ಬೆAಗಳೂರು, ನ. ೨೧: ನಾಗರಹೊಳೆ ಹುಲಿ ಅಭಯಾರಣ್ಯದ ಕೋರ್ ವಲಯದಲ್ಲಿ ಕ್ರಿಕೆಟ್ ಪಂದ್ಯ ನಡೆದಿರುವ ಛಾಯಾಚಿತ್ರ, ವೀಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ವಿವರವಾದ ವರದಿಯನ್ನು ಸಲ್ಲಿಸುವಂತೆ ರಾಜ್ಯ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪಂದ್ಯಾವಳಿಯ ದೃಶ್ಯಾವಳಿಗಳು ಪರಿಸರವಾದಿಗಳು ಮತ್ತು ವನ್ಯಜೀವಿ ಕಾರ್ಯಕರ್ತರಿಂದ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಂತೆ, ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಂರಕ್ಷಿತ ಹುಲಿ ಮೀಸಲು ಪ್ರದೇಶದೊಳಗೆ ಅಂತಹ ಕಾರ್ಯಕ್ರಮವನ್ನು ನಡೆಸಲು ಹೇಗೆ ಅನುಮತಿಸಲಾಗಿದೆ. ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಎಂಬುದರ ಕುರಿತು ಹಿರಿಯ ಅರಣ್ಯ ಅಧಿಕಾರಿಗಳಿಂದ ವಿವರವಾದ ವರದಿಗೆ ಆದೇಶಿಸಿದ್ದಾರೆ.
ವೈರಲ್ ಆಗಿರುವ ವೀಡಿಯೋವು ಹತ್ತಿರದ ಹಳ್ಳಿಗಳ ನಿವಾಸಿಗಳೆಂದು ತಿಳಿದು ಬಂದಿದ್ದು, ನಾಣಚ್ಚಿ ಗೇಟ್ ಸಫಾರಿ ಪಾಯಿಂಟ್ ಬಳಿ ಕ್ರಿಕೆಟ್ ಆಡುತ್ತಿರುವುದನ್ನು ತೋರಿಸುತ್ತದೆ. ೨೦೧೧ ರ ಉಪಗ್ರಹ ಚಿತ್ರಣದೊಂದಿಗೆ ಹೋಲಿಸಿದರೆ ಈಗಿನ ಅರಣ್ಯ ದೃಶ್ಯವು ಅರಣ್ಯ ನಾಶ ಆಗಿರುವುದನ್ನು ಸೂಚಿಸುತ್ತದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಈ ಕುರಿತು ಅರಣ್ಯಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆಯ ಮುಖ್ಯಸ್ಥ) ಅವರಿಗೆ ಸಚಿವ ಖಂಡ್ರೆ ಪತ್ರ ಬರೆದಿದ್ದು, ವಿಶೇಷವಾಗಿ ಇತ್ತೀಚಿನ ತಿಂಗಳುಗಳಲ್ಲಿ ಹುಲಿಗಳನ್ನು ಒಳಗೊಂಡ ಮಾನವ-ವನ್ಯಜೀವಿ ಸಂಘರ್ಷಗಳ ಸರಣಿಯನ್ನು ರಾಜ್ಯದಲ್ಲಿ ಉಲ್ಪಣಗೊಂಡಿರುವ ಈ ಸಮಯದಲ್ಲಿ, ಹುಲಿ ಮೀಸಲು ಪ್ರದೇಶದ ಸಂರಕ್ಷಿತ ಮಿತಿಯಲ್ಲಿ ಕ್ರಿಕೆಟ್ ಪಂದ್ಯಕ್ಕೆ ಹೇಗೆ ಅನುಮತಿ ನೀಡಬಹುದೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮಾರ್ಗಸೂಚಿಗಳ ಅಡಿಯಲ್ಲಿ ಯಾವ ನಿಬಂಧನೆಯು ಅಂತಹ ಚಟುವಟಿಕೆಗಳಿಗೆ ಅವಕಾಶ ನೀಡುತ್ತದೆಯೇ ಎಂದು ಪರಿಶೀಲಿಸಲು ಸಚಿವರು ಪಿಸಿಸಿಎಫ್ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ಗೆ ನಿರ್ದೇಶನ ನೀಡಿ ಒಂದು ವಾರದೊಳಗೆ ಸಮಗ್ರ ವರದಿಯನ್ನು ಸಲ್ಲಿಸಲು ಇಲಾಖೆಗೆ ಸೂಚನೆ ನೀಡಿದ್ದಾರೆ. - ಇಂದ್ರೇಶ್ ಕೋವರ್ಕೊಲ್ಲಿ
(ಮೊದಲ ಪುಟದಿಂದ) ಎಂಬುದರ ಕುರಿತು ಹಿರಿಯ ಅರಣ್ಯ ಅಧಿಕಾರಿಗಳಿಂದ ವಿವರವಾದ ವರದಿಗೆ ಆದೇಶಿಸಿದ್ದಾರೆ.
