ಅನಿಲ್ ಹೆಚ್.ಟಿ.
ಮಡಿಕೇರಿ, ನ. ೨೪: ಭಾರತದ ಅತ್ಯಂತ ಹಳೇ ರಾಜಕೀಯ ಪಕ್ಷ ಎಂದೇ ಪರಿಗಣಿತವಾಗಿರುವ ಕಾಂಗ್ರೆಸ್ನೊಳಗಿನ ಅದೊಂದು ರಹಸ್ಯ ಇದೀಗ ಆ ಪಕ್ಷಕ್ಕೇ ಸಂದಿಗ್ಥತೆ ತಂದೊಡ್ಡಿದೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಆ ರಹಸ್ಯ ಈಗ ಬಿಡಿಸಲಾಗದ ಕಗ್ಗಂಟಾಗಿ ಪರಿಣಮಿಸಿದೆ. ಆ ರಹಸ್ಯವಾದರೂ ಏನು?
೨೦೨೩ ರಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭ, ದೆಹಲಿಯಲ್ಲಿ ಕಾಂಗ್ರೆಸ್ ವರಿಷ್ಠರ ಮುಂದೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಆಗಿರುವ ಅಧಿಕಾರ ಹಂಚಿಕೆಯ ಒಪ್ಪಂದವಾದರೂ ಏನು? ಎರಡೂವರೆ ವರ್ಷಗಳ ಬಳಿಕ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಬಿಟ್ಟುಕೊಡಬೇಕು ಎಂದು ಆಗ ಒಪ್ಪಂದವಾಗಿತ್ತೇ?
ಬಹುಶಃ ಶತಮಾನದ ರಹಸ್ಯಗಳಲ್ಲಿ ಇದು ಒಂದಾಗಿದೆ! ಏಕೆಂದರೆ ಆ ಕೋಣೆಯಲ್ಲಿ ಆಗ ಇದ್ದವರು ಕಾಂಗ್ರೆಸ್ ಹೈಕಮಾಂಡ್ ಎಂದೇ ಕರೆಯಲಾಗುವ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಕೆ.ಸಿ. ವೇಣುಗೋಪಾಲ್, ಕಾಂಗ್ರೆಸ್ ರಾಷ್ಟಿçÃಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಇವರು ಮಾತ್ರ. ಅಲ್ಲಿ ಯಾವ ರೀತಿಯ ಮಾತುಕತೆ ಅಥವಾ ಒಪ್ಪಂದವಾಗಿತ್ತು ಎಂಬ ಪರಮ ಸತ್ಯ ಇವರಿಗಷ್ಟೇ ಗೊತ್ತು. ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷಗಳಾಗಿದೆ. ಹೀಗಾಗಿ, ಆಗ ಅಂಥ ಒಪ್ಪಂದವಾಗಿದ್ದು ನಿಜವಾದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಹುದ್ದೆ ತ್ಯಜಿಸಬೇಕು. ಒಪ್ಪಂದವಾಗದೇ ಇದ್ದಲ್ಲಿ ಸಿದ್ದರಾಮಯ್ಯ ಅವರಿಗೆ ಸಮಸ್ಯೆಯಿಲ್ಲ. ಆದರೆ ಶಿವಕುಮಾರ್ ಮತ್ತು ಅವರ ಬೆಂಬಲಿಗರು ಹೇಳುವಂತೆ ಒಪ್ಪಂದದ ಪ್ರಕಾರ ಹುದ್ದೆ ತ್ಯಜಿಸಬೇಕೆಂಬ ಪಟ್ಟು ಪ್ರಬಲವಾಗಿ ಕೇಳುತ್ತಿರಬೇಕಾದಲ್ಲಿ ಅಂಥದ್ದೊAದು ಮಾತುಕತೆ ನಡೆದಿರುವ ಸಾಧ್ಯತೆಯನ್ನೂ ಅಲ್ಲಗಳೆಯಲಾಗದು. ಇಂಥ ಮಾತುಕತೆ ನಡೆಯದೇ ಹೋಗಿದ್ದಲ್ಲಿ ಶಿವಕುಮಾರ್ ತನ್ನ ಬಣದೊಂದಿಗೆ ದೆಹಲಿ ಯಾತ್ರೆ ಯನ್ನು ಎರಡೂವರೆ ವರ್ಷ ೪ಮೂರನೇ ಪುಟಕ್ಕೆ (ಮೊದಲ ಪುಟದಿಂದ) ಮುಗಿದ ಕೂಡಲೇ ಮಾಡಿ ಹೈಕಮಾಂಡ್ಗೆ ಒಪ್ಪಂದದ ಬಗ್ಗೆ ಪರೋಕ್ಷವಾಗಿ ನೆನಪಿಸುವ ಪ್ರಮೇಯವೇ ಇರುತ್ತಿರಲಿಲ್ಲ.
