ಕೂಡಿಗೆ, ನ. ೨೪ : ರಾಷ್ಟಿçÃಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ) ದಿನಾಚರಣೆಯ ಪ್ರಯುಕ್ತ, ಕೂಡಿಗೆ ಸೈನಿಕ ಶಾಲೆ ಎನ್‌ಸಿಸಿ ಘಟಕವು ಹಾರಂಗಿ ಜಲಾಶಯದ ಆವರಣದಲ್ಲಿ ಬೃಹತ್ ಸ್ವಚ್ಛತಾ ಅಭಿಯಾನವನ್ನು ನಡೆಸಿತು.ಅಭಿಯಾನದಲ್ಲಿ ಶಾಲೆಯ ಒಟ್ಟು ೧೭೧ ಎನ್.ಸಿ.ಸಿ .ವಿದ್ಯಾರ್ಥಿಗಳು ಮತ್ತು ಐವರು ಅಧಿಕಾರಿಗಳು ಭಾಗವಹಿಸಿದ್ದರು.

ಈ ಸಂದರ್ಭ ಹಾರಂಗಿ ಜಲಾಶಯ ಪ್ರದೇಶದಲ್ಲಿ ದೀರ್ಘಕಾಲದಿಂದ ಸಂಗ್ರಹವಾಗಿದ್ದ ಪ್ಲಾಸ್ಟಿಕ್ ಬಾಟಲಿಗಳು, ಪಾಲಿಥಿನ್ ಚೀಲಗಳು, ಕಾಗದ ಮತ್ತು ಇತರೆ ಅನುಪಯುಕ್ತ ವಸ್ತುಗಳನ್ನು ಸಂಗ್ರಹಿಸಲಾಯಿತು. ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ವೈಜ್ಞಾನಿಕ ಕ್ರಮದಲ್ಲಿ ತ್ಯಾಜ್ಯವನ್ನು ಬೇರ್ಪಡಿಸಿ ಅದನ್ನು ಸೂಕ್ತ ವಿಲೇವಾರಿಗಾಗಿ ವ್ಯವಸ್ಥಿತವಾಗಿ ಸಂಗ್ರಹಿಸಿದರು.

ಈ ಸ್ವಚ್ಛತಾ ಅಭಿಯಾನವು ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜಿತ್ ಸಿಂಗ್, ಆಡಳಿತ ಅಧಿಕಾರಿಗಳಾದ ವಿಂಗ್ ಕಮಾಂಡರ್ ಪಿ ಪ್ರಕಾಶ್ ರಾವ್ ಮತ್ತು ಉಪ ಪ್ರಾಂಶುಪಾಲರು ಹಾಗೂ ಎನ್ ಸಿ ಸಿ ಕಮಾಂಡಿAಗ್ ಅಧಿಕಾರಿ ಸ್ಕಾ÷್ವಡ್ರನ್ ಲೀಡರ್ ಮಹಮ್ಮದ್ ಶಾಜಿ ಅವರ ಮಾರ್ಗದರ್ಶನದಲ್ಲಿ ನಡೆಯಿತು. ಶಾಲೆಯ ಎನ್ ಸಿ ಸಿ ಘಟಕದ ಲೆಫ್ಟಿನೆಂಟ್ ವಿಬಿನ ಇಒ ಮಂಜಪ್ಪ ಜಿ ಕೆ, ಎಫ್.ಒ ವೆಂಕಟ ರಮಣ ವೈ, ಟಿ.ಒ ಪ್ರತಿಭಾ ಕಲ್ಯಾಣಿ, ಸುಬೇದಾರ್ ಬಲ್ ಬೀರ್ ಸಿಂಗ್, ಹವಾಲ್ದಾರ್ ಪ್ರವೀಣ್ ಪಕಾಲೆ ಭಾಗವಹಿಸಿದ್ದರು.