ. ಅವರು ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿದ ಡಾ. ಪಿ. ಮಣಿ ಅವರು, ಪ್ರಾಚೀನ ಸಾಹಿತ್ಯದಲ್ಲಿ ಆಗಮಿಕ ಕಾವ್ಯಗಳಲ್ಲಿ ಭಕ್ತಿಯೇ ಪ್ರಧಾನವಾದ ಅಂಶ. ಆದರೆ ಅಲೌಕಿಕ ಕಾವ್ಯಗಳಲ್ಲಿ ಭಕ್ತಿ ವಿಶೇಷವಾದುದು. ಈ ಕೃತಿಯಲ್ಲಿ ಭಕ್ತಿ ಪರಂಪರೆಯನ್ನು ಬೌದ್ಧ ಧರ್ಮದಿಂದ ಆರಂಭಿಸಿ ಹರಿದಾಸರವರೆಗೂ ಹಾದು ಬಂದ ಬಗೆಯನ್ನು ಅಮೂಲಾಗ್ರವಾಗಿ ತಿಳಿಸಲಾಗಿದೆ. ಪಂಪ, ಪೊನ್ನ, ರನ್ನರಂತಹ ಪ್ರಮುಖ ಕವಿಗಳ ಕಾವ್ಯಗಳನ್ನು ಉಲ್ಲೇಖಿಸಿ, ದಶವಿಧ ಭಕ್ತಿಯನ್ನು ವಿವರಿಸಿರುವುದು ಪರಿಣಾಮಕಾರಿಯಾದದ್ದು. ವಚನ ಮತ್ತು ಕೀರ್ತನ ಸಾಹಿತ್ಯವನ್ನು ಕಾವ್ಯದಲ್ಲಿ ಉಲ್ಲೇಖಿಸಿದ ಬಗ್ಗೆ ಶ್ಲಾಘಿಸಿದರು.

ಇವರ ಪರಿಶೋಧ ಕೃತಿಯು ಸಾಹಿತ್ಯ, ಇತಿಹಾಸ, ಸಂಸ್ಕöÈತಿಯ ಚಿಂತನೆಯೊAದಿಗೆ ಸಂಶೋಧನಾತ್ಮಕ ಲೇಖನಗಳಿಂದ ಕೂಡಿದೆ. ಈ ಕೃತಿಯು ಹಳಗನ್ನಡ ಕಾವ್ಯಗಳು ಮತ್ತು ಶಾಸನಗಳ ಪರಿಶೀಲನೆಯನ್ನು ಒಳಗೊಂಡಿದೆ ಎಂದು ಪ್ರೊ. ಮಣಿ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಪ್ರೊ. ಸರಸ್ವತಿ ಡಿ.ಕೆ. ಮಾತನಾಡಿ, ಸಾಹಿತ್ಯವಾಗಿ ಆಧಾರ ಸಹಿತವಾಗಿದೆ. ಸಂಶೋಧನಾ ನಿಷ್ಠೆಯನ್ನು ಮನಗಾಣಿಸುತ್ತವೆ, ಪರಿಶೋಧ ಕೃತಿಯು ಹಳಗನ್ನಡ ಕಾವ್ಯಗಳ ಸಂಶೋಧನೆ ಮಾಡುವವರಿಗೆ ಉಪಯುಕ್ತ ಕೃತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕಿ ಪ್ರೊ. ನೇತ್ರಾವತಿ, ಕನ್ನಡ ಪ್ರಾಧ್ಯಾಪಕ ಪ್ರೊ. ಬಸವರಾಜು ಕೆ. ಹಾಗೂ ಕನ್ನಡ ಸಹಾಯಕ ಪ್ರಾಧ್ಯಾಪಕ ರಘುರಾಜು ಆರ್. ಉಪಸ್ಥಿತರಿದ್ದರು.