ಮಡಿಕೇರಿ, ಡಿ. ೧: ಕೊಡಗು ಜಿಲ್ಲಾ ಸಹಕಾರ ಯೂನಿಯನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರಬಂಧ ಮತ್ತು ಚರ್ಚಾ ಸ್ಪರ್ಧೆಯನ್ನು ಏರ್ಪಡಿಸಲಾಯಿತು.

ವಿಜೇತರಾದ ವಿದ್ಯಾರ್ಥಿಗಳ ಹೆಸರು ಮತ್ತು ವಿಳಾಸ ಇಂತಿದೆ. ಪ್ರಬಂಧ ಸ್ಪರ್ಧೆಯಲ್ಲಿ ಸೋಮವಾರಪೇಟೆ ತಾಲೂಕು ಮಾದಾಪುರ ಗ್ರಾಮ ಮತ್ತು ಅಂಚೆ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನ ಅಶ್ವಧಿ ಕೆ.ಪಿ. ಪ್ರಥಮ (ದೂ.ಸಂ. ೭೪೧೧೮೯೦೨೩೧), ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪಲು ಸಂತ ಥೋಮಸ್ ಪ್ರೌಢ ಶಾಲೆಯ ಹೃಷಿಕ ಬಿ.ಎಸ್. ದ್ವಿತೀಯ (ದೂ.ಸಂ. ೯೭೪೧೨೦೩೧೨೬) ಹಾಗೂ ಕೊಡಗರಹಳ್ಳಿಯ ಶಾಂತಿನಿಕೇತನ ಪ್ರೌಢಶಾಲೆಯ ಸಿಂಚನ ಕೆ.ಐ. ತೃತೀಯ (ದೂ.ಸಂ.೮೭೬೨೭೭೬೩೧೫) ಸ್ಥಾನ ಪಡೆದಿದ್ದಾರೆ.

ಚರ್ಚಾ ಸ್ಪರ್ಧೆಯಲ್ಲಿ ಪೊನ್ನಂಪೇಟೆ ತಾಲೂಕಿನ ಗೋಣಿಕೊಪ್ಪಲು ವಿದ್ಯಾನಿಕೇತನ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಎಂ. ಹರಿಕೃಷ್ಣನ್ (ಪ್ರಥಮ) ದೂ.ಸಂ. ೯೬೦೬೨೭೪೨೬೪, ಗೋಣಿಕೊಪ್ಪಲು ವಿದ್ಯಾನಿಕೇತನ್ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಏಂಜೆಲಿನ್ ಮೆನೆಜಸ್ (ದ್ವಿತೀಯ) ದೂ.ಸಂ. ೯೬೦೬೨೭೪೨೬೪ ಹಾಗೂ ಮಡಿಕೇರಿ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿಯ ತನುಶ್ರೀ ಬಿ.ಜೆ. ತೃತೀಯ ಸ್ಥಾನ ಪಡೆದಿದ್ದಾರೆ.