ಸುಂಟಿಕೊಪ್ಪ, ಡಿ. ೧: ೧೭ ವರ್ಷಗಳ ಕಾಲ ಯೋಧರಾಗಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಆಗಮಿಸಿದ ವಚನ್ ಅವರನ್ನು ಗ್ರಾಮ ಪಂಚಾಯಿತಿ ವತಿಯಿಂದ ಗ್ರಾಮಸ್ಥರ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಇತ್ತೀಚೆಗೆ ನಡೆದ ಗ್ರಾಮ ಸಭೆಯಲ್ಲಿ ಗ್ರಾಮದ ನಿವಾಸಿ ನಿವೃತ್ತ ಯೋಧ ಕೊರಗಪ್ಪ ಹಾಗೂ ಗಿರಿಜ ದಂಪತಿಯ ಪುತ್ರನಾದ ವಚನ್ ಅವರನ್ನು ೭ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗೌರವಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಇ.ಬಿ. ಜೋಸೆಫ್ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಂದೀಶ್, ಉಪಾಧ್ಯಕ್ಷೆ ಸೌಮ್ಯಶ್ರೀ, ಕೆ.ಎಂ. ಮುಸ್ತಾಫ, ಮಧಸೂಧನ್, ಸಿದ್ದೀಕ್, ವೇದಾವತಿ, ಕಮಲ ಚಂದ್ರಾವತಿ, ಪಂಚಾಯಿತಿ ಕಾರ್ಯದರ್ಶಿ ಸ್ವಾಮಿ ನಾಯಕ್ ಸಿಬ್ಬಂದಿಗಳಾದ ಪೂರ್ಣಿಮ, ಬೀನಾ, ಸರಿತಾ, ಹೇಮಾವತಿ, ಮತ್ತಿತರರು ಇದ್ದರು.