ಸಿದ್ದಾಪುರ, ನ. ೨೨: ಮಾಲ್ದಾರೆ ನಿವಾಸಿ ಹಾಗೂ ಕೊಡಗು ಅಂಬೇಡ್ಕರ್ ಸೇನೆಯ ಜಿಲ್ಲಾಧ್ಯಕ್ಷ ಮತ್ತು ಸಮಾಜಸೇವಕ ಸತೀಶ್ ಟಿ.ಆರ್. ಅವರಿಗೆ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿಯ ವತಿಯಿಂದ ಜ್ಞಾನಭಾರತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರುನಾಡ ರತ್ನ ಬಿರುದು ಮತ್ತು ಸೇವಾ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಸತೀಶ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾಗಿದ್ದು, ಕಳೆದ ಒಂಭತ್ತು ವರ್ಷಗಳಿಂದ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುವ ಸುಮಾರು ೫,೦೦೦ ಕ್ಕೂ ಅಧಿಕ ಮಕ್ಕಳಿಗೆ ಕಲಿಕಾ ಸಾಮಗ್ರಿಗಳು, ಬಟ್ಟೆ, ಛತ್ರಿ ಇನ್ನಿತರ ಅಗತ್ಯ ವಸ್ತುಗಳನ್ನು ನೀಡಿ ಹಲವಾರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಸಮಾಜಮುಖಿ ಕೆಲಸಗಳನ್ನು ಮೆಚ್ಚಿ ಸಂಘಟನೆಯು ಪ್ರಶಸ್ತಿ ಹಾಗೂ ಬಿರುದು ನೀಡಿ ಗೌರವಿಸಿದೆ.