ಚೆಟ್ಟಳ್ಳಿ, ನ. ೨೩: ಕಾಫಿ, ಕರಿಮೆಣಸು, ಏಲಕ್ಕಿ ಬೆಳೆಯ ನಾಡೆಂದು ಕರೆಯಲ್ಪಡುವ ಕೊಡಗಿನಲ್ಲಿ ವಿದೇಶಿ ಹಣ್ಣಾದ ಲಿಚಿ ಹಣ್ಣಿನ ಫಸಲು ಈ ಬಾರಿ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ಲಿಚಿ ಹಣ್ಣಿನ ಹಂಗಾಮು ಮೇ - ಜೂನ್ ತಿಂಗಳೆAದು ಹೇಳಲಾಗುತ್ತಿದೆಯಾದರೂ ಅಕ್ಟೋಬರ್ನಿಂದ ಡಿಸೆಂಬರ್ ತಿಂಗಳಿನಲ್ಲಿ ಕೊಡಗಿನಲ್ಲಿ ಲಿಚಿ ಹಣ್ಣು ಕಂಡು ಬರುವುದರಿಂದ "ಆಫ್ ಸೀಜನ್ ಲಿಚಿ" ಎಂದೇ ಕರೆಯಲಾಗುತ್ತದೆ.
ಲಿಚಿ ಒಂದು ಉಷ್ಣವಲಯದ ಹಣ್ಣಾಗಿದ್ದು ಕೆಂಪು ಸಿಪ್ಪೆ ಮತ್ತು ಸಿಹಿ, ಹೂವಿನ ಪರಿಮಳದ ಬಿಳಿ ತಿರುಳನ್ನು ಹೊಂದಿರುತ್ತದೆ. ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವ ವಿಟಮಿನ್ ಸಿ ಮತ್ತು ಫೈಬರ್ನಂತಹ ಪೋಷಕಾಂಶಗಳಿAದ ಸಮೃದ್ಧವಾಗಿದೆ.
ವಿದೇಶಿ ಹಣ್ಣುಗಳಾದ ರಾಂಬೂಟಾನ್, ಮ್ಯಾಂಗೋಸ್ಟಿನ್, ಡ್ರ್ಯಾಗನ್ ಫ್ರೂಟ್, ಸ್ಟಾಟ್ ಆಪಲ್, ವೆಲ್ವೆಟ್ಟ್ ಆಪಲ್, ವಾಟರ್ ಆಪಲ್, ದುರಿಯನ್ನ್, ಲಾಂಗಾನ್ ಹಣ್ಣುಗಳು ಕೊಡಗಿನ ವಾತಾವರಣಕ್ಕೆ ಸೂಕ್ತವೆನಿಸಿದೆ. ಕೊಡಗಿನ ಬಿಸಿಲು, ಮಳೆ, ಚಳಿಗಾಳಿಯ ಮಿಶ್ರಿತ ವಾತಾವರಣ ತಂಪಗಿನ ವಾತಾವರಣ ಮಣ್ಣಿನ ಜೈವೀಕಾಂಶದ ಸಂಮೃದ್ಧಿ ಲಿಚಿ ಬೆಳೆಗೆ ವಿಶೇಷವಾಗಿದೆ ಎಂಬುದು ತಜ್ಞರ ಅಭಿಪ್ರಾಯ. ಆದ್ದರಿಂದ ತೋಟಗಾರಿಕಾ ಕೇಂದ್ರಗಳು ಹಾಗೂ ಕೃಷಿಕರು ತೋಟಗಳಲ್ಲಿ ಲಿಚಿ ಬೆಳೆಯನ್ನು ಬೆಳೆದು ಹಲವು ವರ್ಷಗಳಿಂದ ಫಸಲು ಪಡೆಯುತ್ತಿದ್ದಾರೆ.
ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ತಳಿಗಳ ಅಭಿವೃದ್ಧಿ
ವಿವಿಧ ಕೃಷಿ ಅಭಿವೃದ್ಧಿಗೆ ಪೂರಕವಾದ ಚೆಟ್ಟಳ್ಳಿ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ದೇಶಿ-ವಿದೇಶಿ ಹಣ್ಣು ಹಾಗೂ ತರಕಾರಿ ತಳಿಗಳ ಅಭಿವೃದ್ಧಿ ಮಾಡಲಾಗುತ್ತಿದೆ. ಸುಮಾರು ೨೫ ವರ್ಷಗಳಿಂದ ವಿವಿಧ ರೀತಿಯ ಶಾಹಿ, ಅರ್ಲಿ ಸೀಡ್ಲೆಸ್, ಬೇದನಾ, ಚೈನಾ ಇತ್ಯಾದಿ ವಿದಧ ಲಿಚಿ ಹಣ್ಣಿನ ಗಿಡಗಳನ್ನು ಪ್ರತ್ಯೇಕ ಬ್ಲಾಕ್ಗಳಲ್ಲಿ ಬೆಳೆಸಲಾಗಿದ್ದು, ಈ ಬಾರಿಯ ಉತ್ತಮ ತರವಾದ ವಾತಾವರಣದಿಂದ ಅತೀ ಹೆಚ್ಚಿನ ಫಸಲಿನಿಂದ ಕಂಗೊಳಿಸುತ್ತಿದೆ. ಪ್ರತೀ ಗಿಡಗಳಲ್ಲಿ ೮೦ ರಿಂದ ೧೨೦ ಕೆ.ಜಿ. ಹಣ್ಣಿ ನೀರೀಕ್ಷಿಸಲಾಗಿದ್ದು ಈ ಬಾರಿ ೮.೩೦ ಲಕ್ಷಕ್ಕೆ ಟೆಂಡರ್ ನೀಡಲಾಗಿದೆ. ಲಿಚಿ ಹಣ್ಣಾಗುವ ಸಮಯದಲ್ಲಿ ಬಾವಲಿ ಹಾಗೂ ಪಕ್ಷಿಗಳಿಂದ ರಕ್ಷಣೆ ಪಡೆಯಲು ಟೆಂಡರ್ದಾರರು ಈಗಾಗಲೇ ಲಿಚಿ ಹಣ್ಣಿನ ಗಿಡಗಳಿಗೆ ಬಲೆಯನ್ನು ಹಾಕುವ ಮೂಲಕ ಫಸಲಿನ ರಕ್ಷಣೆಗೆ ತೊಡಗಿದ್ದಾರೆ.
- ಪುತ್ತರಿರ ಕರುಣ್ ಕಾಳಯ್ಯ