ಮಡಿಕೇರಿ, ಡಿ. ೩: ಕಗ್ಗೋಡ್ಲು ಗ್ರಾಮದ ಹೂಕಾಡು ಶ್ರೀ ಕರಿಚಾಮುಂಡಿ (ಕೃಷ್ಣ ಚಾಮುಂಡಿ) ಶ್ರೀ ಕರಿಂಕುಟ್ಟಿ ಹಾಗೂ ಚೌಕಾರು ಗುಳಿಗ ದೈವಗಳ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ದೈವಗಳ ಕೋಲ ತಾ.೬ ರಿಂದ ತಾ.೮ ರವರೆಗೆ ನಡೆಯಲಿದೆ. ತಾ.೬ ರಂದು ಸಂಜೆ ೫ ಗಂಟೆಯಿAದ ಕೇರಳದ ಕನ್ನುತ್ತಿಲ್ಲತ್ ಮುರಳಿ ಕೃಷ್ಣ ನಂಬೂದರಿ ತಂತ್ರಿ ಅವರ ನೇತೃತ್ವದಲ್ಲಿ ವಾಸ್ತು ಪೂಜೆ, ವಾಸ್ತು ಬಲಿ, ಪ್ರಸಾದ ಶುದ್ದಿ, ಸ್ಥಳ ಶುದ್ದಿ, ಗಣಪತಿ ಹೋಮ ನಡೆಯಲಿದೆ. ರಾತ್ರಿ ೯ ಗಂಟೆಗೆ ಅನ್ನದಾನ ಇರಲಿದೆ. ತಾ.೭ ರಂದು ಬೆಳಿಗ್ಗೆ ೭:೩೦ಕ್ಕೆ ಗಣಪತಿ ಹೋಮವನ್ನು ಶ್ರೀ ದೈವದ ಮಧ್ಯಸ್ಥರಾದ ಬಾಬು ಯು. ಅವರ ನೇತೃತ್ವದಲ್ಲಿ ನಡೆಸಲಾಗುವುದು. ಮಧ್ಯಾಹ್ನ ೧೧:೨೨ ರಿಂದ ೧೨:೫೫ ರ ನಡುವೆ ಕರಿಚಾಮುಂಡಿ ಶ್ರೀ ಕರಿಂಕುಟ್ಟಿ ಹಾಗೂ ಚೌಕಾರು ಗುಳಿಗ ದೈವಗಳ ಪ್ರತಿಷ್ಠಾಪನೆ ನೆರವೇರಲಿದೆ. ಮಧ್ಯಾಹ್ನ ೧೨:೩೦ಕ್ಕೆ ಮಹಾಪೂಜೆ ಬಳಿಕ ಅನ್ನದಾನ ನೆರವೇರಲಿದೆ. ರಾತ್ರಿ ೮ ಗಂಟೆಗೆ ಶ್ರೀ ಚೌಕಾರು ಗುಳಿಗ ದೈವದ ಕೋಲ, ೯ ಗಂಟೆಗೆ ಅನ್ನದಾನ, ರಾತ್ರಿ ೧೧ ಗಂಟೆಯ ಬಳಿಕ ಶ್ರೀ ಕರಿಂಕುಟ್ಟು ದೈವದ ಕೋಲ ನಡೆಯಲಿದೆ. ತಾ.೮ ರಂದು ಮುಂಜಾನೆ ೩ ಗಂಟೆಯ ನಂತರ ಶ್ರೀ ಕರಿಚಾಮುಂಡಿ ದೈವದ ಕೋಲ ನಡೆಯಲಿದೆ. ಬೆಳಿಗ್ಗೆ ೯ ಗಂಟೆಗೆ ಹಗೇಲು ಸೇವೆ ಹಾಗೂ ಪ್ರಸಾದ ವಿತರಣೆ, ಮಧ್ಯಾಹ್ನ ೧೨ ಗಂಟೆಯ ಬಳಿಕ ಅನ್ನದಾನ ನೆರವೇರಲಿದೆ.