ನಾಪೋಕ್ಲು, ನ. ೨೬: ಶೌರ್ಯ ವಿಪತ್ತು ನಿರ್ವಹಣಾ ಘಟಕ ನಾಪೋಕ್ಲು ಇದರ ವತಿಯಿಂದ ಇಲ್ಲಿಯ ಸರ್ಕಾರಿ ಪದವಿ ಕಾಲೇಜಿನಲ್ಲಿ ಶ್ರಮದಾನ ಮಾಡಲಾಯಿತು.

ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು ಒಟ್ಟು ಸೇರಿ ಕಾಲೇಜಿನ ಆವರಣದಲ್ಲಿ ಬೆಳೆದಿದ್ದ ಕಾಡು ಗಿಡ ಗಂಟಿಗಳನ್ನು ಕಡಿದು ಸ್ವಚ್ಛ ಕಾರ್ಯವನ್ನು ಮಾಡಿ ಕಾಲೇಜಿಗೆ ಮೆರಗನ್ನು ಇನ್ನಷ್ಟು ಹೆಚ್ಚಿಸಿದರು.

ಈ ಸಂದರ್ಭದಲ್ಲಿ ನಾಪೋಕ್ಲು ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸ್ಟರ್ ಆಗಿರುವ ಬಾಳೆಯಡ ದಿವ್ಯ ಮಂದಪ್ಪ, ಸದಸ್ಯರಾದ ಉಮಾಲಕ್ಷ್ಮಿ, ಸುನಿತಾ, ರಮ್ಯಾ, ಚಂದ್ರಕಲಾ, ರಶ್ಮಿ ಶಂಕರ, ದಿಲೀಶ್, ಶರವಣ ನಾರಾಯಣ, ಮೈಲಪ್ಪ ಹಾಗೂ ಕಾಲೇಜು ಪ್ರಾಂಶುಪಾಲೆ ಪಲ್ಲವಿ ಹೆಚ್.ಸಿ., ಉಪನ್ಯಾಸಕರು ಹಾಜರಿದ್ದರು.