ಒಪ್ಪಂದ ನಡೆದಿರುವುದೇನು ಎಂಬುದು ದೆಹಲಿಯ ಕಾಂಗ್ರೆಸ್ ಕೇಂದ್ರ ಕಚೇರಿಯ ನಾಲ್ಕು ಗೋಡೆಗಳಿಗೆ ಮಾತ್ರ ಗೊತ್ತು. ಆದರೆ ಅಲ್ಲಿ ನಡೆದಿರಬಹುದಾದ ಯಾವುದೇ ಮಾತುಕತೆಯನ್ನು ಅಲ್ಲಿದ್ದ ಅಷ್ಟೂ ಮಂದಿ ಎರಡೂವರೆ ವರ್ಷಗಳ ಕಾಲ ಎಲ್ಲಿಯೂ ಬಹಿರಂಗವಾಗಿ ಹೇಳದೆ ಅತ್ಯಂತ ಗೌಪ್ಯತೆಯಿಂದ ಕಾಪಾಡಿಕೊಂಡಿದ್ದಾರಲ್ಲ... ಆ ರಹಸ್ಯ ಕಾಪಾಡುವಿಕೆಗೆ ಈ ಹೈಕಮಾಂಡ್ ಮುಖಂಡರಿಗೆ ಭೇಷ್ ಎನ್ನಲೇಬೇಕು.
ರಾಷ್ಟಿçÃಯ ಪಕ್ಷ ಎನಿಸಿಕೊಂಡಿದ್ದ ಕಾಂಗ್ರೆಸ್ ಇತ್ತೀಚಿನ ವರ್ಷಗಳಲ್ಲಿ ರಾಷ್ಟಿçÃಯ ಎಂಬ “ಇಮೇಜ್'' ಕಳಚಿಕೊಳ್ಳುತ್ತಿದೆ. ಬಿಹಾರ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಸಾಧನೆ ಕಳಪೆಯಾಗಿದೆ. ಪ್ರಾದೇಶಿಕ ಪಕ್ಷಗಳಿಗಿಂತ ಕಾಂಗ್ರೆಸ್ ಕಡಿಮೆ ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ರಾಷ್ಟಿçÃಯ ಪಕ್ಷ ಎಂಬ ಹೆಸರಿಗೆ ಚ್ಯುತಿ ತಂದುಕೊಳ್ಳುತ್ತಿದೆ. ಕಾಂಗ್ರೆಸ್ ಸೃಷ್ಟಿಸಿದ ಇಂಡಿಯಾ ಮೈತ್ರಿಕೂಟದಲ್ಲಿ ಬಿರುಕುಂಟಾಗಿದೆ. ಕಾಂಗ್ರೆಸ್ ಬಿಟ್ಟು ನಾವೆಲ್ಲಾ ಒಂದಾದರೆ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯ ಎಂಬ ಅಭಿಪ್ರಾಯ ಇಂಡಿಯಾ ಕೂಟದಲ್ಲಿ ವ್ಯಕ್ತವಾಗುತ್ತಿದೆ. ಸೋಲಿಗೆ ಕಾಂಗ್ರೆಸ್ ಹೊಣೆ ಎಂಬೆಲ್ಲಾ ಮಾತುಗಳೂ ಮೈತ್ರಿಕೂಟದಲ್ಲಿ ಹೆಚ್ಚಾಗುತ್ತಿದೆ.
