ವೀರಾಜಪೇಟೆ: ಸುಳ್ಯದಲ್ಲಿ ನಡೆದ ರಾಷ್ಟçಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಜೆನ್ ಶಿಟೊರಿಯೊ ಕರಾಟೆ ಅಸೋಸಿಯೇಷನ್ ಸಂಸ್ಥೆಯ ಜಿಲ್ಲಾಮಟ್ಟದ ತರಬೇತುದಾರರಾದ ಕಳ್ಳಿರ ರೇಖಾ ಬೋಪಣ್ಣ ನೇತೃತ್ವದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳು ಭಾಗವಹಿಸಿ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ

ಆರೆAಜ್ ಬೆಲ್ಟ್ ವಿಭಾಗದ ಕತಾ ಮತ್ತು ಕುಮಿತೆ ವಿಭಾಗದಲ್ಲಿ ಆರ್ಯನ್ ಚಿನ್ನದ ಪದಕ ಮತ್ತು ಟ್ರೋಫಿಯನ್ನು ಪಡೆದಿದ್ದಾರೆ. ಕುಮಿತೆ ಸ್ಪರ್ಧೆಯಲ್ಲಿ ಚಿನ್ನದ ಪದಕ ಮತ್ತು ಟ್ರೋಫಿಯನ್ನು ಲಿಖಿತಾ, ಜೈನುಲ್ಲ ಭೂಮಿ ಸಹಲೋನಿ ಪಡೆದಿದ್ದಾರೆ.

ಧ್ರುತಿ ಮತ್ತು ಗಗನ್ ಕುಮಿತೆ ವಿಭಾಗದಲ್ಲಿ ಕಂಚಿನ ಪದಕ ಪಡೆದಿದ್ದಾರೆ. ಗ್ರೀನ್ ಬೆಲ್ಟ್ ವಿಭಾಗದಲ್ಲಿ ಅವನಿ ಅಕ್ಕಮ್ಮ ಕಂಚಿನ ಪದಕ ಪಡೆದಿರುವುದಾಗಿ ತರಬೇತುದಾರರಾದ ರೇಖಾ ಬೋಪಣ್ಣ ಮಾಹಿತಿ ನೀಡಿದ್ದಾರೆ.ಮಡಿಕೇರಿ: ತಾ. ೨೧ ರಿಂದ ೨೩ ರವರೆಗೆ ಹಾಸನದಲ್ಲಿ ನಡೆದ ೧೪ ವಯೋಮಿತಿಯ ಬಾಲಕಿಯರ ರಾಜ್ಯಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಪಿ.ಎಂ.ಶ್ರೀ. ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಮಡಿಕೇರಿಯ ವಿದ್ಯಾರ್ಥಿಗಳು ಮೈಸೂರು ವಿಭಾಗದ ತಂಡದ ಪರ ಆಟವಾಡಿ ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.

ತಸ್ವಿಕ ತಂಗಮ್ಮ ಎ.ಕೆ. ೭ನೇ ತರಗತಿ ಮತ್ತು ಜಿಯಾಶ್ರೀ ಎನ್. ೮ನೇ ತರಗತಿ ಇವರುಗಳು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ನಡೆಯುವ ರಾಷ್ಟçಮಟ್ಟದ ಹಾಕಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಇವರುಗಳಿಗೆ ಶಾಲಾ ಮುಖ್ಯೋಪಾಧ್ಯಾಯಿನಿ ಭವಾನಿ ಹೆಚ್.ಟಿ. ಅವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ಬಿ.ಎಲ್. ತರಬೇತಿ ನೀಡಿದ್ದಾರೆ.ಕಣಿವೆ: ಕೊಡಗು ವಿಶ್ವವಿದ್ಯಾಲಯ ಮಟ್ಟದ ಅಂತರ ಕಾಲೇಜು ವಾಲಿಬಾಲ್ ಪಂದ್ಯಾಟದಲ್ಲಿ ಕುಶಾಲನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮಹಿಳೆಯರ ವಿಭಾಗದ ತಂಡ ಪ್ರಥಮ ಬಹುಮಾನ ಪಡೆದುಕೊಂಡಿದೆ.

