ನಾಪೋಕ್ಲು, ಡಿ. ೭: ಮದೆ ಗ್ರಾಮದ ಅವಂದೂರು ಪುರಾತನ ಪ್ರಸಿದ್ಧ ಶ್ರೀ ಕೃಷ್ಣ ದೇವಾಲಯ ಪುನರ್ ನಿರ್ಮಾಣಗೊಳ್ಳುತ್ತಿದ್ದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಶಾಸಕ ಎ.ಎಸ್. ಪೊನ್ನಣ್ಣ ಅವರು ಒಂದು ಲಕ್ಷ ರೂಪಾಯಿಯ ಚೆಕ್ ಅನ್ನು ತಮ್ಮ ವೈಯಕ್ತಿಕ ಧನ ಸಹಾಯವಾಗಿ ನೀಡಿದರು.
ದೇವಾಲಯಕ್ಕೆ ಭೇಟಿ ನೀಡಿದ ಶಾಸಕರು, ನಿರ್ಮಾಣ ಕಾಮಗಾರಿ ವೀಕ್ಷಿಸಿ ಬಳಿಕ ದೇವಸ್ಥಾನ ಸಮಿತಿಯವರ ಸನ್ಮಾನ ಸ್ವೀಕರಿಸಿ ತಮ್ಮ ವೈಯಕ್ತಿಕ ಧನ ಸಹಾಯವಾಗಿ ರೂ. ೧ ಲಕ್ಷ ಕೊಡುಗೆ ನೀಡಿದರು.
ಬಳಿಕ ದೇವಸ್ಥಾನದ ಪ್ರಮುಖರ ಮನವಿಗೆ ಸ್ಪಂದಿಸಿದ ಶಾಸಕರು, ಸರಕಾರದ ಕಡೆಯಿಂದ ದೇವಸ್ಥಾನ ಅಭಿವೃದ್ಧಿಗೆ ಸಾಧ್ಯವಾದಷ್ಟು ಅನುದಾನ ಕೊಡಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಚಂದ್ರ ಪ್ರಕಾಶ್, ಕಾರ್ಯದರ್ಶಿ ಸುಗುಣ ಕುಮಾರ್, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಸೂರಜ್ ಹೊಸೂರು, ಪಟ್ಟಡ ದೀಪಕ್, ಕಾಳೇರಮ್ಮನ ಕುಮಾರ್, ಕೇಟೋಳಿ ಮೋಹನ್ ರಾಜ್, ಕಡ್ಯದ ಕಿಶೋರ್, ಕೆ.ಎ. ಇಸ್ಮಾಯಿಲ್, ಎಂ.ಹೆಚ್. ಅಬ್ದುಲ್ ರೆಹಮಾನ್, ದೇವಾಲಯದ ಅರ್ಚಕ ದಿನೇಶ್ ಭಟ್ ದೇವಾಲಯ ಹಾಗೂ ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.