ಮಡಿಕೇರಿ, ನ. ೨೮: ಜಿಲ್ಲೆಯ ಪೊನ್ನಂಪೇಟೆ ತಾಲೂಕಿಗೆ ಸಂಬAಧಿಸಿದAತೆ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳು ಹಾಗೂ ತಾಲೂಕು ಪಂಚಾಯಿತಿ ಕ್ಷೇತ್ರಗಳ ನಿಗದಿಯೊಂದಿಗೆ ಈ ಕ್ಷೇತ್ರಗಳ ಗಡಿ ಗುರುತು ಮಾಡಿ ತೀರ್ಮಾನ ಕೈಗೊಳ್ಳಲಾಗಿದೆ. ಈ ವಿಚಾರವಾಗಿ ಆಕ್ಷೇಪಣೆಗಳಿದ್ದಲ್ಲಿ ಡಿಸೆಂಬರ್ ೧ ರ ಸಂಜೆ ೫ ಗಂಟೆಯೊಳಗಾಗಿ ಸಲ್ಲಿಸಲು ಅವಕಾಶ ಕಲ್ಪಿಸಿ ಆದೇಶ ಹೊರಡಿಸಲಾಗಿದೆ. ಈ ಬಗ್ಗೆ ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗದ ನಿರ್ದೇಶಕರು ಹಾಗೂ ಪದನಿಮಿತ್ತ ಸರಕಾರದ ಉಪಕಾರ್ಯದರ್ಶಿ ಡಾ. ಎನ್. ಸೋಮೇಶ್ ಕುಮಾರ್ ಅವರು ಪ್ರಕಟಣೆ ಹೊರಡಿಸಿದ್ದಾರೆ.
ಜಿ.ಪಂ. ಕ್ಷೇತ್ರ ೬
ಪೊನ್ನಂಪೇಟೆ ತಾಲೂಕಿಗೆ ಇದೀಗ ೬ ಜಿ.ಪಂ. ಕ್ಷೇತ್ರಗಳನ್ನು ನಿಗದಿಪಡಿಸಿ ಈ ಕ್ಷೇತ್ರ ವ್ಯಾಪ್ತಿಗೆ ಗ್ರಾಮಗಳ ಗಡಿಯನ್ನು ಗುರುತು ಮಾಡಲಾಗಿದೆ.
ಬಾಳೆಲೆ ಕ್ಷೇತ್ರ: ಬಾಳೆಲೆ ಜಿ.ಪಂ. ಕ್ಷೇತ್ರವಾಗಿದ್ದು ಈ ಕ್ಷೇತ್ರದ ವ್ಯಾಪ್ತಿಗೆ ಬಾಳೆಲೆ, ದೇವನೂರು, ನಿಟ್ಟೂರು, ಹತ್ತುಗಟ್ಟು ಅರಣ್ಯ, ಕೊಟ್ಟಗೇರಿ, ಕಾನೂರು, ಬೆಕ್ಕೆಸೊಡ್ಲೂರು, ಕೋತೂರು, ಬಿಳೂರು, ಬೆಸಗೂರು, ನಲ್ಲೂರು ಗ್ರಾಮ ಒಳಪಡಲಿದೆ.
ಗೋಣಿಕೊಪ್ಪಲು ಕ್ಷೇತ್ರ: ಗೋಣಿಕೊಪ್ಪಲು ಅರುವತ್ತೋಕ್ಲು, ಹಳ್ಳಿಗಟ್ಟು, (ಭಾಗಶಃ), ಹಾತೂರು, ಕೈಕೇರಿ, ಕುಂದ ಗ್ರಾಮ ಒಳಪಡಲಿದೆ.
ತಿತಿಮತಿ ಕ್ಷೇತ್ರ: ನೋಕ್ಯ, ದೇವಮಾಜಿ ಅರಣ್ಯ, ಅರೆಕೇರಿ ಅರಣ್ಯ-೧, ಅರೆಕೇರಿ ಅರಣ್ಯ-೨, ಅರೆಕೇರಿ ಅರಣ್ಯ-೩, ಧನುಗಾಲ, ಮಾಯಾಮುಡಿ, ಹೆಬ್ಬಾಲೆ ಗ್ರಾಮ ಒಳಪಡಲಿದೆ.
ಶ್ರೀಮಂಗಲ ಕ್ಷೇತ್ರ: ಕುಟ್ಟ, ಮಂಚಳ್ಳಿ ಮತ್ತು ಅರಣ್ಯ, ಕೆ. ಬಾಡಗ, ಕುಮಟೂರು, ಕುರ್ಚಿ, ನಾಲ್ಕೇರಿ ಅರಣ್ಯ.
ಹುದಿಕೇರಿ ಕ್ಷೇತ್ರ: ಹುದಿಕೇರಿ, ಬೆಳ್ಳ್ಳೂರು, ಹೈಸೊಡ್ಲೂರು, ಬೇಗೂರು, ಬಲ್ಯಮಂಡೂರು, ಚಿಕ್ಕಮಂಡೂರು, ಕಿರುಗೂರು, ಮತ್ತೂರು (ಭಾಗಶಃ).