ಪAದ್ಯದ ಉತ್ತಮ ದಾಳಿಗಾರ್ತಿಯಾಗಿ ದಿವ್ಯಾ ಧರ್ಮೇಗೌಡ ಗಮನಸೆಳೆದರು. ಪುರುಷರ ವಿಭಾಗದಲ್ಲೂ ತಂಡ ದ್ವಿತೀಯ ಬಹುಮಾನ ಗಳಿಸಿದ್ದು, ವಿದ್ಯಾರ್ಥಿ ಹರ್ಷ ಉತ್ತಮ ದಾಳಿಕಾರನಾಗಿ ಗಮನ ಸೆಳೆದಿದ್ದಾನೆ. ತಂಡದ ತರಬೇತುದಾರರಾಗಿ ಡಾ. ಪಿ.ಪಿ. ಜಯಂತಿ ಕಾರ್ಯನಿರ್ವಹಿಸಿದ್ದರು.ನಾಪೋಕ್ಲು: ಬ್ರಹ್ಮಗಿರಿ ಸಹೋದಯದ ವತಿಯಿಂದ ಇಲ್ಲಿನ ಅಂಕುರ್ ಪಬ್ಲಿಕ್ ಶಾಲೆಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಾಥಮಿಕ ಶಾಲಾ ವಿಭಾಗದಲ್ಲಿ ಅಂಕುರ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಗಳಿಸಿದರು. ದ್ವಿತೀಯ ಸ್ಥಾನವನ್ನು ಅರಮೇರಿ ಎಸ್‌ಎಂಎಸ್ ಶಾಲೆ ಪಡೆದುಕೊಂಡಿತು. ಪ್ರೌಢಶಾಲಾ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಅಂಕುರ್ ಪಬ್ಲಿಕ್ ಶಾಲೆ, ದ್ವಿತೀಯ ಸ್ಥಾನವನ್ನು ಕೊಡಗು ವಿದ್ಯಾಲಯ ತನ್ನ ಮುಡಿಗೇರಿಸಿಕೊಂಡಿತು.

ಥ್ರೋಬಾಲ್ ಪಂದ್ಯಾವಳಿಯನ್ನು ಬ್ರಹ್ಮಗಿರಿ ಸಹೋದಯಕ್ಕೆ ಒಳಪಟ್ಟ ಕೊಡಗು ವಿದ್ಯಾಲಯ, ಕ್ರೆಸೆಂಟ್, ಎಸ್‌ಎಂಎಸ್, ಕೆವಿಜಿ ಸುಳ್ಯ, ಅಂಕುರ್ ಪಬ್ಲಿಕ್ ಶಾಲೆಗಳ ತಂಡಗಳು ಭಾಗವಹಿಸಿದ್ದವು.

ಪಂದ್ಯಾವಳಿಯ ತೀರ್ಪುಗಾರರಾಗಿ ಮೂರ್ನಾಡು ವಿದ್ಯಾಸಂಸ್ಥೆಯ ದೈಹಿಕ ಶಿಕ್ಷಣ ಶಿಕ್ಷಕ ತೇಜಸ್, ಮೂರ್ನಾಡು ಸರ್ಕಾರಿ ಪ್ರೌಢಶಾಲಾ ದೈಹಿಕ ಶಿಕ್ಷಕಿ ಕಸ್ತೂರಿ ತಿಮ್ಮಯ್ಯ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಅಂಕುರ್ ಪಬ್ಲಿಕ್ ಶಾಲೆಯ ಅಧ್ಯಕ್ಷ ರಾಜ ಚರ್ಮಣ್ಣ, ವ್ಯವಸ್ಥಾಪಕಿ ರತ್ನ ಚರ್ಮಣ್ಣ, ಶಿಕ್ಷಕ ವೃಂದ ಹಾಗೂ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಗಣ್ಯರು ವಿಜೇತರಾದ ತಂಡಗಳಿಗೆ ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು.ಸುಂಟಿಕೊಪ್ಪ: ಸರಕಾರಿ ಪದವಿಪೂರ್ವ ಪ್ರೌಢಶಾಲೆಯಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದ್ದು ವಿಜೇತ ಮಕ್ಕಳಿಗೆ ಸಮಾಜ ಸೇವಕ ಇಬ್ರಾಹಿಂ (ಬಾಪ್ಪು) ಬಹುಮಾನಗಳನ್ನು ವಿತರಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲೆ ಉಪಪ್ರಾಂಶುಪಾಲ ಬಾಲಕೃಷ್ಣ ಮಾತನಾಡಿ, ಸರಕಾರಿ ಶಾಲೆಗೆ ದಾನಿಗಳು ದೊರೆಯುವುದೇ ಅಪರೂಪ. ಇಂತಹ ಸಂದರ್ಭದಲ್ಲಿ ಸ್ಥಳೀಯರಾದ ಇಬ್ರಾಹಿಂ ಬಾಪು ಅವರು ಸರಕಾರಿ ಶಾಲೆ ಮತ್ತು ಮಕ್ಕಳ ಮೇಲೆ ಅಭಿಮಾನವಿಟ್ಟು ಕ್ರೀಡಾಕೂಟದಲ್ಲಿ ಜಯಗಳಿಸಿದ ಮಕ್ಕಳಿಗೆ ಬಹುಮಾನಗಳನ್ನು ಪ್ರಯೋಜಿಸಿರುವುದು ಶ್ಲಾಘನೀಯ ಎಂದರು.