ಒಂದು ಕಡೆ ಕಾಂಗ್ರೆಸ್ ವರ್ಚಸ್ಸಿಗೆ ದೇಶವ್ಯಾಪೀ ಅಪಾಯ ಉಂಟಾಗುತ್ತಿರುವುದು ಮತ್ತೊಂದೆಡೆ ರಾಷ್ಟ್ರೀಯವಾಗಿ ಕಟ್ಟಿಕೊಂಡ ಮೈತ್ರಿಕೂಟದಲ್ಲಿ ಕಾಂಗ್ರೆಸ್ ವಿರುದ್ಧ ಅಪಸ್ವರ ಕಂಡುಬAದಿರುವುದು. ಕರ್ನಾಟಕ ಹೊರತುಪಡಿಸಿ ದೇಶದ ಬೇರೆ ಯಾವುದೇ ದೊಡ್ಡ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇಲ್ಲದಿರುವುದು. ಈ ಅಂಶಗಳೇ ಕಾಂಗ್ರೆಸ್ ಪಾಲಿಗೆ ಸಮಸ್ಯೆಯಂತೆ ಕಂಡಿರುವ ದಿನಗಳಲ್ಲಿಯೇ ಅಧಿಕಾರದಲ್ಲಿರುವ ಕರ್ನಾಟಕದಲ್ಲಿಯೂ ಪಕ್ಷದೊಳಗೆ ಈರ್ವರು ಪ್ರಬಲ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಟ ಪ್ರಾರಂಭಿಸಿರುವುದು ಹೊಸ ತಲೆನೋವಾಗಿ ಹೈಕಮಾಂಡ್ ಪಾಲಿಗೆ ಕಾಡಿದೆ. ಮುಖ್ಯವಾಗಿ ಈ “ಪವರ್ ಶೇರಿಂಗ್'' ವಿಚಾರದಲ್ಲಿ ಹೈಕಮಾಂಡ್ ಉತ್ತರದಾಯಿತ್ವವಾಗಿರುವುದರಿಂದಾಗಿ ಈ ಹೊಸ ಸಮಸ್ಯೆಯನ್ನು ಎರಡೂವರೆ ವರ್ಷಗಳ ಹಿಂದೆ ಮಾತುಕತೆ ನಡೆಸಿದವರೇ ಈಗ ಬಗೆಹರಿಸಬೇಕಾದ ಸವಾಲು ಎದುರಾಗಿದೆ.
ಕಾಂಗ್ರೆಸ್ನ ವಿಪರ್ಯಾಸ ಗಮನಿಸಿ. ರಾಷ್ಟಿçÃಯ ಕಾಂಗ್ರೆಸ್ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆಯವರು ಕರ್ನಾಟಕದವರು. ಅಂದರೆ ರಾಷ್ಟಿçÃಯ ಅಧ್ಯಕ್ಷರಾಗಿರುವವರ ರಾಜ್ಯದಲ್ಲಿಯೇ ಪಕ್ಷದಲ್ಲಿ ಬಿಕ್ಕಟ್ಟು ಎಂದಾಗ ಕಾಂಗ್ರೆಸ್ ಎಷ್ಟು ಮುಜುಗರ ಅನುಭವಿಸಬೇಕಾದೀತು. ಇಂಥ ಸಂಕಷ್ಟವನ್ನು ಶೀಘ್ರಗತಿಯಲ್ಲಿ ಬಗೆಹರಿಸೋಣ ಎಂದರೆ ಪಕ್ಷದ ಪ್ರಭಾವಿ ರಾಹುಲ್ ಗಾಂಧಿ ವಿದೇಶ ಪ್ರವಾಸಕ್ಕೆ ತೆರಳಿದ್ದು ಈಗಷ್ಟೇ ವಾಪಸಾಗಿದ್ದಾರೆ. ಇಂದು ಎಂ.ಎಲ್.ಸಿ. ಬಿ.ಕೆ. ಹರಿಪ್ರಸಾದ್ ಅವರು ರಾಹುಲ್ ಅವರನ್ನು ನವದೆಹಲಿಯಲ್ಲಿ ಭೇಟಿಯಾಗಿ ಪಕ್ಷದಲ್ಲಿನ ಪ್ರಸಕ್ತ ವಿದ್ಯಮಾನಗಳ ಕುರಿತು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ. ಇದೀಗ ಅಧಿಕಾರ ನಿರ್ಧಾರದ ಚೆಂಡು ರಾಹುಲ್ ಕೈ ಸೇರಿದಂತಿದೆೆ. ದಿನದಿಂದ ದಿನಕ್ಕೆ ರಾಜ್ಯ ಕಾಂಗ್ರೆಸ್ನಲ್ಲಿ ಬಣ ಕಿತ್ತಾಟ ಪ್ರಬಲವಾಗುತ್ತಾ ಹೋಗುತ್ತಿದೆ.
ಇನ್ನೊಂದು ಅಂಶ ಗಮನಿಸಿ, ಸದ್ಯದ ಮಟ್ಟಿಗೆ ಕರ್ನಾಟಕ ಕಾಂಗ್ರೆಸ್ ನಲ್ಲಿ ರಾಜಕೀಯದ ಬಿಸಿಗೆ ಕಾರಣವಾಗಿರುವುದು ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆ. ಕೆಪಿಸಿಸಿ ಅಧ್ಯಕ್ಷರೇ ಕೇಂದ್ರವಾಗಿರುವ ವಿವಾದ ಬಗೆಹರಿಸಬೇಕಾದವರು ಕರ್ನಾಟಕದವರೇ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ. ಇಲ್ಲಿ ಖರ್ಗೆ, ಸಿದ್ದು ಅಥವಾ ಡಿಕೆ ಅವರಲ್ಲಿ ಯಾರ ಪರ ಮಾತನಾಡಿದರೂ ಭವಿಷ್ಯದಲ್ಲಿ ಖರ್ಗೆ ಮತ್ತು ಅವರ ಪುತ್ರ ಪ್ರಿಯಾಂಕ್ ಖರ್ಗೆ ರಾಜಕೀಯದ ಮೇಲೆ ಆ ನಿಲುವು ಪರಿಣಾಮ ಬೀರುವ ಸಾಧ್ಯತೆಗಳು ಹೆಚ್ಚಾಗಿದೆ. ಕೆಪಿಸಿಸಿ ಅಧ್ಯಕ್ಷರೇ ಸಮಸ್ಯೆಯಾಗಿರುವಾಗ ಎಐಸಿಸಿ ಅಧ್ಯಕ್ಷರೇ ಈ ಸಂದಿಗ್ಧ ಪರಿಸ್ಥಿತಿಯನ್ನು ಹೇಗೆ ಬಗೆಹರಿಸುತ್ತೀರಿ ಎಂಬ ಪ್ರಶ್ನೆ ಸದ್ಯದ್ದು. ! ಹೀಗಾಗಿಯೇ ಈ ವಿಚಾರದ ಬಗ್ಗೆ ಅಧ್ಯಕ್ಷ ಖರ್ಗೆಯವರು ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡುವಾಗ “ಯಾವುದೇ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ'' ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ಹಾಗಿದ್ದಲ್ಲಿ ಹೈಕಮಾಂಡ್ನಲ್ಲಿ ಅವರ ಪಾತ್ರವೇನು? ಎನ್ನುವ ಪ್ರಶ್ನೆ ಇದೀಗ ಉದ್ಭವಿಸಿದೆ.
