ನಾಪೋಕ್ಲು, ನ. ೨೨: ಇಲ್ಲಿಗೆ ಸಮೀಪದ ಬಲ್ಲಮಾವಟಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ವತಿಯಿಂದ ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಬಗ್ಗೆ ಉಪನ್ಯಾಸ ಕಾರ್ಯ ಕ್ರಮವನ್ನು ಆಯೋಜಿಸಲಾಯಿತು.

ಬಲ್ಲಮಾವಟಿಯ ಇಗ್ಗುತ್ತಪ್ಪ ಕಾಂಪ್ಲೆಕ್ಸ್ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಲ್ಲಮಾವಟಿ ಪಂಚಾಯಿತಿಯ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರಾದ ಮಣಮಟ್ಟಿರ ಹರೀಶ್ ಕುಶಾಲಪ್ಪ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗವಿಜ್ಞಾನಗಳ ಮಹಾವಿದ್ಯಾಲಯದ ವಿದ್ಯಾರ್ಥಿನಿ ಲೇಖಾ ಸರಳವಾಗಿ ಪಂಚಮಹಾಭೂತಗಳಾದ ಪೃಥ್ವಿ, ಆಕಾಶ, ಜಲ, ವಾಯು ಮತ್ತು ಅಗ್ನಿ ತತ್ವಗಳು ನಮ್ಮ ದೇಹದೊಂದಿಗೆ ಹೇಗೆ ಮಿಳಿತವಾಗಿವೆ ಎಂದು ವಿವರಿಸಿದರು.

ಪ್ರಮುಖರಾದ ಚೀಯಕಪೂವಂಡ ಮಿಥುನ್ ಚಂಗಪ್ಪ ಪ್ರಾಸ್ತಾವಿಕ ನುಡಿಯಾಡಿದರು. ಕಾರ್ಯಕ್ರಮದಲ್ಲಿ ಪಂಚಾಯಿತಿ ಸದಸ್ಯ ಮಚ್ಚುರ ರವೀಂದ್ರ, ಕಂದಾಯ ಇಲಾಖೆಯ ನಿವೃತ್ತ ಸಿಬ್ಬಂದಿ ಅಪ್ಪಚೆಟ್ಟೋಳಂಡ ರಾಜ ಭೀಮಯ್ಯ, ಆರೋಗ್ಯ ಇಲಾಖೆಯ ನಿವೃತ್ತ ಶುಶ್ರೂಷಕಿ ನುಚ್ಚಿಮಣಿಯಂಡ ಡಾಟಿ, ಕಾವೇರಿ ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಚೆಟ್ಟೋಳಂಡ ವನು ವಸಂತ, ನ್ಯಾಚುರೋಪತಿ ಮತ್ತು ಯೋಗ ಸೈನ್ಸ್ ಕಾಲೇಜಿನ ವಿದ್ಯಾರ್ಥಿ ಚೀಯಕಪೂವಂಡ ಕುನಾಲ್ ದೇವಯ್ಯ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.