ಸೋಮವಾರಪೇಟೆ, ನ. ೨೨: ಸಮೀಪದ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವತಿಯಿಂದ ಗ್ರಾ.ಪಂ. ವ್ಯಾಪ್ತಿಯ ಅಂಗನವಾಡಿಗಳಿಗೆ ಕುರ್ಚಿಗಳನ್ನು ವಿತರಿಸಲಾಯಿತು.
ಪಂಚಾಯಿತಿ ವ್ಯಾಪ್ತಿಯ ದೊಡ್ಡಮಳ್ತೆ, ಕಾಗಡಿಕಟ್ಟೆ, ಗೆಜ್ಜೆಹಣಕೋಡು, ವಳಗುಂದ, ಕೂÃಗೆಕೋಡಿ ಗ್ರಾಮಗಳ ಅಂಗನವಾಡಿಗಳ ಕಾರ್ಯಕರ್ತರಿಗೆ ಪಂಚಾಯಿತಿ ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ ಕುರ್ಚಿಗಳನ್ನು ವಿತರಿಸಿದರು
ನಂತರ ಅವರು ಮಾತನಾಡಿ, ಕಳೆದ ಸಾಲಿನಲ್ಲಿ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಮವಸ್ತç ವಿತರಿಸಲಾಗಿತ್ತು. ಪ್ರಸಕ್ತ ಸಾಲಿನಲ್ಲೂ ಸಮವಸ್ತç ವಿತರಿಸುವ ಬಗ್ಗೆ ಚರ್ಚೆ ಮಾಡಲಾಗಿದೆ. ಪಂಚಾಯಿತಿ ಕಟ್ಟಡದ ಮೇಲಂತಸ್ತಿನಲ್ಲಿ ಮೂರೂವರೆ ಲಕ್ಷ ರೂ. ವೆಚ್ಚದಲ್ಲಿ ಸೀಟ್ಗಳನ್ನು ಅಳವಡಿಸಲಾಗಿದೆ. ಸಿಕ್ಕ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ ಎಂದು ಹೇಳಿದರು.
ಪಂಚಾಯಿತಿ ಉಪಾಧ್ಯಕ್ಷೆ ಬಿ.ಕೆ.ರಶೀದ, ಪಂಚಾಯಿತಿ ಸದಸ್ಯರು, ಪಿಡಿಒ ಎಚ್.ಆರ್.ಮೋಹನ್, ಅಂಗನವಾಡಿ ಕಾರ್ಯಕರ್ತರಾದ ನಾಗಮಣಿ, ಸವಿತ, ಪೂರ್ಣಿಮ, ಬಿಲ್ ಕಲೆಕ್ಟರ್ ವಿಶ್ವರೂಪಚಾರ್ಯ ಇದ್ದರು.