ಗೋಣಿಕೊಪ್ಪ ವರದಿ, ನ. ೨೮: ಪೊನ್ನಂಪೇಟೆ ಶಿಶು ಅಭಿವೃದ್ದಿ ಇಲಾಖೆ, ಗೋಣಿಕೊಪ್ಪ ಗ್ರಾಮ ಪಂಚಾಯಿತಿ, ಸತ್ಯಸಾಯಿ ಸೇವಾ ಟ್ರಸ್ಟ್, ಪಾಲಿಬೆಟ್ಟ ಚೆಶೈರ್ ಹೋಮ್, ಪೊನ್ನಂಪೇಟೆ ಸ್ತಿçà ಶಕ್ತಿ ಒಕ್ಕೂಟ, ತಾಲೂಕು ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಘಟನೆ, ತಾಲೂಕು ಎಂಆರ್‌ಡಬ್ಲೂö್ಯ, ವಿ.ಆರ್.ಡಬ್ಲ್ಯೂ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ವಿಕಲಚೇತನರಿಗೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಿದ್ದ ತಾಲೂಕು ಮಟ್ಟದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಶೇಷ ಚೇತನರು ಕುಣಿದು ಸಂಭ್ರಮಿಸಿದರು.
ಚೆಶೈರ್ ಹೋಂ ಆಡಳಿತ ಮಂಡಳಿ ಅಧ್ಯಕ್ಷೆ ಗೀತಾ ಚಂಗಪ್ಪ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ವಿಶೇಷ ಚೇತನರ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುತ್ತಿರುವುದು ಪ್ರತಿಭೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಪೊನ್ನAಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ ಮಾತನಾಡಿ, ವಿಶೇಷ ಚೇತನರ ಪೋಷಣೆ ಜವಾಬ್ದಾರಿಯಲ್ಲಿ ತ್ಯಾಗವೇ ಹೆಚ್ಚಿರುತ್ತದೆ. ಪಾಲಕರು, ಕುಟುಂಬ ಹಾಗೂ ವಿಶೇಷ ಶಾಲೆಗಳಲ್ಲಿನ ಸಿಬ್ಬಂದಿ ವಿಶೇಷ ಚೇತನರಿಗೆ ನೆರವಾಗಿರುವುದು ಗೌರಯುತವಾಗಿರುತ್ತದೆ. ಪ್ರೋತ್ಸಾಹ ಮುಖ್ಯ ಎಂದರು.
ಚೆಶೈರ್ ಹೋಂ ಮುಖ್ಯ ಶಿಕ್ಷಕ ಶಿವರಾಜ್ ಮಾತನಾಡಿ, ತಾಲೂಕಿನಲ್ಲಿ ಕ್ರೀಡೆ ಆಯೋಜಿಸಲು ದಾನಿಗಳ ಪ್ರೋತ್ಸಾಹವೇ ಕಾರಣ, ಪ್ರತೀ ಹಂತಕ್ಕೂ ಸಾರ್ವಜನಿಕರ ಬೆಂಬಲ ಮಕ್ಕಳ ಉತ್ಸಾಹಕ್ಕೆ ಕಾರಣವಾಗಿದೆ ಎಂದರು.
ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಟ್ಟಂಜೆಟ್ಟಿರ ತಿಮ್ಮಯ್ಯ, ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪೂಣಚ್ಚ, ಸಹಾಯಕ ಶಿಶು ಯೋಜನಾಧಿಕಾರಿ ರೀತಾ, ಗ್ರಾಮ ಪಂಚಾಯಿತಿ ಸದಸ್ಯೆ ನೂರೆರ ರತಿ, ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್ ಕಾರ್ಯಕ್ರಮ ನಿರ್ವಾಹಕ ಬೋರಪ್ಪ, ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಎಚ್.ಕೆ. ಕುಮಾರ್, ಅಂಗನವಾಡಿ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ನಳಿನಾಕ್ಷಿ, ಖಜಾಂಚಿ ರಾಜೇಶ್ವರಿ ಇದ್ದರು.