ಮಡಿಕೇರಿ, ನ. ೨೬: ಮಡಿಕೇರಿಯ ಅಂಗನವಾಡಿಗಳಿಗೆ ಸಂಬAಧಿಸಿದ ೦-೬ ವರ್ಷದ ಮಕ್ಕಳ ಆಧಾರ್ ನೋಂದಣಿಯನ್ನು ಮಾಡಲಾಯಿತು. ಅಂಚೆ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಮಗುವಿನ ಜನ್ಮ ದಿನಾಂಕ, ಪೋಷಕರ ಆಧಾರ್ ಕಾರ್ಡ್, ಆಧಾರ್ ಕಾರ್ಡ್ನಲ್ಲಿ ನೋಂದಣಿಯಾದ ಫೋನ್ ನಂಬರ್‌ನೊAದಿಗೆ ಬಾಕಿ ಉಳಿದ ೦-೬ ವರ್ಷದ ಮಕ್ಕಳ ಆಧಾರ್ ನೋಂದಣಿಯನ್ನು ಮಾಡಲು ಎಲ್ಲ ಪೋಷಕರು ಅಂಗನವಾಡಿ ಕಾರ್ಯಕರ್ತೆಯರಿಗೆ ಸಹಕಾರ ನೀಡಿ ನೋಂದಣಿ ಮಾಡಿಕೊಳ್ಳಬೇಕಾಗಿ ಹಾಗೂ ಆಧಾರ್ ನೋಂದಣಿ ಕುರಿತು ಅಂಗನವಾಡಿ ಕಾರ್ಯಕರ್ತೆಯರು ವ್ಯಾಪಕ ಪ್ರಚಾರ ಮಾಡಬೇಕಾಗಿ ಪ್ರಬಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಸಭೆಯಲ್ಲಿ ತಿಳಿಸಿದರು. ಹೊಸ ಬಡಾವಣೆ ಅಂಗನವಾಡಿ ಸಹಾಯಕಿ ಜಿನತ್ ಅವರು ೩೫ ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದು, ಕಾರ್ಯಕ್ರಮದಲ್ಲಿ ಕಸಬಾ ವೃತ್ತದ ೨೪ ಅಂಗನವಾಡಿ ಕೇಂದ್ರದ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸೇರಿ ಬೀಳ್ಕೊಡುಗೆ ಸಮಾರಂಭ ನಡೆಸಿ ಅವರನ್ನು ಸನ್ಮಾನಿಸಿದರು.