ಆಳುವ ಸರ್ಕಾರದ ವಿರುದ್ಧ ಯಾವದೇ ಟೀಕಾಸ್ತ್ರ ದೊರಕದೇ ಮಂಕಾಗಿದ್ದ ಅಥವಾ ಸಿಕ್ಕಿದ ಸಣ್ಣ ಪುಟ್ಟ ಅವಕಾಶಗಳನ್ನೂ ತನ್ನದೇ ಒಳರಾಜಕೀಯದಿಂದ ಹೊರಗಡೆ ತರಲಾಗದೇ ಕಂಗಾಲಾಗಿದ್ದ ಬಿಜೆಪಿ ಇದೀಗ ಕಾಂಗ್ರೆಸ್ನ ಅಧಿಕಾರಕ್ಕಾಗಿ ಕಿತ್ತಾಟ ಗಮನಿಸಿ ಅದನ್ನೇ ಬ್ರಹ್ಮಾಸ್ತç ಮಾಡಿಕೊಂಡಿರುವುದು ಕೈಗೆಟುಕದ ದ್ರಾಕ್ಷಿ ಹುಳಿ ಎಂಬ ಕಥೆಯನ್ನು ನೆನಪಿಸುವಂತಿದೆ.
ಕಾAಗ್ರೆಸ್ ಹೈಕಮಾಂಡ್ ಇಬ್ಬಂದಿತನವೇನು?
ಕಾAಗ್ರೆಸ್ ಹೈಕಮಾಂಡ್ ಸಮಸ್ಯೆ ಬಗೆಹರಿಸಲು ಸಾಕಷ್ಟು ಪರದಾಡಬೇಕಾದ ಸ್ಥಿತಿಯಿದೆ. ಸಿದ್ದರಾಮಯ್ಯ ಕರ್ನಾಟಕದಲ್ಲಿ ಅತ್ಯಂತ ಪ್ರಭಾವೀ ನಾಯಕ ಎನಿಸಿಕೊಂಡಿದ್ದಾರೆ. ಇನ್ನೇನು ೪೮ ದಿನಗಳು ಕಳೆದರೆ ಅತ್ಯಧಿಕ ದಿನಗಳು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದವರು ಎಂಬ ದಾಖಲೆ ಸಿದ್ದರಾಮಯ್ಯ ಪಾಲಿಗೆ ದೊರಕಲಿದೆ. ಈವರೆಗೆ ದೇವರಾಜ ಅರಸು ಹೆಸರಿನಲ್ಲಿ ಈ ದಾಖಲೆಯಿತ್ತು. ಹೀಗಾಗಿ ಇಂಥ ದಾಖಲೆ ಮಾಡದೇ ಮುಖ್ಯಮಂತ್ರಿ ಹುದ್ದೆಯಿಂದ ಸಿದ್ದರಾಮಯ್ಯ ಕೆಳಗಿಳಿಯುವ ಸಾಧ್ಯತೆ ಕ್ಷೀಣ. ಕರ್ನಾಟಕದ ಕೆಲವೇ ಕೆಲವು ವರ್ಚಸ್ವೀ ಮತ್ತು ಹಿಂದುಳಿದ ಸಮುದಾಯದ ಪ್ರಭಾವೀ ಮುಖ್ಯಮಂತ್ರಿಗಳಲ್ಲಿ ಮುಂಚೂಣಿಯಲ್ಲಿರುವವರು ನಿಸ್ಸಂಶಯವಾಗಿಯೂ ಸಿದ್ದರಾಮಯ್ಯ ಅವರೇ. ‘ಮಾಸ್ ಲೀಡರ್’ ಎಂಬ ಪದನಾಮ ಖಂಡಿತವಾಗಿಯೂ ಸಿದ್ದರಾಮಯ್ಯ ಅವರಿಗೆ ಸಲ್ಲುತ್ತದೆ. ಹೀಗಿರುವಾಗ ಯಾವ ಆಧಾರದಲ್ಲಿ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಕೆಳಕ್ಕಿಳಿಯಿರಿ ಎಂದು ಹೇಳಲು ಸಾಧ್ಯವಿದೆ?
