ಮಡಿಕೇರಿ, ನ. ೨೨ : ಜಿಲ್ಲೆಯಲ್ಲಿ ದೇಶ ಸೇವೆ ಮಾಡಿ ನಿವೃತ್ತ ರಾದ ಬಹಳಷ್ಟು ಅಧಿಕಾರಿಗಳು, ಜೊತೆಗೆ ಮೂಲತಃ ಜಿಲ್ಲೆಯವರಾಗಿದ್ದು, ಬೆಂಗಳೂರು, ಮೈಸೂರಿನಲ್ಲಿ ನೆಲೆಸಿರುವವರು, ಹೊರಭಾಗದಿಂದ ಜಿಲ್ಲೆಗೆ ಬಂದು ನೆಲೆಕಂಡಿರುವ ರಕ್ಷಣಾಪಡೆಗಳಿಗೆ ಸಂಬAಧಿಸಿದ ಅಧಿಕಾರಿ ವರ್ಗದವರ ಸಂತೋಷಕೂಟವೊAದು ನಿನ್ನೆ ವೀರಾಜಪೇಟೆಯ ಸೆರಿನಿಟಿ ಹಾಲ್ನಲ್ಲಿ ಆಯೋಜಿತಗೊಂಡಿತು. ಅಪರೂಪಕ್ಕೆ ಎಂಬAತೆ ಜಾತಿ, ಭೇದ ರಹಿತವಾಗಿ ಎಲ್ಲರನ್ನೂ ಒಳಗೊಂಡ ಅಧಿಕಾರಿ ವರ್ಗದವರು ತಮ್ಮ ಕುಟುಂಬದೊAದಿಗೆ ಸಮ್ಮಿಲನಗೊಂಡಿದ್ದರು. ನಿವೃತ್ತ ಕರ್ನಲ್ ನಾಯಡ ಚಿಣ್ಣಪ್ಪ ಅವರ ಪ್ರಯತ್ನದಂತೆ ದೇಶಸೇವೆ ಮಾಡಿ ನಿವೃತ್ತರಾಗಿರುವ ಅಧಿಕಾರಿ ವರ್ಗದವರನ್ನು ಬೆಸೆಯು ವಂತೆ ಮಾಡುವ ಪ್ರಯತ್ನ ಮಾಡ ಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸುಮಾರು ೧೫೦ರಷ್ಟು ಮಂದಿ ಪಾಲ್ಗೊಂಡಿದ್ದರು. ಲೆಫ್ಟಿನೆಂಟ್ ಜನರಲ್ಗಳು, ಏರ್ಮಾರ್ಷಲ್, ಮೇಜರ್ ಜನರಲ್, ಏರ್ವೈಸ್ ಮಾರ್ಷಲ್, ಬ್ರಿಗೇಡಿಯರ್ಗಳು, ಕಮಡೋರ್, ಕರ್ನಲ್ಗಳು, ಮೇಜರ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸಿದವರು ಸೇರಿದಂತೆ ಅಧಿಕಾರಿ ವರ್ಗ (ಆಫೀಸರ್ಸ್ ರಾಂಕ್) ಎಂದು ಪರಿಗಣಿಸಲ್ಪಡುವ ಮಂದಿ ಈ ಕಾರ್ಯಕ್ರಮದಲ್ಲಿ ಭಾಗಿಗಳಾಗಿದ್ದರು. ಕಾರ್ಯಕ್ರಮದ ಸಂದರ್ಭ ಮಾತನಾಡಿದ ನಿವೃತ್ತ ಏರ್ಮಾರ್ಷಲ್ ಕೊಡಂದೇರ ಸಿ. ಕಾರ್ಯಪ್ಪ ಅವರು ಮಾತನಾಡಿ, ಬೇರೆ ಬೇರೆ ಕಡೆ ಇರುವ ನಿವೃತ್ತ ಅಧಿಕಾರಿಗಳು ಒಂದೆಡೆ ಸೇರಿದ್ದು ಸಂತಸ ತಂದಿದೆ. ಇದರಿಂದ ಪರಸ್ಪರ ಅನುಭವ ಹಂಚಿಕೊಳ್ಳಲು ಅವಕಾಶ ವಾದಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಸಭಾ ಕಾರ್ಯಕ್ರಮ ಅಥವಾ ಇನ್ನಿತರ ಯಾವುದೇ ಕಾರ್ಯಕ್ರಮವನ್ನು ಇಟ್ಟುಕೊಂಡಿರಲಿಲ್ಲ. ಬದಲಿಗೆ ಎಲ್ಲರೂ ಒಂದಾಗಿ ಬೆರೆತು ಪರಸ್ಪರ ಉಭಯಕುಶಲೊಪರಿ, ಚರ್ಚೆ, ಊಟೋಪಚಾರದಲ್ಲಿ ಪಾಲ್ಗೊಳ್ಳುವಂತೆ ಮಾಡುವ ಚಿಂತನೆಯೊAದಿಗೆ ಈ ಪ್ರಯತ್ನ ನಡೆಸಲಾಗಿದ್ದು, ಸುಮಾರು ೧೫೦ ಮಂದಿ ಪಾಲ್ಗೊಂಡಿದ್ದರು. ವೀರನಾರಿಯರು ಭಾಗಿಯಾಗಿದ್ದರು ಎಂದು ಇದರ ವ್ಯವಸ್ಥೆ ಮಾಡಿದ್ದ ನಿವೃತ್ತ ಕರ್ನಲ್ ನಾಯಡ ಚಿಣ್ಣಪ್ಪ ‘ಶಕ್ತಿ’ಯೊಂದಿಗೆ ತಿಳಿಸಿದರು. ನಿವೃತ್ತ ಲೆಫ್ಟಿನೆಂಟ್ ಜನರಲ್ ಚೆನ್ನಿರ ಬನ್ಸಿ ಪೊನ್ನಪ್ಪ, ಲೆಫ್ಟಿನೆಂಟ್ ಜನರಲ್ ಬಿ.ಎಂ.ವಿ. ಪ್ರಸಾದ್, ಏರ್ಮಾರ್ಷಲ್ ಕೆ. ಸಿ. ಕಾರ್ಯಪ್ಪ, ಏರ್ವೈಸ್ ಮಾರ್ಷಲ್ ಬಿದ್ದಂಡ ನಂಜಪ್ಪ, ಮೇಜರ್ ಜನರಲ್ ಸೋಮೆಯಂಡ ಕಾರ್ಯಪ್ಪ, ಕಮಡೋರ್ ಚೆಕ್ಕೆರ ಬೆಳ್ಯಪ್ಪ, ಬ್ರಿಗೇಡಿಯರ್ ಮಾಳೇಟಿರ ದೇವಯ್ಯ, ಕಂಬೀರAಡ ದೇವಯ್ಯ, ಕಲಿಯಂಡ ಬೋಪಣ್ಣ, ಮೇಜರ್ ನಂದ ನಂಜಪ್ಪ, ಓ.ಎಸ್. ಚಿಂಗಪ್ಪ ಸೇರಿದಂತೆ ಹಲವರು ಈ ಸಂತೋಷಕೂಟದಲ್ಲಿ ಭಾಗಿಗಳಾಗಿದ್ದರು.