ಮಡಿಕೇರಿ, ಡಿ.೯ : ಕೊಡಗು ವಿದ್ಯಾಲಯದಲ್ಲಿ ಜಿಲ್ಲಾ ಮಟ್ಟದ ಅಂತರಶಾಲಾ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್ ೨೦೨೫-೨೬ ನಡೆಯಿತು. ೮೦ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿದರು.

ಜಿಲ್ಲಾ ಟೇಬಲ್ ಟೆನ್ನಿಸ್ ಅಸೋಸಿಯೇಷನ್ ಅಧ್ಯಕ್ಷ ಮಲ್ಲೇಂಗಡ ರಚನ್ ಪೊನ್ನಪ್ಪ ದೀಪ ಬೆಳಗಿಸಿ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಟೇಬಲ್ ಟೆನ್ನಿಸ್ ಕ್ರೀಡೆ ಶಿಸ್ತು, ಏಕಾಗ್ರತೆ ಮತ್ತು ಕ್ರೀಡಾತ್ಮಕತೆಯನ್ನು ಬೆಳೆಸುವ ಕ್ರೀಡೆಯಾಗಿದೆ ಎಂದು ರಚನ್ ಪೊನ್ನಪ್ಪ ಹೇಳಿದರು. ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಿಸಿದ ಶಾಲಾ ಆಡಳಿತ ಮಂಡಳಿ ನಿರ್ದೇಶಕ ಗುರುದತ್ ಸಿ. ಎಸ್. ಟೇಬಲ್ ಟೆನ್ನಿಸ್ ಮನಸ್ಸಿನ ಏಕಾಗ್ರತೆ ಮತ್ತು ಗಮನವನ್ನು ವೃದ್ಧಿಸುವ ಕ್ರೀಡೆ ಎಂದು ತಿಳಿಸಿದರು. ಟೇಬಲ್ ಟೆನ್ನಿಸ್ ಟ್ರೆöÊನಿಂಗ್ ಅಕಾಡೆಮಿಯ ಸಂಚಾಲಕ ಹರಿಶಂಕರ್ ಸೇರಿದಂತೆ ಅತಿಥಿಗಳಿಗೆ ಗೌರವ ಸಲ್ಲಿಸಲಾಯಿತು. ಕೊಡಗು ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ರವಿ ಪಿ. ಶಾಲಾ ನಿರ್ವಹಣಾ ಮಂಡಳಿ, ಶಿಕ್ಷಕರು, ಪೋಷಕರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಜರಿದ್ದರು.

ಫಲಿತಾಂಶಗಳು

೧೪ ವರ್ಷದೊಳಗಿನ ವಿದ್ಯಾರ್ಥಿನಿಯರ ಸಿಂಗಲ್ಸ್ ವಿಭಾಗ (ಸಿಂಗಲ್ಸ್ ) - ಪ್ರಥಮ- ಅಮೃತಾ ನೀಲಮ್ಮ (ಕೊಡಗು ವಿದ್ಯಾಲಯ), ದ್ವಿತೀಯ - ಸಾಧನಾ ಕಾವೇರಮ್ಮ (ಕೊಡಗು ವಿದ್ಯಾಲಯ)

೧೪ ವರ್ಷದೊಳಗಿನ ವಿದ್ಯಾರ್ಥಿಗಳ ಸಿಂಗಲ್ಸ್ ವಿಭಾಗ - ಪ್ರಥಮ ದೇವಾರ್ಯ ಎಂ. ವೈ. (ಮೂರ್ನಾಡು ಎಜ್ಯೂಕೇಶನಲ್ ಸೊಸೈಟಿ ಮೂರ್ನಾಡು), ದ್ವಿತೀಯ- ಗಗನ್ ಎಚ್. ಎಸ್. (ಮೋರಾರ್ಜಿ ದೆಸಾಯಿ ವಸತಿ ಶಾಲೆ ಕೂಡಿಗೆ)

೧೮ ವರ್ಷದೊಳಗಿನ ವಿದ್ಯಾರ್ಥಿನಿಯರ ಸಿಂಗಲ್ಸ್ ವಿಭಾಗ - ಪ್ರಥಮ - ಶೀತಲ್ ಎಂ. ಎ. (ಮೋರಾರ್ಜಿ ದೇಸಾಯಿ ವಸತಿ ಶಾಲೆ ಕೂಡಿಗೆ), ದ್ವಿತೀಯ - ಆದ್ಯಾ ಗಂಗಮ್ಮ (ಕೊಡಗು ವಿದ್ಯಾಲಯ)

೧೬ ವರ್ಷದೊಳಗಿನ ವಿದ್ಯಾರ್ಥಿಗಳ ಸಿಂಗಲ್ಸ್ ವಿಭಾಗ - ಪ್ರಥಮ - ಅವನೀಶ್ ಕೃಷ್ಣ ಜಿ.ಹೆಚ್.

(ಕೊಡಗು ವಿದ್ಯಾಲಯ), ದ್ವಿತೀಯ ಶಿಶಿರ ಜಿ.ಎಸ್. (ಸರ್ಕಾರಿ ಜೂನಿಯರ್ ಕಾಲೇಜು, ಮಡಿಕೇರಿ )

೧೪ ವರ್ಷದೊಳಗಿನ ಡಬಲ್ಸ್ ವಿಭಾಗ - ಪ್ರಥಮ- ಶಶಾಂಕ್ ಎಚ್.ಎಂ. ಮತ್ತು ಗಗನ್ ಎಚ್.ಎಸ್. (ಮೋರಾರ್ಜಿ ದೇಸಾಯಿ ವಸತಿ ಶಾಲೆ ಕೂಡಿಗೆ.), ದ್ವಿತೀಯ - ನಿರಂಜನ್ ಎನ್. ಮಚ್ಚು ಫೆಲಿಕ್ಸ್ ರೋನಾಲ್ಡ್ ಆರ್. (ಕೊಡಗು ವಿದ್ಯಾಲಯ)

೧೮ ವರ್ಷದೊಳಗಿನ ವಿದ್ಯಾರ್ಥಿನಿಯರ ಡಬಲ್ಸ್ ವಿಭಾಗ - ಪ್ರಥಮ - ಶೀತಲ್ ಎಂ.ಎ. ಮತ್ತು ಪ್ರಕೃತಿ ಎಸ್.ಪಿ. (ಮೋರಾರ್ಜಿ ದೇಸಾಯಿ ವಸತಿ ಶಾಲೆ, ಕೂಡಿಗೆ), ದ್ವಿತೀಯ - ಆದ್ಯಾ ಗಂಗಮ್ಮ ಮತ್ತು ಅಮೃತಾ ನೀಲಮ್ಮ (ಕೊಡಗು ವಿದ್ಯಾಲಯ)

೧೬ ವರ್ಷದೊಳಗಿನ ಬಾಲಕರ ಡಬಲ್ಸ್ ವಿಭಾಗ - ಪ್ರಥಮ - ಗಗನ್ ಎಸ್. ಮತ್ತು ಕೌಶಿಕ್ ಕೆ. (ಸರ್ಕಾರಿ ಜೂನಿಯರ್ ಕಾಲೇಜು ಮಡಿಕೇರಿ), ದ್ವಿತೀಯ - ಶಿಶಿರ ಜಿ.ಎಸ್. ಮತ್ತು ಆರೋನ್ ಎಂ.ವೈ. (ಸರ್ಕಾರಿ ಜೂನಿಯರ್ ಕಾಲೇಜು, ಮಡಿಕೇರಿ).