ಮುಳ್ಳೂರು ಡಿ. ೧೧: ಸಮೀಪದ ಬೆಸೂರು ಜೈ ಭೀಮ್ ವಿಪ್ಲವ ಯುವ ಬಳಗದ ವತಿಯಿಂದ ಬೆಸೂರು ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಪರಿ ನಿರ್ವಾಣ ದಿನವನ್ನು ಆಚರಿಸಲಾಯಿತು.

ಬೆಸೂರು ಅಂಬೇಡ್ಕರ್ ಭವನದಿಂದ ಬೆಸೂರು ವೃತ್ತದವರೆಗೆ ಮೆರವಣಿಗೆ ಮೂಲಕ ನಡೆಯಿತು. ನಂತರ ವೇದಿಕೆ ಕಾರ್ಯಕ್ರಮದಲ್ಲಿ ಕ್ರಾಂತಿಗೀತೆಯೊAದಿಗೆ ಕಾರ್ಯಕ್ರಮವನ್ನು ಪ್ರಾರಂಭ ಮಾಡಲಾಯಿತು. ದಿನದ ಮಹತ್ವ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ದಾಂತ ಮತ್ತು ವಿಚಾರಧಾರೆ ಕುರಿತು ಕೊಡ್ಲಿಪೇಟೆ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯ ಪ್ರಾಂಶುಪಾಲ ಡಾ. ಕೆ. ಗುರುಸ್ವಾಮಿ ಮಾತನಾಡಿದರು.

ಬೆಸೂರು ಗ್ರಾಮದ ಗಣೇಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ರಂಗಸ್ವಾಮಿ, ಬಹುಜನ ಚಳುವಳಿಯ ಪ್ರಮುಖರಾದ ದೇವರಾಜು, ಕೆಂಚೇಶ್ವರ, ಜನಾರ್ಧನ್, ಗೋವಿಂದ್ ರಾಜ್, ಪ್ರಸನ್ನ ಪ್ರಮುಖರಾದ ವೇದಕುಮಾರ್, ಜಯರಾಜ್, ಕೆ.ಕೆ. ಶಿವಣ್ಣ, ಟೈಲರ್ ಧರ್ಮಪ್ಪ, ಕಿರಣ್ ಕುಮಾರ್, ಯೋಗೇಂದ್ರ, ಕೆ.ಪಿ. ರಮೇಶ್ ಜೈ ಭೀಮ್ ವಿಪ್ಲವ ಯುವ ಬಳಗದ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.