ಹಾಗೆಂದು, ಶಿವಕುಮಾರ್ ಕಡಿಮೆಯೇನಲ್ಲ. ಕೆಪಿಸಿಸಿ ಅಧ್ಯಕ್ಷರಾಗಿ ರಾಜ್ಯದಲ್ಲಿ ಬಿಜೆಪಿಯನ್ನು ತಣ್ಣಗೆ ಮಾಡಿ ಕಾಂಗ್ರೆಸ್ ಅಲೆಯೊಂದಿಗೆ ಪಕ್ಷವನ್ನು ಭರ್ಜರಿಯಾಗಿ ಅಧಿಕಾರಕ್ಕೆ ತಂದ ಕೀರ್ತಿ ಶಿವಕುಮಾರ್ ಅವರದ್ದೇ. ಕರ್ನಾಟಕದ ಪ್ರಬಲ ಒಕ್ಕಲಿಗ ಸಮುದಾಯದ ‘ಮಾಸ್ ಲೀಡರ್’ ಡಿ.ಕೆ ಶಿವಕುಮಾರ್ ಅವರನ್ನು ಎದುರು ಹಾಕಿಕೊಂಡಿದ್ದೇ ಆದಲ್ಲಿ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ವಿರೋಧ ಖಂಡಿತಾ ಎಂಬ ವಾಸ್ತವತೆಯೂ ಹೈಕಮಾಂಡ್ಗೆ ಸ್ಪಷ್ಟವಾಗಿದೆ. ಈಗಾಗಲೇ ಅವರ ಅಭಿಮಾನಿಗಳೆನಿಸಿಕೊಂಡವರು ಡಿಕೆಶಿ ಮುಖ್ಯಮಂತ್ರಿಯಾಗಲಿ ಎಂದು ಅಲ್ಲಲ್ಲಿ ಪೂಜಾದಿಗಳನ್ನು ನಡೆಸುತ್ತಿರುವುದೂ ಕಂಡು ಬಂದಿದೆ.
ಹಾಗೇ ಹಿಂದುತ್ವ ಮತ್ತು ಬಿಜೆಪಿಯತ್ತ ಕೆಲವಾರು ತಿಂಗಳಿನಿAದ ಸೌಮ್ಯ ಧೋರಣೆ ಹೊಂದಿರುವ ಶಿವಕುಮಾರ್ ಅವರ ವಿರೋಧ ಕಟ್ಟಿಕೊಂಡಲ್ಲಿ ಡಿಕೆ ಬಣದವರೆಲ್ಲಾ ಕಮಲ ಹಿಡಿಯುವ ಸಾಧ್ಯತೆಯ ಬಗ್ಗೆಯೂ ಗುಲ್ಲೆದ್ದಿದೆ. ಶಿವಕುಮಾರ್ ಪರವಾಗಿ ದಿನದಿನಕ್ಕೂ ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಒಲವಿನ ಮಾತನಾಡುತ್ತಿರುವುದನ್ನೂ ಹೈಕಮಾಂಡ್ ಗಮನಿಸುತ್ತಿದೆ. ಕರ್ನಾಟಕ ಕಾಂಗ್ರೆಸ್ನ ಅಧ್ಯಕ್ಷರಾಗಿಯೂ ಡಿ.ಕೆ. ಕಾರ್ಯಕರ್ತರಲ್ಲಿ ಸಾಕಷ್ಟು ಬೆಂಬಲ ಹೊಂದಿದ್ದಾರೆ. ಡಿ.ಕೆ.ಗೆ ತನ್ನದೇ ವರ್ಚಸ್ಸು ಇದೆ ಎಂಬುದನ್ನೂ ಹೈಕಮಾಂಡ್ ತಿಳಿದಿದೆ. ಇಷ್ಟಕ್ಕೂ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಹೈಕಮಾಂಡ್ನ ಎಲ್ಲಾ ಅಗತ್ಯತೆಗಳನ್ನು ಪೂರೈಸಿದ್ದಾರೆ. ಹೀಗಾಗಿ ಸುಲಭವಾಗಿ ಡಿಕೆ ಬೇಡಿಕೆಯನ್ನು ಬದಿಗಿಡುವ ಸಾಧ್ಯತೆಯಲ್ಲಿಯೂ ಕಾಂಗ್ರೆಸ್ ವರಿಷ್ಠರಿಲ್ಲ.
