ಮಡಿಕೇರಿ ನ. ೨೬: ನಗರದ ಕೊಡಗು ವಿದ್ಯಾಲಯದ ಎನ್.ಸಿ.ಸಿ. ಕೆಡೆಟ್ಗಳು, ಎನ್.ಸಿಸಿ. ರೈಝಿಂಗ್ ಡೇ ಪ್ರಯುಕ್ತ ಮಡಿಕೇರಿಯ ಸರ್ಕಾರಿ ಮತ್ತು ಖಾಸಗಿ ಬಸ್ ನಿಲ್ದಾಣಗಳಲ್ಲಿ ‘ಸ್ವಚ್ಛ ಕೊಡಗು-ಸುಂದರ ಕೊಡಗು’ ಅಭಿಯಾನವನ್ನು ನಡೆಸಿದರು. ಪ್ರಯಾಣಿಕರಿಗೆ ಬಸ್ನಲ್ಲಿ ಕಸವನ್ನು ಹೊರಗೆ ಎಸೆಯಬಾರದು ಎಂದು ಕೆಡೆಟ್ಗಳು ಮನವಿ ಮಾಡಿದರು. ಸರ್ಕಾರಿ ಹಾಗೂ ಖಾಸಗಿ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆ ಕೈಗೊಂಡರು.
ಶಾಲೆಯ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರ, ಆಡಳಿತ ವ್ಯವಸ್ಥಾಪಕ ರವಿ ಪಿ., ಶಾಲೆಯ ಎನ್.ಸಿ.ಸಿ. ಅಧಿಕಾರಿ ಹಾಗೂ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಕೆಡೆಟ್ಗಳೊಂದಿಗೆ ಭಾಗವಹಿಸಿದ್ದರು.