ಮಡಿಕೇರಿ, ನ. ೨೪: ವೀರಾಜಪೇಟೆ ಹಾಗೂ ಪೊನ್ನಂ ಪೇಟೆಯಲ್ಲಿ ವಾರಕ್ಕೊಮ್ಮೆ ವಾಹನ ತಪಾಸಣಾ ಕ್ಯಾಂಪ್ ನಡೆಸುವಂತೆ ವೀರಾಜಪೇಟೆ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರ ಕೋರಿಕೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಸ್ಪಂದಿಸಿದ್ದು, ಕ್ಯಾಂಪ್ ನಡೆಸಲು ಸಂಬAಧಿಸಿದವರಿಗೆ ಸೂಚನೆ ನೀಡಿದ್ದಾರೆ.
ಈ ಸಂಬAಧ ಸಾರಿಗೆ ಮತ್ತು ರಸ್ತೆ ಸುರಕ್ಷತೆ ಆಯುಕ್ತರು, ಮೈಸೂರು ವಿಭಾಗದ ಜಂಟಿ ಸಾರಿಗೆ ಆಯುಕ್ತರಿಗೆ ಪತ್ರ ಬರೆದಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಹೊಸದಾಗಿ ಪ್ರಾದೇಶಿಕ ಸಾರಿಗೆ ಕಚೇರಿಯನ್ನು ತೆರೆಯುವಂತೆ ಹಾಗೂ ಕಚೇರಿಯನ್ನು ಆರಂಭಿಸುವವರೆಗೆ ವಾರಕ್ಕೊಮ್ಮೆ ವೀರಾಜಪೇಟೆ ಮತ್ತು ಪೊನ್ನಂಪೇಟೆಯಲ್ಲಿ ವಾಹನ ತಪಾಸಣೆ ಕ್ಯಾಂಪ್ ತೆರೆಯು ವಂತೆ ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರು ಹಾಗೂ ವೀರಾಜಪೇಟೆ ಶಾಸಕರಾದ ಪೊನ್ನಣ್ಣ ಅವರು ಸಚಿವರಲ್ಲಿ ಕೋರಿದ್ದು, ಸಚಿವರು ವಾರಕ್ಕೊಮ್ಮೆ ವೀರಾಜ ಪೇಟೆಯಲ್ಲಿ ಮತ್ತು ಪೊನ್ನಂಪೇಟೆಯಲ್ಲಿ ಕ್ಯಾಂಪ್ ನಡೆಸಿ ಎಂದು ತಿಳಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ವೀರಾಜಪೇಟೆ ಮತ್ತು ಪೊನ್ನಂಪೇಟೆಯಲ್ಲಿ ವಾರಕ್ಕೊಮ್ಮೆ ಸಾರಿಗೆ ಕ್ಯಾಂಪ್ ನಡೆಸಲು ಕ್ರಮ ಕೈಗೊಳ್ಳುವಂತೆ ಪತ್ರದಲ್ಲಿ ತಿಳಿಸಿದ್ದಾರೆ.