ಐಗೂರು, ಡಿ. ೧೦ :. ಆದಿಶಕ್ತಿ ಮಹಾತಾಯಿ ಹಾಗೂ ಪಾಷಾಣ ಮೂರ್ತಿ ಅಮ್ಮನವರ ದೇವಾಲಯದಲ್ಲಿ ಮಧ್ಯಂತರ ಜಾತ್ರಾ ಮಹೋತ್ಸವು ಭಕ್ತಿಪೂರ್ವಕವಾಗಿ ಸಂಪನ್ನಗೊAಡಿತು. ದೈವ ನರ್ತಕರಾದ ಸುಳ್ಯದ ಬೊಳಿಮಜೆಲಿನ ಜಯರಾಮ್ ತಂಡದವರ ಕೋಲಗಣಗಳ ದೈವ ನರ್ತನಗಳು, ವಾದ್ಯಗೋಷ್ಠಿಯು ಭಕ್ತರ ಮನ ತಣಿಸಿತು. ಭಂಡಾರದ ಆಗಮನದೊಂದಿಗೆ ಪ್ರಾರಂಭವಾದ ಪೂಜೆಯಲ್ಲಿ ಭಕ್ತರು ಪಾಷಾಣಮೂರ್ತಿ, ಕಲ್ಕುಡ ದೈವ, ಧೂಮಾವತಿ ಮತ್ತು ಕೊರಗಜ್ಜ ದೈವಗಳ ಆಶೀರ್ವಚನ ಪಡೆದರು. ಭಂಡಾರದ ನಿರ್ಗಮನದ ನಂತರ ಅನ್ನಸಂತರ್ಪಣೆಯೊAದಿಗೆ ಉತ್ಸವಕ್ಕೆ ತೆರೆ ಎಳೆಯಲಾಯಿತು. ಉತ್ಸವದಲ್ಲಿ ದೈವದರ್ಶಿ ಎಸ್.ಪಿ. ಆನಂದ ಪೂಜಾರಿ, ದೇವಾಲಯದ ಅರ್ಚಕರು ಮತ್ತು ಗ್ರಾಮಸ್ಥರು ಭಾಗವಹಿಸಿದ್ದರು.