ಕೂಡಿಗೆ, ನ. ೨೬: ಹಾಸನದಲ್ಲಿ ನಡೆದ ಶಾಲಾ ಶಿಕ್ಷಣ ಇಲಾಖೆಯ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಕೂಡಿಗೆ ಕ್ರೀಡಾ ಶಾಲೆಯ ವಿದ್ಯಾರ್ಥಿಗಳು ಮೈಸೂರು ವಿಭಾಗ ತಂಡವನ್ನು ಒಂದು ಗೋಲು ಬಾರಿಸುವ ಮೂಲಕ ಜಯಗಳಿಸಿ ಕೂಡಿಗೆ ಕ್ರೀಡಾ ಶಾಲೆಯ ಹಾಕಿ ತಂಡವು ರಾಷ್ಟçಮಟ್ಟದ ಹಾಕಿ ಪಂದ್ಯಾಟಕ್ಕೆ ಆಯ್ಕೆಗೊಂಡಿದೆ.
ಹಾಸನದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಹಾಕಿ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಮೈಸೂರು ವಿಭಾಗ ತಂಡವನ್ನು ೧-೦ ಕೂಡಿಗೆ ಹಾಕಿ ತಂಡದ ಪ್ರತೀಕ್ ಯರಕಲ್ ನವರ ಏಕೈಕ ಗೋಲಿನಿಂದ ತಂಡವು ಪ್ರಥಮ ಸ್ಥಾನವನ್ನು ಗಳಿಸುವುದರೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡು ರಾಷ್ಟçಮಟ್ಟದ ಹಾಕಿ ಪಂದ್ಯಾಟಕ್ಕೆ ಅರ್ಹತೆಯನ್ನು ಗಳಿಸಿದೆ. ಕೂಡಿಗೆ ತಂಡದ ಆಟಗಾರ ಸಾರ್ಥಕ್ ಬಿಜವಾಡ ಎಂಬ ವಿದ್ಯಾರ್ಥಿ ಬೆಸ್ಟ್ ಪ್ಲೇಯರ್ ಆಫ್ ದಿ ಟೂರ್ನಮೆಂಟ್ ಪ್ರಶಸ್ತಿಯನ್ನು ಗಳಿಸಿದರು. ವಿಜೇತ ತಂಡದಲ್ಲಿ ಪ್ರಬಲ್ ಸೋಮಯ್ಯ, ಪೂಜಿತ್, ಕೌಶಿಕ್, ವಿನಯ್, ಚಿರಾಗ್, ಸಾರ್ಥಕ್ ಬಿಜವಾಡ, ಕೃತನ್, ದೇವ್ ಮಲ್ಯಮೇಟಿ, ಶ್ರೇಯಸ್, ನಕುಲ್ ರಾಷ್ಟçಮಟ್ಟದ ಹಾಕಿ ಪಂದ್ಯದಲ್ಲಿ ಪ್ರತಿನಿಧಿಸಲು ಅರ್ಹತೆ ಪಡೆದುಕೊಂಡಿದ್ದಾರೆ.
ಈ ತಂಡಕ್ಕೆ ಕ್ರೀಡಾ ಶಾಲೆಯ ಪ್ರಮುಖ ಹಾಕಿ ತರಬೇತಿದಾರರಾದ ಬಿ.ಎಸ್. ವೆಂಕಟೇಶ್ ತರಬೇತಿ ನೀಡಿರುತ್ತಾರೆ. ರಾಷ್ಟçಮಟ್ಟದ ಹಾಕಿ ಪಂದ್ಯಾಟವು ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ಮುಂದಿನ ತಿಂಗಳಲ್ಲಿ ನಡೆಯಲಿದೆ.