ಶ್ರೀಮAಗಲ, ಡಿ. ೧೧: ಐದು ಗ್ರಾಮಗಳನ್ನು ಪ್ರತಿನಿಧಿಸುವ ಬಿರುನಾಣಿ ಗ್ರಾ. ಪಂ. ವ್ಯಾಪ್ತಿಯ ಮರೆನಾಡ್ ಕೊಡವ ಸಮಾಜ ಆಶ್ರಯದಲ್ಲಿ ನಡೆಯುತ್ತಿರುವ ಪುತ್ತರಿ ಕೋಲ್ಮಂದ್ ಕಾರ್ಯಕ್ರಮ ಸಾಂಪ್ರದಾಯಕವಾಗಿ ವಿಜೃಂಭಣೆಯಿAದ ನಡೆಯಿತು.
ನಾಡ್ ತಕ್ಕರಾದ ಕಾಯಪಂಡ, ಚಂಗಣಮಾಡ ಬೊಳ್ಳೇರ ಕುಟುಂಬದ ಪ್ರಮುಖರು ಮತ್ತು ಮುಖ್ಯ ಅತಿಥಿಗಳನ್ನು ದುಡಿ ಕೊಟ್ಟ್ ಪಾಟ್, ಒಡ್ಡೋಲಗ ಹಾಗೂ ತಳಿಯತಕ್ಕಿಬೊಳಕ್ ಮೂಲಕ ಮಂದ್ಗೆ ಕರೆತರಲಾಯಿತು. ನಂತರ ನಾಡ್ತಕ್ಕರಿಂದ ಮಂದ್ ಪುಡಿಪ ಕಾರ್ಯಕ್ರಮ. ನಂತರ ಪುತ್ತರಿ ಕೋಲಾಟ್ ನಡೆಯಿತು.
ಈ ಸಂದರ್ಭ ಮುಖ್ಯ ಅತಿಥಿ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ, ಸಹ ಖಜಾಂಚಿ ಮಲ್ಲೆಂಗಡ ಮುತ್ತಣ್ಣ ಅವರನ್ನು ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಚಿರಿಯಪಂಡ ಸುರೇಶ್ ನಂಜಪ್ಪ ಅವರು ಕೊಡವ ಸಂಸ್ಕೃತಿ ಆಚರಣೆ ಪರಂಪರೆಗಳನ್ನು ಬೆಳೆಸಬೇಕು, ನಮ್ಮ ಸಂಸ್ಕೃತಿಯನ್ನು ಎಂದಿಗೂ ನಿರ್ಲಕ್ಷ ಮಾಡದೆ ಬೆಳೆಸಿಕೊಂಡು ಹೋಗಬೇಕು. ಅಲ್ಪಸಂಖ್ಯಾತ ಜನಾಂಗವಾಗಿರುವ ಕೊಡವರು ಪ್ರತಿ ಹೆಜ್ಜೆಯಲ್ಲಿಯೂ ಬುದ್ಧಿವಂತಿಕೆ ಹಾಗೂ ರಾಜಕೀಯ ರಹಿತವಾಗಿ ಚಿಂತನೆಹರಿಸಿ ಜನಾಂಗವನ್ನು ಕಾಪಾಡಿಕೊಳ್ಳಬೇಕಾಗಿದೆ. ಇದರ ನಡುವೆ ಸಂಸ್ಕೃತಿಯ ಉಳಿಕೆಗೆ ಆಚರಣೆಗಳಿಗೆ ಬಹಳಷ್ಟು ಉತ್ತೇಜನ ನೀಡಬೇಕಾಗಿದೆ, ಇಂತಹ ಕಾರ್ಯಕ್ರಮಗಳಿಂದ ಸಂಸ್ಕೃತಿಗೆ ಜೀವಂತಿಗೆ ಬರಲಿದೆ ಎಂದು ಹೇಳಿದರು.
