ಚೆಯ್ಯಂಡಾಣೆ, ನ. ೨೬ : ಕರ್ನಾಟಕ ರಾಜ್ಯ ಟೈಲರ್ಸ್ ಅಸೋಸಿಯೇಷನ್ ವೀರಾಜಪೇಟೆ ವಲಯ ಸಮಿತಿಯ ವಾರ್ಷಿಕೋತ್ಸವ ನಡೆಯಿತು. ವೀರಾಜಪೇಟೆ ಪುರಭವನದಲ್ಲಿ ಅಸೋಸಿಯೇಷನ್‌ನ ತಾಲೂಕು ಅಧ್ಯಕ್ಷರಾದ ಟಿ.ಜೆ. ಪೊನ್ನಕ್ಕಿ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಅತಿಥಿ ಗಣ್ಯರು ಉದ್ಘಾಟಿಸಿ, ಮಾತನಾಡಿದರು. ಟೈಲರ್ಸ್ ಅಸೋಸಿಯೇಷನ್‌ನ ಕೊಡಗು ಜಿಲ್ಲಾಧ್ಯಕ್ಷರಾದ ಶೇಕ್ ಅಹಮ್ಮದ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ, ಸಂಘಟನೆ ೧೯೯೯ -೨೦೦೦ನೇ ಇಸವಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆರಂಭಗೊAಡು ಇಂದು ಉತ್ತಮ ಕಾರ್ಯಕ್ರಮಗಳ ಮೂಲಕ ಹೆಸರುವಾಸಿಯಾಗಿದೆ ಮುಂದಿನ ದಿನಗಳಲ್ಲಿ ಕೊಡಗಿನಲ್ಲಿ ಕೂಡ ಸಂಘಟನೆಯನ್ನು ಬಲಪಡಿಸಬೇಕು ಎಂದರು. ಮುಖ್ಯ ಅತಿಥಿಗಳಾಗಿ ಕೆಎಟಿಎ ವಲಯ ಸಮಿತಿ ಸ್ಥಾಪಕ ಅಧ್ಯಕ್ಷರಾದ ಸಿ.ಕೆ. ಚಂದ್ರಶೇಖರ್, ರಾಜ್ಯಾಧ್ಯಕ್ಷರಾದ ಸುರೇಶ್ ಸಾಲಿಯಾನ್, ರಾಜ್ಯ ಸಮಿತಿ ಕೋಶಾಧಿಕಾರಿ ವಿಜಯ ಕುಮಾರ್, ದಕ್ಷಿಣ ಕನ್ನಡ ಜಿಲ್ಲೆಯ ಕೋಶಾಧಿಕಾರಿ ಜಯಂತ್ ಉಲ್ಯಾಡಿ, ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಶೇಖರ್ ಪೊನ್ನಂಪೇಟೆ ತಾಲ್ಲೂಕು ಅಧ್ಯಕ್ಷರಾದ ಗಿರೀಶ್, ಗೋಣಿಕೊಪ್ಪ ವಲಯ ಅಧ್ಯಕ್ಷರಾದ ನೇತ್ರಾವತಿ ಪಾಲ್ಗೊಂಡಿದ್ದರು.

ಕಳೆದ ಸಾಲಿನ ಆಡಳಿತ ಮಂಡಳಿಯನ್ನೇ ೨೦೨೫-೨೬ನೇ ಸಾಲಿಗೆ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸಂಘದ ಪದಾಧಿಕಾರಿಗಳಾದ ಕೆ.ವಿ. ಸುಮೇಶ್, ಉಪಾಧ್ಯಕ್ಷರಾದ ಯು.ವಿ. ಕೃಷ್ಣ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಗೌರವಾಧ್ಯಕ್ಷರಾದ ಮೀನಾಕ್ಷಿ, ಸಹ ಕಾರ್ಯದರ್ಶಿ, ಎಂ. ಎ. ಪ್ರಕಾಶ್, ಖಜಾಂಚಿ ಅಜಿತ್ ಕುಮಾರ್ ಎನ್.ಎನ್, ಸಂಘಟನಾ ಕಾರ್ಯದರ್ಶಿ ಹರಿದಾಸ್, ವೇಣು, ಸಲಹೆಗಾರರಾದ ಅಶೋಕ್, ಯೋಗೇಶ್ ಸದಸ್ಯರುಗಳಾದ ಲೀನಾ, ವಾಸುದೇವ್, ಟೀಸ, ಸುಜಾತ, ವಸಂತಿ, ಮೀನಾ, ಗುಲ್ನಾಜ್ ಮತ್ತಿತರರು ಉಪಸ್ಥಿತರಿದ್ದರು. ಸ್ವಾಗತ ಹಾಗೂ ವಂದನೆಯನ್ನು ವೀರಾಜಪೇಟೆ ವಲಯ ಪ್ರಧಾನ ಕಾರ್ಯದರ್ಶಿ ಕೃಷ್ಣ ನೆರವೇರಿಸಿದರು.