ಕಣಿವೆ, ಡಿ. ೫: ವಿಶ್ವದಲ್ಲಿಯೇ ಸುಂದರವಾದ ಕನ್ನಡ ಭಾಷೆಯ ಸಾಹಿತ್ಯ, ಸಂಗೀತ ಹಾಗೂ ಕಲೆಯನ್ನು ಕನ್ನಡ ನೆಲದಲ್ಲಿನ ಪ್ರತಿಯೊಬ್ಬರು ತಮ್ಮ ಉಸಿರಲ್ಲಿ ಉಸಿರಾಗಿಸಿ ಅನುಸರಿಸುವ ಮೂಲಕ ಕನ್ನಡ ಭಾಷೆಯನ್ನು ಇನ್ನಷ್ಟು ಶ್ರೀಮಂತಗೊಳಿಸಬೇಕೆAದು ತುಮಕೂರಿನ ಹಿರಿಯ ಸಾಹಿತಿ, ಗಮಕ ವಿದ್ವಾನ್ ಎಸ್.ಜಿ. ಸಿದ್ದರಾಮಯ್ಯ ಕರೆ ನೀಡಿದರು.

ಕುಶಾಲನಗರದ ಸರ್ಕಾರಿ ಇಂಜಿನಿಯರಿAಗ್ ಕಾಲೇಜಿನಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಹೃದಯದ ಹಾಗೂ ಕರುಳಿನ ಭಾಷೆಯಾಗಬೇಕು. ಜಗತ್ತಿನಲ್ಲಿನ ಅನೇಕ ಭಾಷೆಗಳ ಪೈಕಿ ಕನ್ನಡದಷ್ಟು ಸುಂದರವಾದ ಭಾಷೆ ಮತ್ತೊಂದಿಲ್ಲ. ದ.ರಾ. ಬೇಂದ್ರೆ, ನಾ. ಕಸ್ತೂರಿ, ಬಿ.ಎಂ. ಶ್ರೀಕಂಠಯ್ಯ, ಡಿ.ವಿ. ಗುಂಡಪ್ಪ ಮೊದಲಾದವರು ಅನ್ಯ ಭಾಷಿಗರಾದರೂ ಕೂಡ ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದ ಪ್ರಾತಸ್ಮರಣೀಯರು ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ಕುಮಾರಸ್ವಾಮಿ ಮಾತನಾಡಿ, ಕನ್ನಡ ನಮ್ಮ ಬದುಕಿನ ಭಾಷೆಯಾಗಬೇಕು ಹಾಗೂ ಈ ನೆಲಮೂಲ ಸಂಸ್ಕೃತಿಯಾಗಬೇಕೆAದು ಹೇಳಿದ ಅವರು, ಕನ್ನಡದ ಕವಿಗಳು ಹಾಗೂ ಸಾಹಿತಿಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ವಿದ್ಯಾರ್ಥಿಗಳಿಗೆ ಕನ್ನಡ ಪುಸ್ತಕಗಳನ್ನು ನೀಡಿದರು. ಜನಪದ ಕಲಾವಿದೆ ಪ್ರೇಮ ಕುಮಾರಸ್ವಾಮಿ ಕುವೆಂಪು ರಚಿತ ಗೀತೆಗಳನ್ನು ಹಾಡಿದರು. ದೂರದರ್ಶನ ಕಲಾವಿದ ಈಶ್ವರಯ್ಯ ಅವರು ಪ್ರಾಣಿಗಳ ಕುರಿತಾಗಿ ನಡೆಸಿಕೊಟ್ಟ ಮಿಮಿಕ್ರಿ ವಿದ್ಯಾರ್ಥಿಗಳ ಮನಸೂರೆಗೊಂಡಿತು. ಪ್ರಾಂಶುಪಾಲ ಡಾ. ಪರಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಸಿವಿಲ್ ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್. ಸತೀಶ್, ಮೆಕ್ಯಾನಿಕಲ್ ವಿಭಾಗದ ಮುಖ್ಯಸ್ಥ ಡಾ. ಸೀನಪ್ಪ, ಕಂಪ್ಯೂಟರ್ ವಿಭಾಗದ ಮುಖ್ಯಸ್ಥ ಡಾ. ರಂಗನಾಥ್, ಉಪನ್ಯಾಸಕರಾದ ಪೃಥ್ವಿರಾಜ್, ವೆಂಕಟೇಶ್, ಪ್ರಬಾರ ಕುಲಸಚಿವರಾದ ಹೆಚ್.ಎ. ರೂಪ ಇದ್ದರು. ವಿದ್ಯಾರ್ಥಿಗಳಿಂದ ಕನ್ನಡ ಗೀತೆಗಳ ಗಾಯನ ನಡೆಯಿತು. ವಿದ್ಯಾರ್ಥಿನಿ ಸಹನಾ ಹಾಗೂ ದಿವ್ಯಶ್ರೀ ನಿರೂಪಿಸಿದರು. ದೀಕ್ಷಾ ಹಾಗೂ ಮಾನಸ ನಾಡಗೀತೆ ಹಾಡಿದರು. ಆಶಾ ಸ್ವಾಗತಿಸಿದರು. ಅಭಿಲಾಶ್ ವಂದಿಸಿದರು.