ಕೊಡವ ಜನಾಂಗದಲ್ಲಿ ದೈಹಿಕ ಸದೃಢತೆಗೆ ಪ್ರಾಮುಖ್ಯತೆ ನೀಡುತ್ತಿರುವುದು ಕಂಡುಬರುತ್ತದೆ, ಈ ಹಿನ್ನೆಲೆ ಹೆಚ್ಚಾಗಿ ಕ್ರೀಡೆಗೆ ಬೆಂಬಲ ವ್ಯಕ್ತವಾಗುತ್ತಿದೆ. ಜನಾಂಗದಲ್ಲಿ ಹಾಕಿ, ಕ್ರಿಕೆಟ್, ವಾಲಿಬಾಲ್ ಥ್ರೋಬಾಲ್, ಫುಟ್ಬಾಲ್, ಕಬಡ್ಡಿ, ಹಗ್ಗ ಜಗ್ಗಾಟ ಹೀಗೆ ಎಲ್ಲಾ ಟೂರ್ನಮೆಂಟ್ ನಡೆಸುವ ಮೂಲಕ ನಮ್ಮ ವೃತ್ತಿ ಜೀವನಕ್ಕೆ ಧಕ್ಕೆ ತಂದುಕೊಳ್ಳಬಾರದು. ಪ್ರತಿ ಕ್ರೀಡೆಯನ್ನು ಆಯೋಜಿಸುವ ಮೂಲಕ ಅದರಲ್ಲಿ ತೊಡಗಿಸಿಕೊಳ್ಳುವ ಮೂಲಕ ನಮ್ಮ ಅಭಿವೃದ್ಧಿಗೆ ತೊಂದರೆಯಾಗದAತೆ ಎಚ್ಚರ ವಹಿಸಬೇಕು. ಇದರಿಂದ ನಮ್ಮ ಕೆಲಸ ಕಾರ್ಯ ಬಿಟ್ಟು ನಮ್ಮ ಜೀವನ ಶೈಲಿಯೇ ತೊಂದರೆಗೆ ಸಿಲುಕಬಹುದು ಎಂದು ಹೇಳಿದ ಅವರು ಕ್ರೀಡಾ ಟೂರ್ನಮೆಂಟ್ಗಳಿಗೆ ಮಿತಿ ಬೇಕಾಗಿದೆ, ಆದರೆ ಸಂಸ್ಕೃತಿಯ ಉತ್ತೇಜಿಸುವ ಕಾರ್ಯಕ್ರಮಕ್ಕೆ ಹಾಗೂ ಸಂಸ್ಕೃತಿಯ ಆಚರಣೆಗಳಿಗೆ ಯಾವುದೇ ಮಿತಿ ಇರಬಾರದು, ಆದಷ್ಟು ಹೆಚ್ಚಾಗಿ ಕಾರ್ಯಕ್ರಮ ಆಗಬೇಕು ಎಂದು ಪ್ರತಿಪಾದಿಸಿದರು.
ಇತ್ತೀಚೆಗೆ ನೂತನ ಆಡಳಿತ ಮಂಡಳಿ ಬೆಂಗಳೂರು ಕೊಡವ ಸಮಾಜದಲ್ಲಿ ಅಸ್ತಿತ್ವಕ್ಕೆ ಬಂದಿದೆ, ಜನಾಂಗದ ಅಭಿವೃದ್ಧಿಗೆ ನಾವು ತೊಡಗಿಸಿಕೊಳ್ಳಲು ಸಂಕಲ್ಪ ಪಟ್ಟಿದ್ದು, ವಧು ವರ ಅನ್ವೇಷಣೆ ಸೇವೆಯನ್ನು ಫೆಬ್ರವರಿಯಲ್ಲಿ ದೊಡ್ಡದಾಗಿ ಕಾರ್ಯಕ್ರಮ ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ, ಹಾಗೆಯೇ ಬೆಂಗಳೂರು ಕೊಡವ ಸಮಾಜದಿಂದ ಜನಾಂಗಕ್ಕೆ ಒಳ್ಳೆಯದಾಗುವ ವಿಚಾರ ಯೋಜನೆಗಳನ್ನು ಮುಂದೆ ತರುತ್ತೇವೆ ಶಾಲೆ, ಕಾಲೇಜು, ವೃದ್ದಾಶ್ರಮಗಳನ್ನು ಈಗಾಗಲೇ ಕೊಡವ ಸಮಾಜಕ್ಕೆ ಮಂಜೂರು ಆಗಿರುವ ಏಳು ಎಕರೆ ಜಾಗದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಲಾಗುವುದು. ಹಾಗೆಯೇ ದಾನಿಗಳು ಮುಂದಕ್ಕೆ ಬಂದು ಜಾಗ ನೀಡಿದರೆ ಗೋಣಿಕೊಪ್ಪ ಹಾಗೂ ವಿರಾಜಪೇಟೆಗಳಲ್ಲಿಯೂ ಜನಾಂಗದ ಹಾಗೂ ಕೊಡಗಿನ ಜನರಿಗೆ ಉಪಯುಕ್ತವಾಗುವ ಯೋಜನೆಗಳನ್ನು ರೂಪಿಸುವ ಉದ್ದೇಶ ಇದೆ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಅವರು ಈ ಹಿಂದೆ ಕೊಡವ ಸಮಾಜ ಎಂದರೆ ಕಲ್ಯಾಣ ಮಂಟಪ ಎಂಬ ಭಾವನೆ ಇತ್ತು. ಆದರೆ ಇಂದು ಕೊಡವ ಸಮಾಜವನ್ನು ನೋಡುವ ದೃಷ್ಟಿ ಬದಲಾಗಿದೆ.ಇದು ನಮ್ಮ ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಯಾಗುತ್ತಿದೆ. ಇಂದು ಪೊನ್ನಂಪೇಟೆ ಮತ್ತು ಬಾಳುಗೋಡು ಕೊಡವ ಸಮಾಜದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಒಂದು ಹಬ್ಬದಂತೆ ಆಚರಣೆಯಾಗುತ್ತಿದೆ. ಕೊಡವ ಸಂಸ್ಕೃತಿಗೆ ಅಲ್ಲಿ ಉತ್ತೇಜನ ದೊರೆಯುತ್ತಿದೆ. ಕೊಡವ ಸಾಂಸ್ಕೃತಿಕ ಕೇಂದ್ರವಾಗಿ ಕೊಡವ ಸಮಾಜಗಳನ್ನು ಅಭಿವೃದ್ಧಿ ಪಡಿಸಬೇಕಾಗಿದೆ ಎಂದರು. ವೇದಿಕೆಯಲ್ಲಿ ನಾಡ್ ತಕ್ಕಾಮೆ ಕುಟುಂಬದ ಕಾಯಪಂಡ ಅಯ್ಯಪ್ಪ, ಚಂಗಣಮಾಡ ಮೊಣ್ಣಪ್ಪ, ಬೊಳ್ಳೇರ ನಾಣಯ್ಯ, ಮರೆನಾಡು ಕೊಡವ ಸಮಾಜದ ಉಪಾಧ್ಯಕ್ಷ ಕಾಯಪಂಡ ಸುನಿಲ್, ಕಾರ್ಯಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನಿತ ಗಪ್ಪಣ್ಣ, ಖಜಾಂಚಿ ಬೊಟ್ಟಂಗಡ ರವೀಂದ್ರ ವಿಶು, ನಿರ್ದೇಶಕರುಗಳಾದ ಚೋನಿರ ಮಧು, ಕಾಯಪಂಡ ಸತು, ಬಲ್ಯಮೀದೇರಿರ ರಾಜ, ಕುಪ್ಪಣಮಾಡ ಪ್ರೀತಮ್, ಕಾಳಿಮಾಡ ರಶಿಕ, ಗುಡ್ಡಮಾಡ ಸುಧೀರ್, ಕರ್ತಮಾಡ ಸುನಂದ, ಕರ್ತಮಾಡ ಗಿರೀಶ್, ಮೀದೇರಿರ ಕವಿತಾ, ಕುಪ್ಪಣಮಾಡ ಬೇಬಿ ನಂಜಮ್ಮ ಹಾಗೂ ಜಾಗ ದಾನಿ ಕಾಯಪಂಡ ಪೆಮ್ಮಯ್ಯ, ಸಮಾಜದ ಮಾಜಿ ಅಧ್ಯಕ್ಷ ಕುಪ್ಪುಡೀರ ಪೊನ್ನು ಮುತ್ತಪ್ಪ ಹಾಜರಿದ್ದರು. ಮಂದ್ನಲ್ಲಿ ಕೊಡವ ಜಾನಪದ ಕಲೆ, ಪುತ್ತರಿ ಕೋಲಾಟ್, ಉಮ್ಮತಾಟ್, ಕಪ್ಪೆಯಾಟ್, ಪರೆಯ ಕಳಿ, ಹಲವು ನೃತ್ಯ ಪ್ರದರ್ಶನ ಗಮನ ಸೆಳೆಯಿತು.
-ಅಣ್ಣೀರ ಹರೀಶ್ ಮಾದಪ್ಪ