ಕುಶಾಲನಗರ, ಡಿ. ೨ : ಹನುಮ ಜಯಂತಿ ಅಂಗವಾಗಿ ಕುಶಾಲನಗರದಲ್ಲಿ ಅಲಂಕೃತ ವಿವಿಧ ವಿನ್ಯಾಸಗಳ ನವ ಮಂಟಪಗಳ ಮೆರವಣಿಗೆಯೊಂದಿಗೆ ಅದ್ದೂರಿಯ ಶೋಭಾ ಯಾತ್ರೆ ನಡೆಯಿತು.
ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ಆಂಜನೇಯ ಸೇವಾ ಸಮಿತಿ ಆಶ್ರಯದಲ್ಲಿ ೪೦ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಜೊತೆಗೆ ಹನುಮ ಜಯಂತಿ ದಶಮಂಟಪಗಳ ಸಮಿತಿಯ ನೇತೃತ್ವದಲ್ಲಿ ಕುಶಾಲನಗರ ಮತ್ತು ಸುತ್ತಮುತ್ತ ವ್ಯಾಪ್ತಿಯ ಒಟ್ಟು ೮ ಮಂಟಪಗಳು ನೆರೆದ ಸಾವಿರಾರು ಸಂಖ್ಯೆಯ ಹನುಮ ಭಕ್ತರ ಮತ್ತು ಸಾರ್ವಜನಿಕರ ಮನರಂಜಿಸಿದವು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಆಶ್ರಯದಲ್ಲಿ ತರಬೇತಿ ಪಡೆದ ಮಕ್ಕಳು ಮಹಿಳೆಯರಿಂದ ಕುಣಿತ ಭಜನೆ ಮೆರವಣಿಗೆಗೆ ಶೋಭೆ ತಂದವು.
ಹನುಮ ಜಯಂತಿ ಅಂಗವಾಗಿ ಕುಶಾಲನಗರ ಆಂಜನೇಯ ದೇವಸ್ಥಾನದಲ್ಲಿ ಬೆಳಿಗ್ಗೆ ಪಂಚಾಮೃತ ಅಭಿಷೇಕ ನಡೆಯಿತು. ದೇವರಿಗೆ ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಿತು.
ದೇವಾಲಯದ ಪ್ರಧಾನ ಅರ್ಚಕ ಡಾ. ರಾಧಾಕೃಷ್ಣ ಭಟ್ ಅವರ ನೇತೃತ್ವದಲ್ಲಿ ಮಯೂರ ಭಟ್ ಮತ್ತು ಅರ್ಚಕರ ತಂಡದಿAದ ಪೂಜಾ ವಿಧಿ ವಿಧಾನಗಳು ನಡೆದವು.
ಶ್ರೀ ರಾಮಾಂಜನೇಯ ಉತ್ಸವ ಸಮಿತಿ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಶ್ರೀ ಆಂಜನೇಯ ಸೇವಾ ಸಮಿತಿ ವತಿಯಿಂದ ಅಧ್ಯಕ್ಷ ವಿ.ಡಿ. ಪುಂಡರಿಕಾಕ್ಷ ಕಾರ್ಯದರ್ಶಿ ಆರ್ ರಾಜೀವ್ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಸಂಜೆ ಅಲಂಕೃತ ಮಂಟಪದಲ್ಲಿ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ನಡೆಯಿತು. ರಥ ಬೀದಿಯ ಮೂಲಕ ಆಗಮಿಸಿದ ಭವ್ಯ ಮಂಟಪ ಗಣಪತಿ ದೇವಾಲಯ ಬಳಿ ಬಂದು ಮುಖ್ಯ ರಸ್ತೆಯಲ್ಲಿ ಬೈಚನಹಳ್ಳಿ ತನಕ ಸಾಗಿ ಮಾರಿಯಮ್ಮ ದೇವಾಲಯ ಬಳಿ ಪೂಜೆ ಸಲ್ಲಿಸಿ ನಂತರ ಹಿಂತಿರುಗಿತು. ಶೋಭಾ ಯಾತ್ರೆಯಲ್ಲಿ ಯುವತಿಯರು ಯುವಕರು, ಹನುಮ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ರಾಮಾಂಜನೇಯ ಉತ್ಸವ ಸಮಿತಿಯ ಅಧ್ಯಕ್ಷ ವಿ.