ಮಡಿಕೇರಿ, ನ. ೨೮: ನಗರದ ಪೊಲೀಸ್ ಕವಾಯಿತು ಮೈದಾನದಲ್ಲಿ ನಿನ್ನೆಯಿಂದ ಆರಂಭಗೊAಡಿರುವ ಪೊಲೀಸ್ ಕ್ರೀಡಾಕೂಟದಲ್ಲಿ ಇಂದು ವಿವಿಧ ಸ್ಪರ್ಧೆಗಳು ರೋಚಕವಾಗಿ ನಡೆಯಿತು.
ಮೂರು ಪೊಲೀಸ್ ಉಪವಿಭಾಗ, ಡಿಎಆರ್ ವಿಶೇಷ ಘಟಕ ಹಾಗೂ ಮಹಿಳಾ ಪೊಲೀಸ್ ಘಟಕದ ನಡುವೆ ವಿವಿಧ ಕ್ರೀಡೆಗಳು ನಡೆಯುತ್ತಿವೆ. ಅಥ್ಲೆಟಿಕ್ಸ್ ಸೇರಿದಂತೆ ತಂಡ ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡ ಪೊಲೀಸರು ಕ್ರೀಡೆಯನ್ನು ಸಂಭ್ರಮಿಸುತ್ತಿದ್ದಾರೆ. ಲಾಂಗ್ ಜಂಪ್, ಹೈಜಂಪ್, ಓಟದ ಸ್ಪರ್ಧೆಗಳು ರೋಚಕವಾಗಿದ್ದವು. ಕ್ರೀಡಾಕೂಟ ತಾ. ೨೯ ರಂದು (ಇಂದು) ಸಂಭ್ರಮದ ಅಂತ್ಯ ಕಾಣಲಿದೆ.