ಬಹುತೇಕ ಎಲ್ಲ ರಾಷ್ಟçಗಳೂ ಶತ್ರು ದಾಳಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲೆಂದು ರಕ್ಷಣಾಪಡೆ ಗಳನ್ನು ಹೊಂದಿ ಕೊಂಡಿರುತ್ತವೆ. ಅವುಗಳನ್ನು ಪ್ರಮುಖವಾಗಿ ಭೂಸೇನೆ, ನೌಕಾಸೇನೆ, ವಾಯುಸೇನೆ ಎಂದು ವಿಭಜಿಸಬಹುದು. ಭೂಸೇನೆಗೆ ಗಡಿಗಳ ಮೂಲಕ ನುಸುಳಿಬರುವ ವೈರಿಸೈನಿಕರನ್ನು ಬಡಿದೋಡಿಸುವ ಹೊಣೆಯನ್ನು ನೀಡಿದ್ದರೆ ವಾಯುಸೇನೆಗೆ ಆಕಾಶದ ಮೂಲಕ ವಿಮಾನವನ್ನು ಬಳಸಿಕೊಂಡು ದಾಳಿಗೈಯುವ ಶತ್ರುಗಳನ್ನು ತಡೆಯುವ ಹೊಣೆಯನ್ನು ನೀಡಲಾಗುತ್ತದೆ. ಅಂತೆಯೇ ನೌಕಾಸೇನೆಗೆ ಭಾರತದ ಕರಾವಳಿಗಾಗಿ ಪ್ರವೇಶಿಸಿ ಬರುವ ವೈರಿಗಳ ಸದೆಬಡಿಯಲು ನಿಯೋಜಿಸಲಾಗಿದೆ. ಹೀಗೆ ದೇಶರಕ್ಷಣೆಗಾಗಿ ರಕ್ಷಣಾವಿಭಾಗದ ಎಲ್ಲ ಪಡೆಗಳೂ ತಮ್ಮನ್ನು ತೊಡಗಿಸಿಕೊಳ್ಳುತ್ತವೆ. ಇದರಲ್ಲಿ ಭಾರತದ ನೌಕಾಸೇನೆಯು ಉಳಿದ ಸೇನೆಗಳಿಗೆ ಹೋಲಿಸಿದರೆ ತೀರ ಇತ್ತೀಚಿನದಾಗಿದ್ದು ಸಂಖ್ಯಾಬಲವೂ ಇದೆ. ಬಂಗ್ಲಾ ವಿಮೋಚನಾ ಸಮರದಲ್ಲಿ ನಮ್ಮ ನೌಕಾಪಡೆಯು ಪ್ರಮುಖ ಪಾತ್ರವನ್ನು ವಹಿಸಿ ಪಾಕಿಸ್ತಾನವನ್ನು ಮಣಿಸಿದುದರ ನೆನಪಿಗಾಗಿ ನಮ್ಮ ದೇಶದಲ್ಲಿ ಪ್ರತಿವರ್ಷವೂ ಡಿಸೆಂಬರ್ ನಾಲ್ಕನ್ನು ನೌಕಾದಿನವೆಂದು ಆಚರಿಸಲಾಗುತ್ತದೆ.

೧೯೭೧ರ ನವೆಂಬರ್ ೨೨ರಂದು ಪೂರ್ವ ಪಾಕಿಸ್ತಾನವು ಪಶ್ಚಿಮ ಪಾಕಿಸ್ತಾನದ ನೆರವಿನೊಂದಿಗೆ ಭಾರತದೊಂದಿಗೆ ಯುದ್ಧವನ್ನು ಘೋಷಿಸಿತು. ಆಗ ಭಾರತವು ತನ್ನ ರಕ್ಷಣಾಪಡೆಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದು ವಿಜಯವನ್ನು ಸಾಧಿಸಿತು. ಪಾಕಿಸ್ತಾನದ ಸೋಲಿಗೆ ಮುಖ್ಯ ಕಾರಣವೇ ನಮ್ಮ ಭಾರತದ ನೌಕಾಪಡೆ. ಅದು ೧೯೭೧ರ ಡಿಸೆಂಬರ್ ೪ರಂದು ಆಪರೇಶನ್ ಟ್ರೆöÊಡೆಂಡ್ ಹೆಸರಿನೊಂದಿಗೆ ಕರಾಚಿಯ ಬಂದರಿನತ್ತ ನುಗ್ಗಿ ಪಾಕಿಸ್ತಾನದ ಪಿಎನ್‌ಎಸ್ ಖೈಬರ್ ಎನ್ನುವ ವಿಶಾಲವಾದ ಯುದ್ಧನೌಕೆಯನ್ನು ಅರಬ್ಬೀ ಸsಮುದ್ರದಲ್ಲಿ ಮುಳುಗಿಸಿಬಿಟ್ಟಿತು. ಇದರೊಂದಿಗೆ ಮೈನ್ ಸ್ವೀಪರ್ ಡೆಕ್ಕಾ ಹಾಗೂ ಕಡಲಿನ ಹಡಗುಗಳಿಗೆ ಇಂಧನವನ್ನು ಪೂರೈಸುವ ಪಿ ಎನ್ ಎಸ್ ಕರ‍್ಮಾನಿಯನ್ನು ನಾಶಪಡಿಸಿತು. ಅಷ್ಟೇ ಅಲ್ಲ, ಹಲವಾರು ವರ್ತಕ ನೌಕೆಗಳೂ ಈ ದಾಳಿಯಿಂದ ನಾಶವಾದುವು. ಇದರಿಂದಾಗಿ ಪಾಕಿಸ್ತಾನದ ಕಾದಿರಿಸಿದÀ ಇಂಧನದ ಸಾಮರ್ಥ್ಯವು ಶೇಕಡಾ ೫೦ಕ್ಕೂ ಕಡಿಮೆ ಪ್ರಮಾಣದಲ್ಲಿ ಕುಸಿಯಿತು. ಇದರೊಂದಿಗೆ ಭಾರತದ ವಾಯುಪಡೆಯೂ ಈ ನೌಕಾಪಡೆಗೆ ಬೆಂಬಲವಾಗಿ ನಿಂತಾಗ ಪಾಕಿಸ್ತಾನದ ಸೇನೆಗಳಿಗೆ ನಡುಕವು ಹುಟ್ಟಿತು.