ಟಿ. ಶೆಟ್ಟಿಗೇರಿ ಕ್ಷೇತ್ರ: ಟಿ. ಶೆಟ್ಟಿಗೇರಿ, ಹರಿಹರ, ನೆಮ್ಮಲೆ ಪೂರ್ವ ಮತ್ತು ಪಶ್ಚಿಮ, ಪರಕಟಗೇರಿ, ತೆರಾಲು, ಬಾಡಗರಕೇರಿ, ಬಿ. ಶೆಟ್ಟಿಗೇರಿ, ಕುಟ್ಟಂದಿ ಜಿ.ಪಂ. ಕ್ಷೇತ್ರಗಳೆಂದು ಗುರುತು ಮಾಡಲಾಗಿದೆ.
ತಾ.ಪಂ. ಕ್ಷೇತ್ರಗಳು
ತಾಲೂಕಿನಲ್ಲಿ ಸದ್ಯಕ್ಕೆ ಗುರುತು ಮಾಡಿರುವಂತೆ ಒಟ್ಟು ೯ ತಾ.ಪಂ. ಕ್ಷೇತ್ರಗಳನ್ನು ನಿಗದಿ ಮಾಡಲಾಗಿದೆ. ಇದರ ವಿವರ ಇಂತಿದೆ.
ತಿತಿಮತಿ ಕ್ಷೇತ್ರ: ನೋಕ್ಯ, ದೇವಮಾಜಿ ಅರಣ್ಯ, ಅರೆಕೇರಿ ಅರಣ್ಯ-೧, ಅರೆಕೇರಿ ಅರಣ್ಯ-೨, ಅರೆಕೇರಿ ಅರಣ್ಯ-೩ ಧನುಗಾಲ.
ಬಾಳೆಲೆ ಕ್ಷೇತ್ರ: ಬಾಳೆಲೆ, ದೇವನೂರು, ಬಿಳೂರು, ಬೆಸಗೂರು, ನಲ್ಲೂರು, ಕಾನೂರು, ಬೆಕ್ಕೆಸೊಡ್ಲೂರು, ಕೊತೂರು, ನಿಟ್ಟೂರು, ಹತ್ತುಗಟ್ಟು ಅರಣ್ಯ-೧, ಕೊಟ್ಟಗೇರಿ.
ಕೈಕೇರಿ ಕ್ಷೇತ್ರ: ಅರುವತ್ತೋಕ್ಲು, ಹಳ್ಳಿಗಟ್ಟು (ಭಾಗಶಃ), ಹಾತೂರು, ಕೈಕೇರಿ, ಕುಂದ.
ಹೆಬ್ಬಾಲೆ ಕ್ಷೇತ್ರ: ಮಾಯಾಮುಡಿ, ಹೆಬ್ಬಾಲೆ.
ಗೋಣಿಕೊಪ್ಪಲು ಕ್ಷೇತ್ರ: ಗೋಣಿಕೊಪ್ಪಲು
ಕಿರುಗೂರು ಕ್ಷೇತ್ರ: ಕಿರುಗೂರು, ಮತ್ತೂರು (ಭಾಗಶಃ), ಬಲ್ಯಮಂಡೂರು, ಚಿಕ್ಕಮಂಡೂರು.
ಹುದಿಕೇರಿ ಕ್ಷೇತ್ರ: ಹುದಿಕೇರಿ, ಬೆಳ್ಳೂರು, ಹೈಸೊಡ್ಲೂರು, ಬೇಗೂರು.
ಶ್ರೀಮಂಗಲ ಕ್ಷೇತ್ರ: ಕುಮಟೂರು, ಕುರ್ಚಿ, ಕುಟ್ಟ, ಮಂಚಳ್ಳಿ ಮತ್ತು ಅರಣ್ಯ, ನಾಲ್ಕೇರಿ, ನಾಲ್ಕೇರಿ ಅರಣ್ಯ, ಕೆ. ಬಾಡಗ.
ಟಿ. ಶೆಟ್ಟಿಗೇರಿ ಕ್ಷೇತ್ರ: ಟಿ. ಶೆಟ್ಟಿಗೇರಿ, ನೆಮ್ಮಲೆ ಪೂರ್ವ ಮತ್ತು ಪಶ್ಚಿಮ, ಹರಿಹರ, ಬಿ. ಶೆಟ್ಟಿಗೇರಿ, ಕುಟ್ಟಂದಿ, ಪರಕಟಗೇರಿ, ತೆರಾಲು, ಬಾಡಗರಕೇರಿ.
ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಡಿಸೆಂಬರ್ ೧ ರ ಸಂಜೆ ೫ ರೊಳಗೆ ಸಲ್ಲಿಸಬಹುದಾಗಿದೆ.