ಎಚ್. ಪ್ರಶಾಂತ್, ೪ಐದನೇ ಪುಟಕ್ಕೆ (ಮೊದಲ ಪುಟದಿಂದ) ಉಪಾಧ್ಯಕ್ಷ ನವನೀತ್ ಪೊನ್ನೇಟಿ, ಟಿ. ವಿನು ಪ್ರಧಾನ ಕಾರ್ಯದರ್ಶಿ ಕೆ.ವಿ. ಅನುದೀಪ್, ಕೆ.ಎಲ್. ಚಂದ್ರಶೇಖರ್, ಶರತ್, ಹರೀಶ್ ಮತ್ತು ಸಮಿತಿಯ ಪ್ರಮುಖರು ಇದ್ದರು. ಮಡಿಕೇರಿ ವಿಧಾನಸಭಾ ಕ್ಷೇತ್ರ ಶಾಸಕ ಡಾ. ಮಂತರ್ ಗೌಡ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಸಂಜೆ ಕುಶಾಲನಗರ ಹೆಚ್ಆರ್ಪಿ ಕಾಲೋನಿಯಿಂದ ಅಂಜನಿಪುತ್ರ ಸೇವಾ ಸಮಿತಿಯ ಮಂಟಪ ಸಮಿತಿಯ ಅಧ್ಯಕ್ಷ ಡಿ.ಸಿ. ಮಂಜುನಾಥ್ ನೇತೃತ್ವದಲ್ಲಿ ಅದ್ದೂರಿ ಅಲಂಕಾರದೊAದಿಗೆ ಹೆಚ್ಆರ್ಪಿ ಕಾಲೋನಿಯ ಗ್ರಾಮ ಮಂದಿರದಿAದ ಹೊರಟು ಐಬಿ ರಸ್ತೆ ಮೂಲಕ ಗಣಪತಿ ದೇವಸ್ಥಾನದ ವೃತ್ತದಲ್ಲಿ ಪ್ರದರ್ಶನ ನೀಡಿತು. ಮಂಟಪದಲ್ಲಿ ಆಂಜನೇಯನ ವಿವಿಧ ಕಲಾಕೃತಿಗಳು, ಟ್ಯಾಬ್ಲೋಗಳು ಮನಸೂರೆಗೊಂಡವು.
ನAತರ ಹಾರಂಗಿ ಭಾಗದಿಂದ ಆಗಮಿಸಿದ ವೀರ ಹನುಮ ಸೇವಾ ಸಮಿತಿಯ ಮಂಟಪ ಭಾಸ್ಕರ ನಾಯಕ್ ಉಸ್ತುವಾರಿಯಲ್ಲಿ ಚಿಕ್ಕತ್ತೂರು ಸುಂದರ ನಗರ ಗುಮ್ಮನ ಕೊಲ್ಲಿ ಬಿಜಿಎಸ್ ವೃತ್ತ ಬೈಪಾಸ್ ರಸ್ತೆ ಮೂಲಕ ಐಬಿ ರಸ್ತೆ ಜಂಕ್ಷನ್ ನಂತರ ಗಣಪತಿ ದೇವಾಲಯ ಎದುರು ಭಾಗದಲ್ಲಿ ಬಂದು ತಮ್ಮ ಮಂಟಪದ ಪ್ರದರ್ಶನ ನೀಡಿತು.
ಕುಶಾಲನಗರ ಗೋಪಾಲ ಸರ್ಕಲ್ ಟೀಂ ಕೇಸರಿ ಪ್ರದೀಪ್ ಅವರ ನೇತೃತ್ವದಲ್ಲಿ ಹೊರಟ ಮಂಟಪ ಗುಮ್ಮನಕೊಲ್ಲಿಯ ಬಸವೇಶ್ವರ ದೇವಾಲಯಕ್ಕೆ ಆಗಮಿಸಿ ನಂತರ ಗೋಪಾಲ್ ಸರ್ಕಲ್ ಮೂಲಕ ಬಂದು ಜನತಾ ಕಾಲೋನಿ ಗೌಡ ಸಮಾಜ ಐಬಿ ರಸ್ತೆ ಮುಖಾಂತರ ಬಂದು ಗಣಪತಿ ದೇವಾಲಯದ ಎದುರುಗಡೆ ಮಂಟಪ ಪ್ರದರ್ಶನ ನೀಡಿ ತೆರಳಿತು.
