ಮಡಿಕೇರಿ: ಸಂಪಾಜೆ ಚೆಡಾವು ಶ್ರೀ ಬಾಲ ಸುಬ್ರಹ್ಮಣ್ಯ ದೇವಾಸ್ಥಾನದಲ್ಲಿ ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ ನಡೆಯಲಿದೆ. ತಾ.೨೫ ರಂದು ಬೆಳಿಗ್ಗೆ ಗಣಪತಿ ಹೋಮ, ನಾಗ ತುಂಬಿಲ ಸೇವೆ, ಸಂಜೆ ೬ ಗಂಟೆಗೆ ತುಳಸಿ ಯಕ್ಷಗಾನ ಬಯಲಾಟ, ರಾತ್ರಿ ೧೧ ಗಂಟೆಗೆ ಮಹಾಪೂಜೆ ನಡೆಯಲಿದೆ. ತಾ.೨೬ ರಂದು ಮಧ್ಯಾಹ್ನ ೧:೩೦ ಕ್ಕೆ ಮಹಾಪೂಜೆ ಬಳಿಕ ಅನ್ನದಾನ ನಡೆಯಲಿದೆ.ಗೋಣಿಕೊಪ್ಪ ವರದಿ: ಉಮಾಮಹೇಶ್ವರಿ ದೇವಸ್ಥಾನದಲ್ಲಿ ತಾ.೨೩ ರಿಂದ ತಾ.೨೮ರವರೆಗೆ ಸುಬ್ರಮಣ್ಯ ಷಷ್ಠಿ ಉತ್ಸವ ಜರುಗಲಿದೆ.

ತಾ. ೨೩ ರಂದು ಬೆಳಿಗ್ಗೆ ೭ ಗಂಟೆಗೆ ಗಣಪತಿಹೋಮ, ದೀಪಾರಾಧನೆ, ಸಂಜೆ ೮ ಕ್ಕೆ ಮಹಾಮಂಗಳಾರತಿ, ತಾ. ೨೪ ಕ್ಕೆ ೫ ಗಂಟೆಗೆ ಇರ್ ಬೊಳಕ್, ದೇವರ ಪ್ರದಕ್ಷಿಣೆ, ಮ. ೧೨.೩೦ ಗಂಟೆಗೆ ಮಹಾ ಮಂಗಳಾರತಿ, ರಾತ್ರಿ ೭ ಗಂಟೆಗೆ ದೀಪಾರಾಧನೆ, ದೇವರ ಪ್ರದಕ್ಷಿಣೆ, ರಾತ್ರಿ. ೮ ಗಂಟೆಗೆ ಮಹಾ ಮಂಗಳಾರತಿ, ತಾ. ೨೫ ರಂದು ಮುಂಜಾನೆ ೫ ಗಂಟೆಗೆ ದೇವರ ಪ್ರದಕ್ಷಿಣೆ, ಮ. ೧೨.೩೦ ಕ್ಕೆ ಮಹಾ ಮಂಗಳಾರತಿ, ಸಂಜೆ ೭ ಗಂಟೆಗೆ ದೇವರ ಪ್ರದಕ್ಷಿಣೆ, ದೀಪಾರಾಧನೆ, ೮ ಕ್ಕೆ ಮಹಾ ಮಂಗಳಾರತಿ ನೆರವೇರಲಿದೆ.

ತಾ ೨೬ ರಂದು ಚಂಪಾ ಷಷ್ಠಿ ಮುಂಜಾನೆ ೫ ಗಂಟೆಗೆ ಇರ್‌ಬೊಳಕ್, ದೇವರ ಪ್ರದಕ್ಷಿಣೆ, ಭಕ್ತಾದಿಗಳಿಂದ ಸೇವೆ, ಪಂಚಾಮೃತ, ಕ್ಷೀರಾಭಿಷೇಕ, ಎಳನೀರು ಅಭಿಷೇಕ, ಹಣ್ಣುಕಾಯಿ ಹರಕೆ, ತುಲಭಾರ, ತಲೆಮುಡಿ, ಆಳ್ ರೂಪ ಸೇವೆ, ಮಧ್ಯಾಹ್ನ ೧.೩೦ ಗಂಟೆಗೆ ದೇವರ ನೃತ್ಯ, ಸಾಮೂಹಿಕ ವಸಂತ ಪೂಜೆ, ಮಹಾ ಮಂಗಳಾರತಿ, ಅನ್ನಸಂತರ್ಪಣೆ ನೆರವೇರಲಿದೆ. ತಾ. ೨೭ ರಂದು ಬೆ. ೭ ಕ್ಕೆ ಭಕ್ತಾದಿಗಳ ಸೇವೆ, ತಲೆಮುಡಿ, ಕ್ಷೀರಾಭಿಷೇಕ, ಪಂಚಾಮೃತ ಅಭಿಷೇಕ, ಮ. ೧೨.೩೦ ಕ್ಕೆ ಮಹಾ ಮಂದಕ್ಷಿಣ ಮಾರಿಯಮ್ಮ ದೇವಸ್ಥಾನ

ವೀರಾಜಪೇಟೆ: ವೀರಾಜಪೇಟೆಯ ತೆಲುಗು ಶೆಟ್ಟರ ಬೀದಿಯ ಇತಿಹಾಸ ಪ್ರಸಿದ್ಧ ಶ್ರೀ ದಕ್ಷಿಣ ಮಾರಿಯಮ್ಮ ದೇವಸ್ಥಾನದಲ್ಲಿ ತಾ. ೨೬ ರಂದು ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿಶೇಷ ಪೂಜೆ ಪುನಸ್ಕಾರಗಳು ನಡೆಯಲಿವೆ.

