ಗೋಣಿಕೊಪ್ಪಲು, ನ.೨೧: ಹಾಕಿ ಕ್ರೀಡೆಗೆ ಮತ್ತಷ್ಟು ಪ್ರೋತ್ಸಾಹ ಸಿಗುವಂತಾಗಲಿ, ಹಾಕಿಯ ತವರೂರು ಕೊಡಗು ಜಿಲ್ಲೆಯಲ್ಲಿ ಹಾಕಿ ಕ್ರೀಡೆ ನಿರಂತರವಾಗಿರಲಿ ಎಂದು ಉದ್ಯಮಿ ಹಾಗೂ ಬೊಟ್ಟಿಯತ್‌ನಾಡ್ ಹಾಕಿ ಕ್ಲಬ್ ಅಧ್ಯಕ್ಷ ಗುಮ್ಮಟ್ಟಿರ ಕಿಲನ್ ಗಣಪತಿ ಹೇಳಿದರು

ದ.ಕೊಡಗಿನ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಇದೇ ಮೊದಲ ಬಾರಿಗೆ ಆಯೋಜನೆಗೊಂಡಿದ್ದ ಹಳ್ಳಿಗಟ್ಟು, ಹುದೂರು, ಮುಗುಟಗೇರಿ, ಈಚೂರು, ಕುಂದ ಹಾಗೂ ಅರುವತ್ತೋಕ್ಲು ಗ್ರಾಮಗಳನ್ನೊಳಗೊಂಡ ಬೊಟ್ಟಿಯತ್‌ನಾಡ್ ಹಾಕಿ ಕಪ್‌ನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಾಕಿ ಕ್ರೀಡೆಯಿಂದ ಅಂತರಾಷ್ಟಿçÃಯ ಮಟ್ಟದಲ್ಲಿ ಕೊಡಗಿನ ಹೆಸರು ಮುಂಚೂಣಿಯಲ್ಲಿದೆ. ಒಲಂಪಿಯನ್‌ಗಳಾಗಿ ಮತ್ತಷ್ಟು ಪ್ರತಿಭೆಗಳು ಕೊಡಗಿನಿಂದ ಹೊರಹೊಮ್ಮಲಿ ಎಂದು ಆಶಿಸಿದರು. ಬೊಟ್ಟಿಯತ್‌ನಾಡ್ ಹಾಕಿ ಕ್ಲಬ್ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ೩ ದಿನಗಳ ಕಾಲ ಟೂರ್ನಿ ನಡೆಯಲಿದೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮೂಕಳೆರ ಕುಶಾಲಪ್ಪ, ಪೊನ್ನಂಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಅಣ್ಣಿರ ಹರೀಶ್, ಅರುವತ್ತೊಕ್ಕಲು ಗ್ರಾ.ಪಂ. ಸದಸ್ಯ ತೀತಿಮಾಡ ಸುಗುಣ ಸೋಮಯ್ಯ, ಪೊನ್ನಂಪೇಟೆ ಪಿಯು ಕಾಲೇಜಿನ ಪ್ರಾಂಶುಪಾಲ ಜಿ.ಎನ್. ನಾಗೇಶ್, ದಾನಿಗಳಾದ ಅಚ್ಚಿಯಂಡ ವೇಣುಗೋಪಾಲ್, ಎ.ಸುರೇಶ್, ನಿವೃತ್ತ ಪ್ರಾಂಶುಪಾಲರಾದ ಡಾ.ತೀತಿರ ಕೆ. ಬೋಪಯ್ಯ, ಹಾಕಿ ಕೂರ್ಗ್ನ ಕುಲ್ಲೇಟಿರ ಬೇಬಾ ಸೇರಿದಂತೆ ಅನೇಕ ಗಣ್ಯರು ಭಾಗಿಗಳಾಗಿದ್ದರು. ಹಾಕಿ ವಿಶ್ಲೇಷಕ ಚೆಪ್ಪುಡಿರ ಕಾರ್ಯಪ್ಪ ವೀಕ್ಷಕ ವಿವರಣೆ ನೀಡಿದರು.

ಬೊಟ್ಟಿಯತ್‌ನಾಡ್ ಕುಂದ, ಬಿಬಿಸಿ ಗೋಣಿಕೊಪ್ಪ, ಬಲಂಬೇರಿ ಮಹಾದೇವ ಸ್ಪೋರ್ಟ್ಸ್ ಕ್ಲಬ್, ಸೋಮವಾರಪೇಟೆ ಡಾಲ್ಫಿನ್ಸ್, ಕೂರ್ಗ್ ಚಾಲೆಂಜರ್ಸ್, ಮಡಿಕೇರಿ ಚಾರ್ಮರ್ಸ್, ಕ್‌ಗ್ಗಟ್ಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್, ಕೋಣನಕಟ್ಟೆ ಇಲೆವೆನ್ ತಂಡಗಳ ನಡುವೆ ಪಂದ್ಯಾಟಗಳು ನಡೆಯಲಿವೆ. ತಾ. ೨೩ರಂದು ಅಂತಿಮ ಪಂದ್ಯಾವಳಿ ನಡೆಯಲಿದೆ.

-ಹೆಚ್.ಕೆ. ಜಗದೀಶ್