ಮಾದಾಪಟ್ಟಣ ಶ್ರೀರಾಮಧೂತ ಜಯಂತಿ ಆಚರಣೆ ಸಮಿತಿ ಪ್ರಜ್ವಲ್ ನೇತೃತ್ವದಲ್ಲಿ ಮಾದಾ ಪಟ್ಟಣ ದೇವಾಲಯದಿಂದ ಹೊರಟು ಪಾಲಿಟೆಕ್ನಿಕ್ ಎದುರುಗಡೆ ಬಿ ಎಂ ರಸ್ತೆ ಐಬಿ ರಸ್ತೆಯಲ್ಲಿ ಸಾಗಿ ನಂತರ ಗಣಪತಿ ದೇವಾಲಯದ ಮುಂದೆ ಪ್ರದರ್ಶನ ನೀಡಿದೆ.
ಇಂದಿರಾ ಬಡಾವಣೆಯ ಶರಣ್ ನೇತೃತ್ವದಲ್ಲಿ ಟೀಮ್ ಮಹಾ ವೀರ ಹನುಮಾನ್ ಸೇವಾ ಸಮಿತಿ ಮುಖ್ಯ ರಸ್ತೆಯಲ್ಲಿ ಸಾಗಿ ನಂತರ ಗಣಪತಿ ದೇವಾಲಯ ಬಳಿ ಮಂಟಪ ಪ್ರದರ್ಶನ ನೀಡಿತು.
ಗುಡ್ಡೆಹೊಸೂರು ಬಳಿಯ ವೀರಾಂಜನೇಯ ಸೇವಾ ಸಮಿತಿ ಅರುಣ್ ಕುಮಾರ್ ನೇತೃತ್ವದಲ್ಲಿ ಗುಡ್ಡೆಹೊಸೂರು ಮಾದಾಪಟ್ಟಣ ಮುಖ್ಯರಸ್ತೆಯಲ್ಲಿ ಸಾಗಿ ಕುಶಾಲನಗರ ಗಣಪತಿ ದೇವಾಲಯ ಬಳಿ ಪ್ರದರ್ಶನ ನೀಡಿತು . ಶಿವಣ್ಣ ಅವರ ನೇತೃತ್ವದಲ್ಲಿ ಕೂಡಿಗೆಯ ಹನುಮಸೇನಾ ಸೇವಾ ಸಮಿತಿ ಮಂಟಪ ಕೂಡುಮಂಗಳೂರು ಗುಮ್ಮನಕೊಲ್ಲಿ ಮುಳ್ಳುಸೋಗೆ ಮೂಲಕ ಆಂಜನೇಯ ದೇವಾಲಯ ದಾಟಿ ರಥ ಬೀದಿಯಲ್ಲಿ ಆಗಮಿಸಿ ಪ್ರದರ್ಶನ ನೀಡಿದೆ.
ವಿವಿಧ ಕಡೆಗಳಿಂದ ಆಗಮಿಸಿದ್ದ ಒಟ್ಟು ಎಂಟು ಮಂಟಪಗಳು ಕುಶಾಲನಗರದ ಗಣಪತಿ ದೇವಾಲಯ ಬಳಿ ಬಂದು ನೆರೆದ ಹನುಮ ಭಕ್ತರ ಮತ್ತು ಸಾರ್ವಜನಿಕರ ಮನ ಸೂರೆಗೊಂಡವು.
ಕೆಲವು ಮಂಟಪಗಳು ಒಂದಕ್ಕೊAದು ಪೈಪೋಟಿಯಲ್ಲಿ ಆಕರ್ಷಣೆಯೊಂದಿಗೆ ದಾರಿ ಉದ್ದಕ್ಕೂ ಹಾಗೂ ಕುಶಾಲನಗರ ಗಣಪತಿ ದೇವಾಲಯ ಮುಂಭಾಗ ಅಬ್ಬರದ ಡಿಜೆ ಮತ್ತು ಕಣ್ಣು ಕುಕ್ಕುವ ವಿದ್ಯುತ್ ಬೆಳಕಿನೊಂದಿಗೆ ಪ್ರದರ್ಶನ ನೀಡುವ ಮೂಲಕ ಅದ್ದೂರಿ ಹನುಮ ಜಯಂತಿ ಉತ್ಸವದಲ್ಲಿ ಪಾಲ್ಗೊಂಡವು.
