ಗೋಣಿಕೊಪ್ಪಲು, ಡಿ. ೯ : ನೂತನವಾಗಿ ಅಸ್ತಿತ್ವಕ್ಕೆ ಬಂದ ಕರೋಕೆ ಕೂರ್ಗ್ ಕ್ಲಬ್ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಇಲ್ಲಿನ ಪ್ಲಾಂರ‍್ಸ್ ಕ್ಲಬ್ ಸಭಾಂಗಣದಲ್ಲಿ ರೆಟ್ರೋ ಮ್ಯೂಸಿಕ್ ನೆವರ್ ಡೈಸ್’ ಎಂಬ ಘೋಷವಾಕ್ಯದಲ್ಲಿ ವಿನೂತನ ಕಾರ್ಯಕ್ರಮ ನಡೆಯಿತು. ಕೊಡಗು ಸೇರಿದಂತೆ ಮೈಸೂರು ಭಾಗದ ವೈದ್ಯರು, ವಕೀಲರು, ಶಿಕ್ಷಕರು ಒಳಗೊಂಡAತೆ ಕಲಾವಿದರು ನೀಡಿದ ಗಾಯನ ಕಾರ್ಯಕ್ರಮ ಜನಮನ ರಂಜಿಸಿತು.

ಕಾಫಿ ಬೆಳೆಗಾರರಾದ ಮಾಯಮುಡಿಯ ಚೆಪ್ಪುಡೀರ ರಾಧ ಅಚ್ಚಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಒತ್ತಡದ ಜೀವನದ ನಡುವೆ ಮನೋಲ್ಲಾಸ ಪಡೆಯಲು ಸಾಂಸ್ಕೃತಿಕವಾಗಿ ತೊಡಗಿಸಿಕೊಳ್ಳುವುದು ಸಹಕಾರಿಯಾಗುತ್ತದೆ ಎಂದರು.

ಕರೋಕೆ ಕೂರ್ಗ್ ಕ್ಲಬ್ ಸ್ಥಾಪಕ ಅಧ್ಯಕ್ಷ ಡಾ.ಶರತ್‌ಕುಮಾರ್ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಪ್ರತಿಭಾವಂತರಿದ್ದಾರೆ. ಆದರೆ, ಸೂಕ್ತ ವೇದಿಕೆಗಳಿಲ್ಲದೆ, ಪ್ರತಿಭೆಗಳು ಮಂಕಾಗುತ್ತಿವೆ. ಪ್ರತಿಯೊಬ್ಬರಲ್ಲಿಯೂ ಒಂದೊAದು ಪ್ರತಿಭೆ ಇರುವುದರಿಂದ ವೇದಿಕೆಗಳು ಸೃಷ್ಟಿಯಾಗಬೇಕು. ಉದ್ಯೋಗಸ್ಥರು ಸದಾ ಒತ್ತಡದಲ್ಲಿಯೇ ಜೀವನ ಕಳೆಯುತ್ತಿದ್ದಾರೆ. ಇಂತಹವರಿಗೆ ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಪ್ರತಿಭೆಗಳನ್ನು ಹೊರ ತರುವ ನಿಟ್ಟಿನಲ್ಲಿ ಕೊಡಗಿನಲ್ಲಿ ಪ್ರಥಮ ಬಾರಿಗೆ ಕರೋಕೆ ಕೂರ್ಗ್ ಕ್ಲಬ್ ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬೆಳೆಗಾರರಾದ ಸಣ್ಣುವಂಡ ಸುಭಾಶ್, ಸಂಚಾಲಕ ಪೊನ್ನೋಲತಂಡ ಕಿರಣ್, ವೈದ್ಯರು ಗಳಾದ ಡಾ.ಕುಲದೀಪ್, ಡಾ.ಜೀವನ್, ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.. ಶಿಕ್ಷಕಿ ಶಾಂತೆಯAಡ ಟೀನಾ ಮಾಚಯ್ಯ ಸ್ವಾಗತಿಸಿ, ವಂದಿಸಿದರು.

ರAಜಿಸಿದ ಮಿಮಿಕ್ರಿ ಗೋಪಿ

ಪ್ರಖ್ಯಾತ ಹಾಸ್ಯ ನಟ, ಮಿಮಿಕ್ರಿ ಕಲಾವಿದ ಗೋಪಿ ಅವರಿಂದ ಪ್ರಸ್ತುತಗೊಂಡ ಮಿಮಿಕ್ರಿ ಪ್ರದರ್ಶನ ಜನರನ್ನು ರಂಜಿಸಿತು. ಕನ್ನಡ ಸಿನಿಮಾ ನಟರು, ರಾಜಕಾರಣಿಗಳ ಧ್ವನಿಯನ್ನು ಅನುಕರಿಸಿ ನಗೆಗಡಲಿನಲ್ಲಿ ತೇಲುವಂತೆ ಮಾಡಿದರು.