ಸೋಮವಾರಪೇಟೆ, ಡಿ.೧೦: ಮರದ ನಾಟಾಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಾಹನವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಹೊಸಳ್ಳಿ ಗ್ರಾಮದಲ್ಲಿ ವಶಪಡಿಸಿಕೊಂಡಿದ್ದಾರೆ.

ಹುದುಗೂರು ಅರಣ್ಯ ವಲಯ ವ್ಯಾಪ್ತಿಯಲ್ಲಿ ಬಿಲ್ವಾರ ಮರದ ಹತ್ತು ನಾಟಾಗಳನ್ನು ಟಿಪ್ಪರ್‌ನಲ್ಲಿ ಸಾಗಿಸುತ್ತಿರುವಾಗ ಕಾರ್ಯಾಚರಣೆ ನಡೆದಿದೆ. ಮೂವರು ಆರೋಪಿಗಳು ತಪ್ಪಿಸಿಕೊಂಡಿದ್ದಾರೆ. ವಾಹನ ಮತ್ತು ಮರವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಆರೋಪಿಗಳಾದ ಹೊಸಳ್ಳಿ ಗ್ರಾಮದ ಅನುಜಿತ್, ಅಜಿತ್, ತಣ್ಣೀರುಹಳ್ಳ ಗ್ರಾಮದ ನೂತನ್ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ಶೈಲೇಂದ್ರ ಕುಮಾರ್, ಡಿಆರ್‌ಎಫ್‌ಓ ಬಿ.ಎಸ್. ಚಂದ್ರೇಶ್, ಗಸ್ತುಪಾಲಕ ರವಿಕುಮಾರ್ ಉಪ್ಪಾರ್ ಕಾರ್ಯಾಚರಣೆ ನಡೆಸಿದ್ದಾರೆ.