ಅಂದಾಜು ೨೫ ಸಾವಿರಕ್ಕೂ ಅಧಿಕ ಭಕ್ತಾದಿಗಳು ಶೋಭಾ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು .
ಸೋಮವಾರಪೇಟೆ ಮತ್ತು ಜಿಲ್ಲೆಯ ಎಲ್ಲೆಡೆಗಳಿಂದ ಹಾಗೂ ನೆರೆಯ ಪಿರಿಯಾಪಟ್ಟಣ, ಹುಣಸೂರು ಅರಕಲಗೂಡು ಮತ್ತಿತರ ಕಡೆಗಳಿಂದ ತಂಡೋಪತAಡವಾಗಿ ಹನುಮ ಭಕ್ತರು ಶೋಭಾ ಯಾತ್ರೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ದೃಶ್ಯ ಗೋಚರಿಸಿತು.
ಹೆಚ್ಆರ್ಪಿ ಕಾಲೋನಿಯ ಅಂಜನಿಪುತ್ರ ಸಮಿತಿಯ ವತಿಯಿಂದ ಡಾನ್ಸ್ ಡಾನ್ಸ್ ಮತ್ತು ಆರ್ಕೆಸ್ಟಾç್ರ ಕಾರ್ಯಕ್ರಮ ನಡೆಯಿತು. ಹಾರಂಗಿ ವೀರ ಹನುಮ ಸೇವಾ ಸಮಿತಿ ವತಿಯಿಂದ ಅತ್ತೂರು ಯಡವನಾಡು ಹುದುಗೂರು ಗ್ರಾಮಗಳಲ್ಲಿ ಮೆರವಣಿಗೆ ತೆರಳಿ ನಂತರ ಕುಶಾಲನಗರ ಗಣಪತಿ ದೇವಾಲಯದ ಬಳಿ ಬಂದು ಪ್ರದರ್ಶನ ನೀಡಿದೆ.
ದಶಮಂಟಪಗಳ ಸಮಿತಿಯ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಉಪಾಧ್ಯಕ್ಷ ಕಿಶೋರ್ ಕುಮಾರ್, ಪ್ರಧಾನ ಕಾರ್ಯದರ್ಶಿ ರಾಮನಾಥನ್, ಖಜಾಂಚಿ ಡಿ.ಪಿ. ಗಿರೀಶ್, ಸಹ ಕಾರ್ಯದರ್ಶಿ ಸಿ. ಸುನಿಲ್ ಮತ್ತು ಸಮಿತಿಯ ಸದಸ್ಯರು ಮಂಟಪಗಳ ಸಂಪೂರ್ಣ ಉಸ್ತುವಾರಿ ವಹಿಸಿದ್ದರು. ತೀರ್ಪುಗಾರರು ವಿವಿಧ ಮಂಟಪಗಳ ವೀಕ್ಷಣೆ ಮಾಡುವ ಮೂಲಕ ಆಯ್ಕೆ ಪ್ರಕ್ರಿಯೆ ನಡೆಸಿದರು.
ಮಂಟಪಗಳ ಜೊತೆ ನೂರಾರು ಸಂಖ್ಯೆಯ ಹನುಮ ಭಕ್ತರು ಡಿಜೆ ಅಬ್ಬರದ ಸಂಗೀತಕ್ಕೆ ಕುಣಿದಾಡುತ್ತಿದ್ದ ದೃಶ್ಯ ಗೋಚರಿಸಿತು. ಜಗಮಗಿಸುವ ವಿದ್ಯುತ್ ದೀಪಗಳಿಂದ ಕುಶಾಲನಗರ ಪಟ್ಟಣ ಕಿನ್ನರ ಲೋಕದಂತೆ ಭಾಸವಾಗುತ್ತಿತ್ತು.
