*ಗೋಣಿಕೊಪ್ಪ, ನ. ೨೯: ಗೋಣಿಕೊಪ್ಪ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಗೋಣಿಕೊಪ್ಪ ಸಂತ ಥಾಮಸ್ ಶಾಲೆಯಲ್ಲಿ ನಡೆಯಿತು.
ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಮೋದ್ ಗಣಪತಿ ಜ್ಯೋತಿ ಬೆಳಗಿಸುವ ಮೂಲಕ ಪ್ರತಿಭಾ ಕಾರಂಜಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮಕ್ಕಳ ಪ್ರತಿಭೆಗಳನ್ನು ಹೊರತರಲು ಈ ಕಾರ್ಯಕ್ರಮಗಳು ಪ್ರಯೋ ಜನಕಾರಿ ವೇದಿಕೆಯಾಗಿದೆ. ಸಾಧ್ಯವಾದಷ್ಟು ಮಟ್ಟಿಗೆ ಅವಕಾಶವನ್ನು ಬಳಸಿಕೊಂಡು ನಮ್ಮೊಳಗಿನ ಕಲಾತ್ಮಕತೆಗಳನ್ನು ಅನಾವರಣಗೊಳಿಸುವ ಮೂಲಕ ಪ್ರಾಮುಖ್ಯತ್ತನ ಹೊಂದಬೇಕು ಎಂದು ಸಲಹೆ ನೀಡಿದರು. ಎರಡು ಮೂರು ದಶಕಗಳ ಹಿಂದೆ ಶಾಲೆಯ ವಿದ್ಯಾರ್ಥಿಗಳಿಗೆ ಸಿಗುತ್ತಿದ್ದ ಸೌಲಭ್ಯ ಮತ್ತು ಪ್ರಸ್ತುತ ವಿದ್ಯಮಾನದಲ್ಲಿ ಸಿಗುತ್ತಿರುವ ಸೌಲಭ್ಯಗಳಿಗೆ ಬಹಳ ವ್ಯತ್ಯಾಸವಿವೆ.
ಈ ವಿಚಾರದಲ್ಲಿ ನೋಡಿದಾಗ ಹಿಂದಿನ ಮಕ್ಕಳ ಕಲಿಕೆಯ ಗುಣಮಟ್ಟಕ್ಕೆ ಸಾಕಷ್ಟು ಸೌಕರ್ಯಗಳು ಒದಗಿಬರುತ್ತಿದೆ. ಕಲಿಯುವ ಮಕ್ಕಳಿಗೆ ಇದೊಂದು ಸೌಭಾಗ್ಯ ಎಂದು ಹೇಳಿದರು.
ಸಂತ ಥಾಮಸ್ ಶಾಲೆಯ ಮುಖ್ಯೋಪಾಧ್ಯಾಯ ಆಂಟೋನಿ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು. ಮಕ್ಕಳನ್ನು ಉದ್ದೇಶಿಸಿ ಮಾತನಾಡಿದ ಆಂಟೋನಿ ಅವರು, ಮಕ್ಕಳ ಪ್ರತಿಭೆಗಳನ್ನು ಬೆಳೆಸುವುದು ಪ್ರತಿಭಾ ಕಾರಂಜಿಯ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹಮ್ಮಿಕೊಂಡ ಕಾರ್ಯಕ್ರಮಗಳು ಫಲಪ್ರದಾಯವಾಗಿದೆ.
ಪ್ರಸ್ತುತ ವರ್ಷ ನಮ್ಮ ಶಾಲೆಯಲ್ಲಿ ಪ್ರತಿಭಾ ಕಾರಂಜಿಯನ್ನು ಯೋಜನೆ ಮಾಡಿರುವುದು ಬಹಳ ಹರ್ಷದಾಯಕ ಎಂದು ಹೇಳಿದರು. ತಾಲೂಕು ಸಮನ್ವಯಧಿಕಾರಿ ಮಹೇಶ್ ಕಾರ್ಯಕ್ರಮಗಳ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ಸಿ.ಆರ್.ಪಿ ರಾಧಾ ಅವರ ಮಾರ್ಗದರ್ಶನದಲ್ಲಿ ನಡೆದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ, ಜಿಲ್ಲಾ ಪ್ರಾಥಮಿಕ ಶಾಲೆ, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ, ಎಚ್ .ಕೆ ಕುಮಾರ್, ತಾಲೂಕು ಪ್ರಾಥಮಿಕ ಶಾಲೆಯ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಂದ್ರ, ಉಪಾಧ್ಯಕ್ಷೆ ಭಾರತಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ತಿಮ್ಮಯ್ಯ, ಬಿಆರ್ಪಿ ವಾಮನ, ಮತ್ತು ವಿವಿಧ ಕ್ಲಸ್ಟರ್ನ ಸಿಆರ್ಪಿಗಳು, ಸರ್ಕಾರಿ ಮತ್ತು ಖಾಸಗಿ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳು, ಸಂತ ಥಾಮಸ್ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕರು ಇದ್ದರು. ವಿದ್ಯಾರ್ಥಿಗಳು, ಮಣ್ಣಿನ ಕಲಾಕೃತಿಗಳು, ಗೀತ ವಾಚನ, ಭಕ್ತಿ ಗೀತೆ ಗಾಯನ, ಛದ್ಮವೇಷ, ಕುರಾನ್ ಪಠಣ, ಸೇರಿದಂತೆ ಹಲವು ಕಲಾ ಕೌಶಲ್ಯಗಳನ್ನು ಪ್ರದರ್ಶನ ಮಾಡಿದರು.