ಹೀಗೆಲ್ಲಾ ಇರುವಾಗ ಸಿದ್ದು -ಶಿವಕುಮಾರ್ ಮಧ್ಯೆ ಯಾರ ಪರವಾಗಿಯೂ ನಿರ್ಧಾರ ತೆಗೆದುಕೊಂಡರೂ ಸಂಕಷ್ಟ ತಪ್ಪಿದ್ದಲ್ಲ ಎಂಬ ತಲೆನೋವಿನಲ್ಲಿ ಕಾಂಗ್ರೆಸ್ ಹೈಕಮಾಂಡ್ ಇದೆ. ಶಿವಕುಮಾರ್ ಅವರು ಸೋನಿಯಾಗಾಂಧಿಗೆ ನಿಷ್ಠರಾಗಿದ್ದರೆ, ಸಿದ್ದರಾಮಯ್ಯ ರಾಹುಲ್ಗೆ ನಿಷ್ಠರಾಗಿದ್ದಾರೆ. ಹೀಗಿರುವಾಗ ಅಮ್ಮ - ಮಗ ಕೊನೆಗೆ ಯಾವ ನಿರ್ಧಾರ ತೆಗೆದುಕೊಳ್ಳುವರು ಎಂಬ ಕುತೂಹಲ ಕಾಂಗ್ರೆಸ್ನ ಒಳಜಗಳದಲ್ಲಿದೆ.
ಮತ್ತೊಂದೆಡೆ, ಸತೀಶ್ ಜಾರಕಿಹೊಳಿ, ಡಾ.ಜಿ. ಪರಮೇಶ್ವರ್ ಕೂಡ ತಾವೂ ಸಿಎಂ. ಆಕಾಂಕ್ಷಿ ಎನ್ನುತ್ತಿದ್ದಾರೆ. ಮಲ್ಲಿಕಾರ್ಜುನ ಖರ್ಗೆಗೆ ರಾಷ್ಟç ರಾಜಕೀಯ ಸಾಕಾಗಿದೆ. ನೆಮ್ಮದಿಯಾಗಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಎರಡೂವರೆ ವರ್ಷ ಅಧಿಕಾರ ನಡೆಸಬೇಕೆಂಬ ಮನದಾಸೆ ಇದೆ ಎಂಬ ಮಾತುಗಳೂ ಕಾಂಗ್ರೆಸ್ ಪಡಸಾಲೆಯಲ್ಲಿ ಕೇಳಿಬರುತ್ತಿದೆ.
ಇನ್ನೇನು ಕೇರಳ, ತಮಿಳುನಾಡು, ಪಶ್ಚಿಮಬಂಗಾಳ, ಅಸ್ಸಾಂ, ಪಾಂಡಿಚೇರಿ ಚುನಾವಣೆಗಳು ೫-೬ ತಿಂಗಳಲ್ಲಿ ಎದುರಾಗಲಿದೆ. ಕರ್ನಾಟಕದ ಬಿಕ್ಕಟ್ಟು ಹೊತ್ತುಕೊಂಡು ಈ ಚುನಾವಣೆಗಳಿಗೆ ಹೇಗೆ ಸಜ್ಜಾಗುವುದು ಎಂಬ ಆತಂಕವೂ ಕಾಂಗ್ರೆಸ್ ರಾಷ್ಟಿçÃಯ ನಾಯಕರಲ್ಲಿದೆ.