ಭಾರತದ ದ್ವಾರಕಾದ ಸಮೀಪದ ಒಕಾ ಬಂದರಿನಿAದ ಐಎನ್‌ಎಸ್ ನಿರ್ಘಾತ್, ನಿಪಾಟ್ ಮತ್ತು ವೀರ್ ಎನ್ನುವ ಭಾರತದ ಯುದ್ಧನೌಕೆಗಳು ಮಿಸೈಲ್‌ಗಳನ್ನು ಕರಾಚಿಯ ಬಂದರಿನತ್ತ ತೂರಿದಾಗ ಪಾಕಿಸ್ತಾನದ ಜಂಘಾಬಲವೇ ಉಡುಗಿಹೋಯಿತು. ಪಾಕಿಸ್ತಾನದ ಕರಾಚಿ ಬಂದರಿನ ಮೂಲಕವೇ ಅದಕ್ಕೆ ತೈಲವು ಆಮದಾಗುತ್ತಿದ್ದುದರಿಂದ ನಮ್ಮ ನೌಕಾಪಡೆಯ ದಾಳಿಯು ಅದರ ಇಂಧÀನ ಪೂರೈಕೆಯ ಹುಟ್ಟನ್ನಡಗಿಸಿಬಿಟ್ಟಿತು. ಆದರೂ ಛಲಬಿಡದ ತ್ರಿವಿಕ್ರಮನಂತೆ ಪಾಕ್ ಸೇನೆಯು ಭಾರತದ ಓಖಾದ ಬಂದರಿಗೆ ಶೆಲ್ ದಾಳಿಯನ್ನು ಕೊನೆಯ ಪ್ರಯತ್ನವೆಂದು ಮಾಡಿದರೂ ಅಷ್ಟರಲ್ಲಿ ಅಲ್ಲಿಂದ ಭಾರತೀಯ ನೌಕಾಪಡೆಯು ತನ್ನೆಲ್ಲ ನೌಕೆಗಳನ್ನು ಸುರಕ್ಷಿತ ತಾಣಕ್ಕೆ ಒಯ್ದುಬಿಟ್ಟಿತ್ತು. ಪಾಕಿಸ್ತಾನದ ಶೆಲ್ ಒಂದು ಆಕಸ್ಮಿಕವಾಗಿ ಅದರದ್ದೇ ನೌಕೆ ಜುಲ್ಫಗಾರ್‌ಅನ್ನು ಕೆಡಿಸಿಹಾಕಿದ್ದು ಪಾಕಿಸ್ತಾನಕ್ಕೆ ಗಾಯದ ಮೇಲೆ ಬರೆ ಎಳೆದಂತಾಯಿತು. ಈ ಹಿನ್ನೆಲೆಯಲ್ಲಿ ಅದು ಶರಣಾಗಲು ನಿರ್ಧರಿಸಿತು. ಪಾಕಿಸ್ತಾನದ ಕರಾಚಿ ಬಂದರಿನ ಮೇಲೆ ನಮ್ಮ ನೌಕಾಸೇನೆಯು ದಾಳಿಗೈದದ್ದು ಭಾರತದ ವಿಜಯಕ್ಕೆ ಕಾರಣವಾದುದರಿಂದ ಪ್ರತಿವರ್ಷವೂ ಡಿಸೆಂಬರ್ ನಾಲ್ಕನ್ನು ಭಾರತದ ನೌಕಾ ದಿನವನ್ನಾಗಿ ಆಚರಿಸಲಾಗುತ್ತದೆ.