ಶಾಲೆಯ ಅಭಿವೃದ್ಧಿಯ ದಿಸೆಯಲ್ಲಿ ಹಳೆಯ ವಿದ್ಯಾರ್ಥಿಗಳು ಶಾಲೆಯ ಕಟ್ಟಡಗಳನ್ನು ದುರಸ್ತಿಗೊಳಿಸುವ ಮೂಲಕ ರೂಪುಗೊಳಿಸಿರುವುದು ಮತ್ತು ಕೆನರಾ ಬ್ಯಾಂಕ್ ವತಿಯಿಂದ ಶಾಲೆ ಅಭಿವೃದ್ಧಿಗೆ ರೂ. ೨ ಲಕ್ಷ ದೇಣಿಗೆ ದೊರೆತಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿದರು.

ಸುಂಟಿಕೊಪ್ಪ ಹಿರಿಯ ಪತ್ರಕರ್ತ ಬಿ.ಡಿ. ರಾಜುರೈ ಮಾತನಾಡಿ, ಸಮಾಜ ಸೇವೆಯಲ್ಲಿ ನಿರಂತರವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಇಬ್ರಾಹಿಂ ಅವರ ಕೊಡುಗೆ ಅಭಿನಂದಾರ್ಹ ಎಂದರು.

ಶಾಲಾ ಶಿಕ್ಷಕ ಪ್ರಕಾಶ್ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಹುಮಾನ ಪ್ರಯೋಜಕರಾದ ಇಬ್ರಾಹಿಂ ಬಾಪ್ಪು ಅವರನ್ನು ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಸಹಶಿಕ್ಷಕರು ಸನ್ಮಾನಿಸಿ, ಗೌರವಿಸಿದರು.

ಈ ಸಂದರ್ಭ ಮುಸ್ತಾಫ, ಶಾಲಾ ಸಹ ಶಿಕ್ಷಕರುಗಳಾದ ಚಿತ್ರ, ಲಿಯೋನ, ಜಯಶ್ರೀ, ಶಾಂತ ಹೆಗ್ಡೆ ಸೇರಿದಂತೆ ಮತ್ತಿತರರು ಇದ್ದರು.ನಾಪೋಕ್ಲು: ಇಲ್ಲಿನ ಡೆಕ್ಕನ್ ಯೂತ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ಟೌನ್ ಟೈಗರ್ ತಂಡ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡಿತು. ದ್ವಿತೀಯ ಸ್ಥಾನವನ್ನು ಗೇಮ್ ೦೭ ತಂಡ ಪಡೆದುಕೊಂಡಿತು.

ಕ್ರೀಡಾಕೂಟದ ವೀಕ್ಷಕ ವಿವರಣೆಯನ್ನು ಸರ್ಫೂದ್ದೀನ್ ಹಾಗೂ ತೀರ್ಪುಗಾರರಾಗಿ ಮಹಮ್ಮದ್ ಅಲಿ ಚಿಕ್ಕಮಗಳೂರು ನೆರವೇರಿಸಿಕೊಟ್ಟರು.

