ಮಡಿಕೇರಿ, ಡಿ. ೧: ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಸಂಸ್ಥಾಪಕ ಕಾಟಿಮಾಡ ಜಿಮ್ಮಿ ಅಣ್ಣಯ್ಯ ಅವರನ್ನು ಮಡಿಕೇರಿ ಹಿರಿಯ ನಾಗರಿಕ ವೇದಿಕೆ ವತಿಯಿಂದ ಸನ್ಮಾನಿಸಲಾಯಿತು.
ಜಿಮ್ಮಿ ಅಣ್ಣಯ್ಯ ಅವರ ಜೀವಮಾನ ಸಾಧನೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಲಾಯಿತು. ಮಡಿಕೇರಿ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೊಙಂಡ ತಮ್ಮಯ್ಯ, ವೈದ್ಯ ಡಾ. ಚೇತನ್ ಸನ್ಮಾನ ನೆರವೇರಿಸಿದರು.
ಈ ಸಂದರ್ಭ ಕ್‌ಗ್ಗಟ್ಟ್ ನಾಡ್ ಹಿರಿಯ ನಾಗರಿಕ ವೇದಿಕೆ ಅಧ್ಯಕ್ಷ ಕೊಟ್ಟ್ಕತ್ತೀರ ಸೋಮಣ್ಣ, ಪ್ರಮುಖರಾದ ಕೊಳ್ಳಿಮಾಡ ಚಿಪ್ಪಿ ಕಾರ್ಯಪ್ಪ, ಬೋಜಮ್ಮ, ಎಂ. ಪಾರ್ವತಿ, ಕಾಟಿಮಾಡ ಡಿಕ್ಕಿ ಅಣ್ಣಯ್ಯ, ನೆರೆಯಂಡಮ್ಮನ ಸುಬ್ರಮಣಿ, ಭಾಗವಹಿಸಿದ್ದರು.