ಭಾರತದ ನೌಕಾಪಡೆಯು ಆ ದಿನದಿಂದ ತನ್ನ ಬಾಹುಬಲವನ್ನು ನರ‍್ಮಡಿಗೊಳಿಸಿಕೊಂಡಿದೆ. ಇದೀಗ ಭಾರತದ ನೌಕಾಪಡೆಯಲ್ಲಿ ೧೩೦ ಯುದ್ಧನೌಕೆಗಳಿದ್ದು ಅದರಲ್ಲಿ ೧೭ ಡೀಸೆಲ್ ಸಬ್‌ಮೆರಿನ್‌ಗಳು, ೩ ನ್ಯೂಕ್ಲಿಯರ್ ಬಾಲಿÀಸ್ಟಿಕ್ ಮಿಸೈಲ್‌ಗಳೂ ಇವೆ, ನಮ್ಮ ನೌಕಾಪಡೆಯಲ್ಲಿ ೨೫೧ ವಿಮಾನಗಳೂ, ಹೆಲಿಕಾಪ್ಟರ್‌ಗಳೂ ಅಲ್ಲದೆ ಸುಮಾರು ಹದಿನೈದು ಸಾವಿರ ಸೈನಿಕರೂ ಇದ್ದಾರೆ. ವಿಕ್ರಮಾದಿತ್ಯ ಮತ್ತು ವಿಕ್ರಾಂತ್ ಹೆಸರಿನ ವಿಮಾನ ಸಾಗಣೆ ಹಡಗುಗಳು ನಮ್ಮಲ್ಲಿವೆ. ೧೯ ಸಬ್‌ಮೆರಿನ್‌ಗಳೂ ನಮ್ಮಲ್ಲಿವೆ. ಈಗ ಈ ನೌಕಾಪಡೆಯು ತನ್ನ ಬಾಹುಳ್ಯವನ್ನು ಮತ್ತಷ್ಟು ಬಲಪಡಿಸಿಕೊಳ್ಳಲು ಹಲವಾರು ಯೋಜನೆಗಳನ್ನು ಹಾಕಿಕೊಂಡಿದೆ. ತನ್ನ ನೌಕಾದಿನವನ್ನು ಆಚÀರಿಸಲು ಭಾರತವು ವಿಶಾಖಪಟ್ಟಣ ಮತ್ತು ಇತರ ಸ್ಥಳಗಳಲ್ಲಿ ಹಡಗುಗಳ ಚಾಲನೆಯ ಪರಿಣತಿಯನ್ನು ಅಂದು ಮೆರೆಯುವುದಲ್ಲದೆ, ತನ್ನಲ್ಲಿರುವ ಹೆಲಿಕಾಪ್ಟರ್ ಮತ್ತು ಇತರ ವಿಮಾನಗಳ ಕಾರ್ಯಾಚರಣೆಯ ಸಾಮರ್ಥ್ಯವನ್ನು ಪ್ರದರ್ಶನ ಮಾಡುವುದು, ಹುತಾತ್ಮ ಸೈನಿಕರ ಸಮಾಧಿಗಳಿಗೆ ಮಾಲಾರ್ಪಣೆಯನ್ನು ಮಾಡುವುದು, ಇತರ ಸೇನೆಗಳ ಸಹಭಾಗಿತ್ವದಲ್ಲಿ ಜಂಟಿಕೌಶಲವನ್ನು ಮೆರೆಯುವುದು ಮೊದಲಾದವನ್ನು ಆಯೋಜಿಸುತ್ತದೆ. ಅದರೊಂದಿಗೆ ಅಂದು ನೌಕಾಪಡೆಯ ವಾದ್ಯವನ್ನು ನುಡಿಸುವುದು, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಡುವುದು, ವಸ್ತುಪ್ರದರ್ಶನ, ವಿಮಾನಗಳ ಹಾರಾಟದಲ್ಲಿ ಕಸರತ್ತನ್ನು ತೋರುವುದು ಮೊದಲಾದುವನ್ನು ಮಾಡಿ ನೌಕಾದಳವು ದೇಶದ ರಕ್ಷಣೆಗೆ ಹೇಗೆ ತನ್ನನ್ನು ತೊಡಗಿಸಿಕೊಳ್ಳುತ್ತದೆ ಎಂಬುದನ್ನು ಪ್ರದರ್ಶಿಸಲಾಗುತ್ತದೆ. ಒಟ್ಟಿನಲ್ಲಿ ಗಾತ್ರವು ಸಣ್ಣದಾದರೂ ಕೀರ್ತಿಮಾತ್ರ ಬಹಳ ಹಿರಿದು ಎನ್ನುವ ನುಡಿಯಂತೆ ಭಾರತದ ನೌಕಾಸೇನೆಯು ಇದೀಗ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ದೇಶದ ಕರಾವಳಿಯ ಮೂಲಕ ನುಸುಳಲೆತ್ನಿಸುವ ವೈರಿಗಳ ಪ್ರಯತ್ನವನ್ನು ವಿಫಲಗೊಳಿಸುತ್ತದೆ.

-ಸಾರ್ಜೆಂಟ್ ಕಿಗ್ಗಾಲು ಎಸ್. ಗಿರೀಶ್,

ಮೂರ್ನಾಡು,

ಮೊ: ೯೧೪೧೩೯೫೪೨೬