ಅಂದು ಬೆಳಿಗ್ಗೆ ೫ ಗಂಟೆಗೆ ಗಣಪತಿ ಪೂಜೆ, ಮಾರಿಯಮ್ಮ ದೇವಿಗೆ ಅಭಿಷೇಕ ಹಾಗೂ ಅಲಂಕಾರ ಪೂಜೆ, ಸುಬ್ರಹ್ಮಣ್ಯ ದೇವರಿಗೆ ಅಭಿಷೇಕ ಮತ್ತು ಅಲಂಕಾರ ಪೂಜೆ ಮತ್ತು ಮಧ್ಯಾಹ್ನ ೧ ಗಂಟೆಗೆ ಮಹಾಪೂಜೆ ನಡೆಯಲಿದೆ. ಮಹಾಪೂಜೆಯ ಬಳಿಕ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಗುತ್ತದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಪಿ ಕೃಷ್ಣ ತಿಳಿಸಿದ್ದಾರೆ.ಳಾರತಿ, ಅನ್ನಸಂತರ್ಪನೆ, ಸಂಜೆ ೭ಕ್ಕೆ ಅವಭೃತ ಸ್ನಾನ, ರಾತ್ರಿ ೮ ಗಂಟೆಗೆ ದೇವರ ನೃತ್ಯ ಪ್ರದಕ್ಷಿಣೆ, ೯ಕ್ಕೆ ಮಹಾಮಂಗಳಾರತಿ, ಅನ್ನಸಂತರ್ಪಣೆ ನಡೆಯಲಿದೆ. ತಾ. ೨೮ ರಂದು ಹಬ್ಬದ ಪ್ರಯುಕ್ತ ಕಳಶ ಪೂಜೆ ಇರುವುದರಿಂದ ಮಧ್ಯಾಹ್ನದವರೆಗೆ ಯಾವುದೇ ಸೇವೆಗಳು ಲಭ್ಯವಿರುವುದಿಲ್ಲ. ಅನ್ನಸಂತರ್ಪಣೆಗೆ ತರಕಾರಿ, ಅಕ್ಕಿ, ಬೆಲ್ಲ, ಎಳನೀರು, ಎಣ್ಣೆ, ವಗೈರೆಗಳನ್ನು ಸ್ವೀಕರಿಸಲಾಗುವುದು ಎಂದು ಉಮಾಮಹೇಶ್ವರಿ ದೇವಸ್ಥಾನ ಟ್ರಸ್ಟ್ ಪ್ರಕಟಣೆ ತಿಳಿಸಿದೆ.ಮೂರ್ನಾಡು : ಇಲ್ಲಿನ ಶ್ರೀ ಗಜಾನನ ಯುವಕ ಸಂಘದ ವತಿಯಿಂದ ತಾ. ೨೬ರಂದು ಸುಬ್ರಹ್ಮಣ್ಯ ಷಷ್ಠಿಯ ಪ್ರಯುಕ್ತ ಮೂರ್ನಾಡಿನ ಅಯ್ಯಪ್ಪ ದೇವಸ್ಥಾನದಲ್ಲಿ ಭಕ್ತಾದಿಗಳು ಮತ್ತು ಸಾರ್ವಜನಿಕರಿಗೆ ೩ನೇ ವರ್ಷದ ಅನ್ನಸಂತರ್ಪಣೆ ಸೇವೆಯನ್ನು ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕೊಟ್ಟಂಗಡ ನವೀನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವೀರಾಜಪೇಟೆ: ನಗರದ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣು ಮೂರ್ತಿ ದೇವಾಲಯದಲ್ಲಿ ಸುಬ್ರಹಣ್ಯ ಷಷ್ಠಿ ಪ್ರಯುಕ್ತ ತಾ.೨೬ ರಂದು ಶ್ರೀ ನಾಗದೇವರ ಷಷ್ಠಿ ಪೂಜೆ ನಡೆಯಲಿವೆ.

