ಮಡಿಕೇರಿ, ನ. ೨೯: ಇಂದು ವೀರಾಜಪೇಟೆಯ ಕಾವೇರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಅಖಿಲ ಕೊಡವ ಸಮಾಜದ ಅಧ್ಯಕ್ಷರಾದ ಪರದಂಡ ಸುಬ್ರಮಣಿ ಅವರ ಅಧ್ಯಕ್ಷತೆಯಲ್ಲಿ ಅಖಿಲ ಕೊಡವ ಸಮಾಜದ ವಿಶೇಷ ಮಹಾಸಭೆ ನಡೆಯಿತು.
ಸಭೆಯಲ್ಲಿ ಅಖಿಲ ಕೊಡವ ಸಮಾಜದ ಕಾರ್ಯಕಾರಿ ಮಂಡಳಿಯ ಸದಸ್ಯರಲ್ಲದೆ ದೇಶ ತಕ್ಕರಾದ ಕಳ್ಳಂಗಡ ಪೂವಯ್ಯ, ಬೊಳ್ಳೆರ ವಿನಯ ಅಪ್ಪಯ್ಯ, ಪೋರೆರ ಬಿದ್ದಪ್ಪ, ಪರುವಂಡ ಪೊನ್ನಪ್ಪ ಮತ್ತು ಮಾತಂಡ ಧೀರಜ್ ಹಾಗೂ ಪಾಂಡಿರ ಕುಟುಂಬಸ್ಥರು ಉಪಸ್ಥಿತರಿದ್ದರು.
ಸಭೆಯಲ್ಲಿ ದೇಶತಕ್ಕರೆಲ್ಲ ಸರ್ವಾನುಮತದಿಂದ ಪಾಡಿ ಶ್ರೀ ಇಗ್ಗುತಪ್ಪ ಭಕ್ತ ಜನ ಸಂಘದ ಅಧ್ಯಕ್ಷರೂ ಆದ ಪರದಂಡ ಸುಬ್ರಮಣಿ ಅವರನ್ನು ಮುಂದಿನ ೩ ವರ್ಷಗಳ ಅವಧಿಗೆ ಪುನರಾಯ್ಕೆ ಮಾಡಿದರು.
ನೂತನ ಆಡಳಿತ ಮಂಡಳಿ ಮತ್ತು ಕೇಂದ್ರೀಯ ಸಮಿತಿ ಸದಸ್ಯರನ್ನು ಮುಂದಿನ ದಿನಗಳಲ್ಲಿ ಎಲ್ಲಾ ನಾಡುತಕ್ಕರ ಸಭೆ ಕರೆದು ಆಯ್ಕೆ ಮಾಡುವ ಜವಾಬ್ದಾರಿಯನ್ನು ಕೂಡ ಅಧ್ಯಕ್ಷ ಪರದಂಡ ಸುಬ್ರಮಣಿ ಅವರಿಗೆ ವಹಿಸಲಾಯಿತು.