ಡೆಕ್ಕನ್ ಯೂತ್ ಕ್ಲಬ್ ಅಧ್ಯಕ್ಷ ಜೈನುಲ್ ಆಬಿದ್ ಅವರ ಅಧ್ಯಕ್ಷತೆಯಲ್ಲಿ ಇಲ್ಲಿಯ ಕೆಪಿಎಸ್ ಶಾಲಾ ಆಟದ ಮೈದಾನದಲ್ಲಿ ಆಯೋಜಿಸಿದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟ ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿದ್ದ ಗಣ್ಯರು ನಗದು ಹಾಗೂ ಟ್ರೋಫಿಯನ್ನು ವಿತರಿಸಿ ಶುಭ ಹಾರೈಸಿದರು. ಇದಕ್ಕೂ ಮೊದಲು ಗಣ್ಯರು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಬಳಿಕ ಚೆಂಡನ್ನು ಸರ್ವಿಸ್ ಮಾಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ ಕೊಟ್ಟಮುಡಿ, ವಿಎಸ್‌ಎಸ್‌ಎನ್ ನಿರ್ದೇಶಕ ಅರೆಯಡ ರತ್ನ ಪೆಮ್ಮಯ್ಯ, ನಾಪೋಕ್ಲು ಪಂಚಾಯಿತಿ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಕೆ.ಎ. ಇಸ್ಮಾಯಿಲ್, ಯುನೆಸ್ ಪಿ.ಎಂ., ರಶೀದ್ ಪಿ.ಎಂ., ಅರಫತ್, ಸಿರಾಜುದ್ದೀನ್ ಚೆರಿಯಪರಂಬು, ಆದಿಲ್, ಅಹ್ಮದ್ ಸಿ.ಹೆಚ್., ಹಾರೀಸ್, ಆಸ್ಕರ್, ಆಸಿಫ್, ರಶೀದ್ ಪಿ.ಎಂ., ಮಹಮ್ಮದ್ ಅಲಿ, ಅಹಮದ್ ಸಿ.ಹೆಚ್., ಉಪಾಧ್ಯಕ್ಷ ಸಂಶು ಕಾರೆಕ್ಕಾಡ್, ಕ್ಲಬ್‌ನ ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.ವೀರಾಜಪೇಟೆ: ಸುಳ್ಯ ತಾಲೂಕಿನ ಕುರುಂಜಿ ಜಾನಕಿ ವೆಂಕಟರಮಣ ಗೌಡ ಸಭಾಭವನ ಕ್ರೀಡಾಂಗಣದಲ್ಲಿ ನಡೆದ ರಾಷ್ಟçಮಟ್ಟದ ಮುಕ್ತ ಕರಾಟೆ ಪಂದ್ಯಾವಳಿಯಲ್ಲಿ ವೀರಾಜಪೇಟೆಯ ಪೆರುಂಬಾಡಿ ಗ್ರಾಮದ ಜೆನ್ ಶಿಟೋರಿಯೋ ಸ್ಕೂಲ್ ಆಫ್ ಇಂಡಿಯಾದ ೧೫ ವಿದ್ಯಾರ್ಥಿಗಳು ಪಾಲ್ಗೊಂಡು ಚಿನ್ನ, ಬೆಳ್ಳಿ, ಕಂಚಿನ ಪದಕಗಳನ್ನು ಪಡೆಯುವುದರ ಮೂಲಕ ಸಾಧನೆ ತೋರಿದ್ದಾರೆ.

ವಿದ್ಯಾರ್ಥಿಗಳಾದ ದೃತಿಕ್, ಪ್ರಜನ್, ಜೋಹಾನ್, ಕೃಶಾಂಕ್, ದಿಲನ್, ಗಾನವಿ, ಧನುಶ್ರೀ, ನಿರಂಜನ, ಆದಿ ದೇವು, ಪರಿಣಿತ್, ಡೇನಿಶ್, ಆದಮ್, ಸುಹಾನ್, ಬಿಂದ್ಯಾ, ಇವರುಗಳು ಕುಮಿತೆ ಮತ್ತು ಕಟಾ ವಿಭಾಗದಲ್ಲಿ ತಮ್ಮ ಪ್ರದರ್ಶನ ನೀಡಿ ಬಾಲಕರ ವಿಭಾಗದ ಕುಮಿತೆಯಲ್ಲಿ ೪ ಚಿನ್ನ ೬ ಬೆಳ್ಳಿ, ೧ ಕಂಚು, ಕಟಾ ವಿಭಾಗದಲ್ಲಿ ೩ ಚಿನ್ನ ೬ ಬೆಳ್ಳಿ, ೪ ಕಂಚು, ಬಾಲಕಿಯರ ವಿಭಾಗದ ಕುಮಿತೆಯಲ್ಲಿ ೩ ಚಿನ್ನ, ೧ ಬೆಳ್ಳಿ, ಕಟಾ ವಿಭಾಗದಲ್ಲಿ ೩ ಬೆಳ್ಳಿ, ೧ ಕಂಚು, ಪದಕಗಳನ್ನು ಪಡೆದುಕೊಂಡಿದ್ದಾರೆ.

ಇವರಿಗೆ ಸೆನ್ಸಾಯಿ ಪಿ.ಆರ್. ಶಿವಪ್ಪ ತರಬೇತಿ ನೀಡಿದ್ದಾರೆ.ಮಡಿಕೇರಿ: ಮೈಸೂರು ವಿಭಾಗಮಟ್ಟದ U-೧೪ ಥ್ರೋಬಾಲ್ ಪಂದ್ಯಾವಳಿಗೆ ಅಮ್ಮತ್ತಿಯ ಗುಡ್ ಶೇಪರ್ಡ್ ಶಾಲೆಯ ನಾಲ್ಕು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಅನ್ಮಿಷ ಅಂಟೋನಿ, ರಿಶೆಲ್ ನೊರೊನ್ಹ ಹಾಗೂ ಸಾಹಿತ್ಯ, ಬಾಲಕರ ವಿಭಾಗದಲ್ಲಿ ಪ್ರಜ್ವಲ್ ಆಯ್ಕೆಯಾಗಿದ್ದಾರೆ.