ಶೋಭಾ ಯಾತ್ರೆ ಸಂದರ್ಭ ಕುಶಾಲನಗರ ಮೂಲಕ ಸಾಗುವ ಹೆದ್ದಾರಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನ ಸಂಚಾರ ಒತ್ತಡ ಇದ್ದ ಕಾರಣ ಪೊಲೀಸರು ಮತ್ತು ಸ್ವಯಂಸೇವಕರು ಸಂಚಾರಕ್ಕೆ ಯಾವುದೇ ತೊಡಕು ಉಂಟಾಗದAತೆ ಅನುವು ಮಾಡಿಕೊಡುವ ನಿಟ್ಟಿನಲ್ಲಿ ಪರದಾಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು. ಈ ಬಾರಿ ಕುಶಾಲನಗರ ಪುರಸಭೆ ಮತ್ತು ಸ್ಥಳೀಯ ಚೇಂಬರ್ ಆಫ್ ಕಾಮರ್ಸ್ ನಿರ್ಧಾರದಂತೆ ಬಹುತೇಕ ಹೋಟೆಲ್ಗಳು ತೆರೆದಿದ್ದು ಸಾರ್ವಜನಿಕರಿಗೆ ತಡರಾತ್ರಿ ತನಕ ಊಟ ಕಾಫಿ ತಿಂಡಿ ವ್ಯವಸ್ಥೆಗೆ ಅನುವು ಮಾಡಿಕೊಡಲಾಗಿತ್ತು.
ಪಟ್ಟಣದ ಹೊರಭಾಗದಲ್ಲಿ ಸಂಚಾರ ವ್ಯವಸ್ಥೆಗೆ ಬದಲಿ ಮಾರ್ಗ ಕಲ್ಪಿಸಲಾಗಿತ್ತು. ಸಂಚಾರಿ ಪೊಲೀಸರ ಮೂಲಕ ಸಮರ್ಪಕ ಸಂಚಾರ ವ್ಯವಸ್ಥೆಯನ್ನು ಮಾಡಲಾಗಿತ್ತು.
ಶೋಭಾ ಯಾತ್ರೆ ಸಂದರ್ಭ ಕಾನೂನು ಸುವ್ಯವಸ್ಥೆ ಕಾಪಾಡುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಅವರು ಕುಶಾಲನಗರದಲ್ಲಿ ಮೊಕ್ಕಾಂ ಹೂಡಿದ್ದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ಉಪಸ್ಥಿತಿಯಲ್ಲಿ ಕುಶಾಲನಗರ ಡಿ ವೈ ಎಸ್ ಪಿ ಚಂದ್ರಶೇಖರ್ ಸೇರಿದಂತೆ ಇಬ್ಬರು ಡಿವೈಎಸ್ಪಿ ಗಳ ನೇತೃತ್ವದಲ್ಲಿ ನಾಲ್ಕು ಮಂದಿ ಇನ್ಸ್ಪೆಕ್ಟರ್ಸ್, ೧೫ ಸಬ್ ಇನ್ಸ್ಪೆಕ್ಟರ್ ಗಳು, ೪೫೦ ಪೊಲೀಸ್ ಸಿಬ್ಬಂದಿ ಸೇರಿದಂತೆ ನಾಲ್ಕು ಜಿಲ್ಲಾ ಸಶಸ್ತ್ರ ದಳ ಮತ್ತು ನಾಲ್ಕು ಕೆಎಸ್ಆರ್ಪಿ ತುಕಡಿ ಸಿಬ್ಬಂದಿಗಳು ಒಟ್ಟು ೮೦೦ಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು.
ಸಶಸ್ತ್ರದಳದ ಮತ್ತು ಕೆಎಸ್ಆರ್ಪಿ ತುಕಡಿಗಳ ಸಿಬ್ಬಂದಿಗಳನ್ನು ಭದ್ರತೆಗೆ ಆಯಕಟ್ಟಿನ ಪ್ರದೇಶದಲ್ಲಿ ನಿಯೋಜಿಸಲಾಗಿತ್ತು.
ತಡರಾತ್ರಿಯಲ್ಲಿ ಹನುಮ ಜಯಂತಿಯ ಸಮಾರೋಪ ಸಮಾರಂಭ ನಡೆದು ಮಂಟಪಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಜರುಗಿತು.
ಈ ಸಂದರ್ಭ ದೇವಾಲಯಗಳ ಸಮಿತಿ ಪ್ರಮುಖರು, ದಶಮಂಟಪ ಉತ್ಸವ ಸಮಿತಿಯ ಪದಾಧಿಕಾರಿಗಳು ಮತ್ತು ಇತರರು ಇದ್ದರು.
-ಚಂದ್ರಮೋಹನ್ , ನಾಗರಾಜ ಶೆಟ್ಟಿ