ಪೂಜೆಯ ಅಂಗವಾಗಿ ಬೆಳಿಗ್ಗೆ ೮ ಗಂಟೆಯಿAದ ನಾಗನಿಗೆ ಹಾಲಿನ ಅಭಿಷೇಕ ಬಳಿಕ ವಿಶೇಷ ಪೂಜೆಗಳು ನಡೆಯಲಿವೆ. ಬಳಿಕ ಶ್ರೀದುರ್ಗಿ ವಿಷ್ಣು ಮೂರ್ತಿ ನಾಗದೇವರಿಗೆ ಮಹಾಪೂಜೆ ಪ್ರಸಾದ ವಿನಿಯೋಗ ನಂತರ ಅನ್ನಸಂತರ್ಪಣೆ ನಡೆಯಲಿದೆ.ಮಡಿಕೇರಿ: ಮಡಿಕೇರಿ ಶ್ರೀ ಮುತ್ತಪ್ಪ ದೇವಾಲಯ ಆವರಣದಲ್ಲಿನ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ತಾ.೨೬ ರಂದು ಸುಬ್ರಹ್ಮಣ್ಯ ಷಷ್ಠಿ ಪ್ರಯುಕ್ತ ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ.

ಅಂದು ಬೆ.೯ ಗಂಟೆಗೆ ಮುತ್ತಪ್ಪ ದೇವರ ಮಲೆ ಇಳಿಸುವುದು, ೯.೩೦ಕ್ಕೆ ಕುಟ್ಟಿಚಾತನ್ ದೇವರ ವೆಳ್ಳಾಟಂ, ೧೦ ಗಂಟೆಗೆ ಮುತ್ತಪ್ಪ ದೇವರ ವೆಳ್ಳಾಟಂ, ೧೦:೩೦ಕ್ಕೆ ಗುಳಿಗ ದೇವರ ವೆಳ್ಳಾಟಂ ಹಾಗೂ ೧೧ ಗಂಟೆಗೆ ಪೋದಿ ದೇವರ ವೆಳ್ಳಾಟಂ ನಡೆಯಲಿದೆ. ಮಧ್ಯಾಹ್ನ ೧೨ಗಂಟೆಗೆ ಶ್ರೀ ಸುಬ್ರಹ್ಮಣ್ಯ ದೇವರ ಶ್ರೀಭೂತ ಬಲಿ, ೧೨.೩೦ಕ್ಕೆ ಮಹಾಮಂಗಳಾರತಿ ನಂತರ ಅನ್ನದಾನ ನೆರವೇರಲಿದೆ.

ಸಂಜೆ ೬ಗಂಟೆಗೆ ಭಜನಾ ಕಾರ್ಯಕ್ರಮ, ೭ಗಂಟೆಗೆ ರಂಗಪೂಜೆ, ೮ ಗಂಟೆಗೆ ಮಹಾಪೂಜೆಯ ನಂತರ ಪ್ರಸಾದ ವಿತರಣೆ ನೆರವೇರಲಿದೆ.ವೀರಾಜಪೇಟೆ: ವೀರಾಜಪೇಟೆ ಸಮೀಪದ ಬಾಳುಗೋಡು ಏಕಲವ್ಯ ಶಾಲೆಯ ಸಮೀಪದಲ್ಲಿರುವ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಷಷ್ಠಿ ಮಹೋತ್ಸವ ತಾ ೨೫ ರಿಂದ ೨೬ರವರೆಗೆ ಸಕಲ ಪೂಜಾ ವಿಧಿ ವಿಧಾನದೊಂದಿಗೆ ಆಚರಿಸಲಾಗುತ್ತದೆ ಎಂದು ದೇವಾಲಯದ ಪ್ರಕಟಣೆ ತಿಳಿಸಿದೆ.

ತಾ. ೨೫ ರಂದು ಮಂಗಳವಾರ ಬೆಳಿಗ್ಗೆ ಆರರಿಂದ ಏಳು ಗಂಟೆಯವರೆಗೆ ಗಣಪತಿ ಹೋಮ, ಆಶ್ಲೇಷ ಬಲಿ, ನಾಗದೇವನಿಗೆ ಅಭಿಷೇಕ, ಅಲಂಕಾರ ಪೂಜೆ ಹಾಗೂ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ. ರಾತ್ರಿ ೭ ಗಂಟೆಗೆ ದೇವರ ಉತ್ಸವ ಮೂರ್ತಿಯನ್ನು ದೇವಸ್ಥಾನದ ಸುತ್ತ ೯ ಪ್ರದಕ್ಷಿಣೆ ಬರುವುದು ನಂತರ ಅನ್ನಸಂತರ್ಪಣೆ ನಡೆಯಲಿದೆ.

ತಾ. ೨೬ ರಂದು ಬುಧವಾರ ಸುಬ್ರಹ್ಮಣ್ಯ ಷಷ್ಠಿಯಂದು ದೇವರಿಗೆ ಅಭಿಷೇಕ, ಅರ್ಚನೆ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ಮಧ್ಯಾಹ್ನ ೧೨:೩೦ ಗಂಟೆಗೆ ಮಹಾ ಮಂಗಳಾರತಿ ನಂತರ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ನಡೆಯಲಿದೆ.