ಮಡಿಕೇರಿ, ನ.೨೩ : ನಗರದ ಕೊಡಗು ವಿದ್ಯಾಲಯದಲ್ಲಿ ನ.೨೯ ಮತ್ತು ೩೦ರಂದು ವಿದ್ಯಾರ್ಥಿಗಳಿಗಾಗಿ ಕೊಡಗು ಜಿಲ್ಲಾ ಮಟ್ಟದ ಅಂತರಶಾಲಾ ಟೇಬಲ್ ಟೆನ್ನಿಸ್ ಚಾಂಪಿಯನ್‌ಶಿಪ್ ೨೦೨೫-೨೬ ನಡೆಯಲಿದೆ.
ನ.೨೯ ರಂದು ಬೆಳಿಗ್ಗೆ ೯.೩೦ ಗಂಟೆಗೆ ಶಾಲೆಯ ಸಭಾಂಗಣದಲ್ಲಿ ಪಂದ್ಯಾವಳಿಯನ್ನು ಗಣ್ಯರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಟೇಬಲ್ ಟೆನ್ನಿಸ್ ಕೊಡಗು ಜಿಲ್ಲಾ ಚಾಂಪಿಯನ್ ಮಲ್ಲೇಂಗಡ ರಚನ್ ಪೊನ್ನಪ್ಪ ಭಾಗವಹಿಸಲಿದ್ದಾರೆ.
ಪಂದ್ಯಾವಳಿಯ ವಿವರ
ನಾಕೌಟ್ ಮಾದರಿಯಲ್ಲಿ ಸ್ಪರ್ಧೆ ನಡೆಯಲಿದ್ದು, ಸಿಂಗಲ್ಸ್ ವಿಭಾಗದಲ್ಲಿ ಪ್ರತಿ ಶಾಲೆಯ ೫ ಆಟಗಾರರು ಭಾಗವಹಿಸುಬಹುದು, ಡಬಲ್ಸ್ನಲ್ಲಿ ಪ್ರತಿ ಶಾಲೆಯ ೨ ತಂಡಗಳಿಗೆ ಸ್ಪರ್ಧಿಸಲು ಅವಕಾಶವಿರುತ್ತದೆ.
೧೪ ವರ್ಷದೊಳಗಿನ ಬಾಲಕ, ಬಾಲಕಿಯರು ಹಾಗೂ ೧೬ ವರ್ಷದೊಳಗಿನ ಬಾಲಕ, ಬಾಲಕಿಯರಿಗೆ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಸ್ಪರ್ಧೆಗೆ ಆಗಮಿಸುವ ವಿದ್ಯಾರ್ಥಿಗಳು ಕಡ್ಡಾಯವಾಗಿ ವಿದ್ಯಾರ್ಥಿ ಐಡಿ ಕಾರ್ಡ್ ಅನ್ನು ತರಬೇಕು.
ಸ್ಪರ್ಧಿಗಳು ನ.೨೪ರ ಒಳಗಾಗಿ ಹೆಸರನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಹೆಚ್ಚಿನ ಮಾಹಿತಿಗೆ ಮೊ.ಸಂ : ಹೆಚ್.ಬಿ.ಪೃಥ್ವಿ ೯೮೮೦೦೭೩೪೪೦ ಹಾಗೂ ಹರಿಶಂಕರ್ ೮೬೧೮೩೬೯೨೩೮ ನ್ನು ಸಂಪರ್ಕಿಸಬಹುದಾಗಿದೆ. ಶಾಲೆಯ ಅಧಿಕೃತ ಲೆಟರ್‌ಹೆಡ್‌ನಲ್ಲಿ ವಿದ್ಯಾರ್ಥಿಯ ಗುರುತಿನ ಚೀಟಿಯ ಸ್ಕಾ÷್ಯನ್ ಮಾಡಿದ ಪ್ರತಿಯೊಂದಿಗೆ ಛಿooviಜಥಿಚಿ.viಜಥಿಚಿ@gmಚಿiಟ.ಛಿom ಗೆ ಇ-ಮೇಲ್ ಮಾಡುವಂತೆ ಶಾಲೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.