ಹಿರಿಯ ನಾಯಕರನ್ನು ಕಟ್ಟಿಕೊಂಡು ಸಿದ್ದರಾಮಯ್ಯ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಬಾರದು ಎಂದು ಹಠ ತೊಟ್ಟಿದ್ದಾರೆ. ೧೪೦ ಶಾಸಕರೂ ನನ್ನವರೇ ಎಂಬ ಹೇಳಿಕೆ ಮೂಲಕ ಶಿವಕುಮಾರ್ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ. ಮುಂದಿನ ಬಜೆಟ್ ನನ್ನಿಂದಲೇ. ನಾನೇ ೫ ವರ್ಷ ಮುಗಿಯುವವರೆಗೂ ಸಿಎಂ ಎಂದು ಸಿದ್ದು ಘೋಷಿಸಿದ್ದಾರೆ. ‘ಡಿನ್ನರ್ ಮೀಟ್’ ರಾಜಕೀಯ ಕಳೆದೊಂದು ವರ್ಷದಿಂದ ನಡೆದಿದೆ. ಇಲ್ಲಿ ಆಗಿರುವ ರಾಜಕೀಯ ಗೊತ್ತಿಲ್ಲದೇನಲ್ಲ ಎಂದು ಶಿವಕುಮಾರ್ ತನ್ನ ವಿರೋಧಿ ಕ್ಯಾಂಪ್ನ ಭೋಜನಕೂಟದ ಬಗ್ಗೆ ಕಿಡಿಕಾರಿದ್ದಾರೆ.
ನಂಗೂ ಫ್ರೀ.. ನಿಂಗೂ ಫ್ರೀ ಎಂಬ ಘೋಷಣೆ ಮೂಲಕ ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಜಾರಿಗೆ ತಂದ ಕಾಂಗ್ರೆಸ್ ಸರ್ಕಾರ ಈಗ ಸಿಎಂ ಹುದ್ದೆಯ ಮಟ್ಟಿಗೆ ನಂಗಾ, ನಿಂಗಾ ಎಂಬ ಪ್ರಭಾವಿಗಳ ಕಿತ್ತಾಟಕ್ಕೆ ವೇದಿಕೆಯಾಗಿದೆ.
ಕೊನೇ ಹನಿ
ರಾಜ್ಯದಲ್ಲಿ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಸಿಎಂ “ಪವರ್ ಶೇರಿಂಗ್'' ವಿಚಾರಕ್ಕೆ ತಾರ್ಕಿಕ ಅಂತ್ಯ ಹೇಗೆ?
ಅದಕ್ಕೊಂದೇ ದಾರಿ.. ಎರಡೂವರೆ ವರ್ಷಗಳ ಹಿಂದೆ ನಾಲ್ಕು ಗೋಡೆಗಳ ನಡುವೆ ನಡೆದಿದ್ದ ಆ ರಹಸ್ಯ ಮಾತುಕತೆ ಏನೆಂದು ಬಹಿರಂಗವಾಗಬೇಕು. ನಿಜಕ್ಕೂ ಒಪ್ಪಂದ ಆಗಿತ್ತೇ ಇಲ್ಲವೇ ಎಂಬುದು ನಿರೂಪಿತವಾದಲ್ಲಿ ಹೈಕಮಾಂಡ್ ನಿಜಕ್ಕೂ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಆದರೆ ಹೈಕಮಾಂಡ್ನ ಮುಖ್ಯಸ್ಥರಲ್ಲಿ ಕೂಡ ಸಿದ್ದು. ಡಿಕೆ ಬಣಗಳಿದ್ದು, ಇದರಿಂದಾಗಿಯೇ ಆ ರಹಸ್ಯ ಬಹಿರಂಗಗೊಳ್ಳದೆ ಇನ್ನೂ ರಹಸ್ಯವಾಗಿಯೇ ಮುಂದುವರೆದಿದೆ. ಈ ರಹಸ್ಯದಿಂದಾಗಿಯೇ ಕರ್ನಾಟಕ ಕಾಂಗ್ರೆಸ್ ಅಧಿಕಾರ ಒಪ್ಪಂದದ ಬಿಕ್ಕಟ್ಟು- ಇಕ್ಕಟ್ಟು ಎದುರಿಸುವುದು ಸರ್ವವಿದಿತ. ಆ ರಹಸ್ಯ ಸದ್ಯಕ್ಕೆ ಕತ್ತಲಕೋಣೆಯೊಳಗೆ ಅವಿತಿರುವ ಕಪ್ಪು ಬೆಕ್ಕಿನಂತೆ ಇದೆ ;ಆದರೆ ಕಾಣುತ್ತಿಲ್ಲ!!