ಚೆಟ್ಟಳ್ಳಿ, ನ. ೨೮: ಚೆಟ್ಟಳ್ಳಿ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ವೈಜ್ಞಾನಿಕ ಜೇನು ಸಾಕಾಣಿಕೆ ಹಾಗೂ ಮಧುವನ ನಿರ್ವಹಣೆಯ ಬಗ್ಗೆ ಮೂರು ದಿನಗಳ ತರಬೇತಿ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು.
ಭಾರತೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರ ಬೆಂಗಳೂರಿನ ಪ್ರಧಾನ ವಿಜ್ಞಾನಿಗಳಾದ ಡಾ. ರವಿಶಂಕರ್ ಕೆ. ವಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಈ ಕಾರ್ಯಕ್ರಮದ ಉಪಯೋಗಗಳ ಬಗ್ಗೆ ತಿಳಿಸಿ, ತರಬೇತಿಯನ್ನು ಸದುಪಯೋಗ ಪಡೆಯುವುದರ ಮೂಲಕ ಮಾದರಿ ಕೃಷಿಕರಾಗಬೇಕೆಂದರು.
ಗೌರವಾನ್ವಿತ ಅತಿಥಿಗಳಾಗಿ ಡಾ. ಪಿ.ವಿ.ಆರ್ ರೆಡ್ಡಿ ಕೀಟಶಾಸ್ತçದ ತಜ್ಞರು ಭಾರತೀಯ ತೋಟಗಾರಿಕಾ ಪಾಯೋಗಿಕ ಕೇಂದ್ರ ಬೆಂಗಳೂರು ಅವರು ಮಾತನಾಡಿ, ಜೇನುಕೃಷಿಯ ಅನುಕೂಲಗಳು ಹಾಗೂ ಲಾಭದ ಬಗ್ಗೆ ತಿಳಿಸಿದರು. ಕೇಂದ್ರದ ಮುಖ್ಯಸ್ಥರಾದ ಡಾ. ಮುರುಳೀಧರ್ ಮಾತನಾಡಿ, ಈ ಜೇನುಕೃಷಿ ತರಬೇತಿ ಯೋಜನೆ, ಜೇನಿನ ಪರಾಗಕ್ರಿಯೆ, ಆದಾಯದ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಆಯೋಜಕರಾದ ಡಾ. ರಾಣಿ ಎ.ಟಿ., ವಿಜ್ಞಾನಿ ಕೀಟಶಾಸ್ತç ಹಾಗೂ ಹಿರಿಯ ವಿಜ್ಞಾನಿಗಳಾದ ಡಾ. ರಾಜೇಂದಿರನ್ ಉಪಸ್ಥಿತರಿದ್ದರು.
ಚಿಕ್ಕಮಂಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಯ ಆಯ್ದ ೨೫ ಕೃಷಿಕರಿಗೆ ತರಬೇತಿ ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಜೇನು ಕೃಷಿಯ ಪರಿಕರಗಳನ್ನು ಪ್ರದರ್ಶನಕ್ಕೆ ಇಡಲಾಯಿತು. ಎರಡನೆಯ ದಿನ ಪೊನ್ನಂಪೇಟೆಯ ಅರಣ್ಯ ವಿದ್ಯಾಲಯದಲ್ಲಿ ತರಬೇತಿ ನಡೆಯಲಿದೆ.