ವೈರಲ್ ಆಗಿರುವ ವೀಡಿಯೋವು ಹತ್ತಿರದ ಹಳ್ಳಿಗಳ ನಿವಾಸಿಗಳೆಂದು ತಿಳಿದು ಬಂದಿದ್ದು, ನಾಣಚ್ಚಿ ಗೇಟ್ ಸಫಾರಿ ಪಾಯಿಂಟ್ ಬಳಿ ಕ್ರಿಕೆಟ್ ಆಡುತ್ತಿರುವುದನ್ನು ತೋರಿಸುತ್ತದೆ. ೨೦೧೧ ರ ಉಪಗ್ರಹ ಚಿತ್ರಣದೊಂದಿಗೆ ಹೋಲಿಸಿದರೆ ಈಗಿನ ಅರಣ್ಯ ದೃಶ್ಯವು ಅರಣ್ಯ ನಾಶ ಆಗಿರುವುದನ್ನು ಸೂಚಿಸುತ್ತದೆ ಎಂದು ಪರಿಸರವಾದಿಗಳು ಆರೋಪಿಸಿದ್ದಾರೆ.
ಈ ಕುರಿತು ಅರಣ್ಯಗಳ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ಅರಣ್ಯ ಪಡೆಯ ಮುಖ್ಯಸ್ಥ) ಅವರಿಗೆ ಸಚಿವ ಖಂಡ್ರೆ ಪತ್ರ ಬರೆದಿದ್ದು, ವಿಶೇಷವಾಗಿ ಇತ್ತೀಚಿನ ತಿಂಗಳುಗಳಲ್ಲಿ ಹುಲಿಗಳನ್ನು ಒಳಗೊಂಡ ಮಾನವ-ವನ್ಯಜೀವಿ ಸಂಘರ್ಷಗಳ ಸರಣಿಯನ್ನು ರಾಜ್ಯದಲ್ಲಿ ಉಲ್ಪಣಗೊಂಡಿರುವ ಈ ಸಮಯದಲ್ಲಿ, ಹುಲಿ ಮೀಸಲು ಪ್ರದೇಶದ ಸಂರಕ್ಷಿತ ಮಿತಿಯಲ್ಲಿ ಕ್ರಿಕೆಟ್ ಪಂದ್ಯಕ್ಕೆ ಹೇಗೆ ಅನುಮತಿ ನೀಡಬಹುದೆಂದು ನನಗೆ ಅರ್ಥವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.
ರಾಷ್ಟಿçÃಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್ಟಿಸಿಎ) ಮಾರ್ಗಸೂಚಿಗಳ ಅಡಿಯಲ್ಲಿ ಯಾವ ನಿಬಂಧನೆಯು ಅಂತಹ ಚಟುವಟಿಕೆಗಳಿಗೆ ಅವಕಾಶ ನೀಡುತ್ತದೆಯೇ ಎಂದು ಪರಿಶೀಲಿಸಲು ಸಚಿವರು ಪಿಸಿಸಿಎಫ್ ಮತ್ತು ಮುಖ್ಯ ವನ್ಯಜೀವಿ ವಾರ್ಡನ್ಗೆ ನಿರ್ದೇಶನ ನೀಡಿ ಒಂದು ವಾರದೊಳಗೆ ಸಮಗ್ರ ವರದಿಯನ್ನು ಸಲ್ಲಿಸಲು ಇಲಾಖೆಗೆ ಸೂಚನೆ ನೀಡಿದ್ದಾರೆ.
- ಇಂದ್ರೇಶ್ ಕೋವರ್ಕೊಲ್ಲಿ