ಐಗೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಕೃತಿ ಚಿಕಿತ್ಸಾ ಮತ್ತು ಯೋಗ ವಿಜ್ಞಾನಗಳ ಮಹಾವಿದ್ಯಾಲಯದ ಉಜಿರೆ ಆಸ್ಪತ್ರೆಯ ವತಿಯಿಂದ ಆಚರಿಸುತ್ತಿರುವ ರಾಷ್ಟಿçÃಯ ಪ್ರಕೃತಿ ಚಿಕಿತ್ಸಾ ದಿನಾಚರಣೆ ಅಂಗವಾಗಿ ಕಾಜೂರು ಶಾಲೆಯಲ್ಲಿ ಮಾಹಿತಿ ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಮೆಡಿಕಲ್ ವಿದ್ಯಾರ್ಥಿನಿ ಸ್ನೇಹ ಪಿ. ಆನಂದ್ ಮಾತನಾಡಿ, ವಿದ್ಯಾರ್ಥಿಗಳು ಸಾರ್ವಜನಿಕ ಶೌಚಾಲಯಗಳನ್ನು ಉಪಯೋಗಿಸುವಾಗ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಿ. ಪೋಷಕರು ಮಕ್ಕಳ ಋತುಚಕ್ರದ ಬಗ್ಗೆ ವೈದ್ಯರಲ್ಲಿ ಸಲಹೆ ಪಡೆಯಿರಿ. ಜ್ವರ ಬಂದರೆ ವೈದ್ಯರ ಸಲಹೆ ಮೇರೆಗೆ ಮಾತ್ರೆಗಳನ್ನು ಉಪಯೋಗಿಸಿ ಒಗೆದ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸಿ ದೇಹದ ಭಾಗದಲ್ಲಿ ಸೆಳೆತ ಬಂದರೆ ಬ್ಲಡ್ ಕ್ಯಾನ್ಸರ್, ಹೃದಯಾಘಾತಗಳ ಬಗ್ಗೆ ಅನುಮಾನಗಳು ಬಂದರೆ ವೈದ್ಯರನ್ನು ಸಂಪರ್ಕಿಸಿ.
ಹಸಿ ತರಕಾರಿ, ಮಜ್ಜಿಗೆ ಕುಡಿಯುವುದರ ಜೊತೆಗೆ ಬಿ.ಪಿ. ಕಡಿಮೆ ಮಾಡಿರಿ ಎಂದರು. ವಿದ್ಯಾರ್ಥಿಗಳಿಗೆ ಪ್ರಾಣಾಯಾಮದ ಬಗ್ಗೆ ತಿಳಿಸಿ ವಿದ್ಯಾರ್ಥಿಗಳಿಂದ ಪ್ರಾಣಾಯಾಮಗಳನ್ನು ಮಾಡಿಸಲಾಯಿತು. ಕಾರ್ಯಕ್ರಮದಲ್ಲಿ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.ಪೊನ್ನಂಪೇಟೆ: ಕ್ರೀಡೆಯಲ್ಲಿ ಸಾಧಿಸಿದ ಸಾಧನೆಗಾಗಿ ತಿತಿಮತಿಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಜೆ.ಎಂ. ಮನೋಜ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.
೧೪ ವರ್ಷದೊಳಗಿನ ಬಾಲಕರ ವಾಲಿಬಾಲ್ ಪಂದ್ಯಾವಳಿಯಲ್ಲಿ ರಾಷ್ಟçಮಟ್ಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ ಸಾಧನೆಗಾಗಿ ಮನೋಜ್ ಅವರನ್ನು ಬಿರ್ಸಾಮುಂಡ ಅವರ ೧೫೦ನೇ ಜನ್ಮ ದಿನಾಚರಣೆಯ ಅಂಗವಾಗಿ ಮೈಸೂರಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಹ್ವಾನಿಸಿ, ಸನ್ಮಾನಿಸಲಾಯಿತು.
ಹಾಡಿಯಲ್ಲಿ ಹುಟ್ಟಿ ಬೆಳೆದು, ಇದೀಗ ತಿತಿಮತಿಯ ಸರಕಾರಿ ಪ್ರೌಢಶಾಲೆಯಲ್ಲಿ ೯ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮನೋಜ್ ರಾಷ್ಟçಮಟ್ಟದಲ್ಲಿ ಗಮನ ಸೆಳೆದ ಹಿನ್ನೆಲೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕ ಯೋಗೇಶ್ ಸರ್ಕಾರದ ಪರವಾಗಿ ಸನ್ಮಾನಿಸಿ, ಅಭಿನಂದಿಸಿದರು.ಶನಿವಾರಸAತೆ: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಪ್ರಯುಕ್ತ ಶಿಕ್ಷಕರ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತç ಹಾಗೂ ಟ್ರ್ಯಾಕ್ಸೂಟ್ ಅನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೃಷ್ಣರಾಜ್ ಮಾತನಾಡಿ, ಮಕ್ಕಳು ಉತ್ತಮ ನಡತೆ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ಶಿಕ್ಷಣವನ್ನು ಸಹ ಪಡೆದು ತಂದೆ-ತಾಯಿ, ಗುರು-ಹಿರಿಯರಿಗೆ ಹಾಗೂ ನಾಡಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಕಾರ್ಯದರ್ಶಿ ಬೆಳ್ಳಿಯಪ್ಪ ಮಾತನಾಡಿ, ಶಿಕ್ಷಕರ ಕೊಡುಗೆಯನ್ನು ಶ್ಲಾಘಿಸಿದರು. ಮುಖ್ಯಶಿಕ್ಷಕಿ ಸುಚಿತ್ರಾ, ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.ಶನಿವಾರಸಂತೆ: ಪಟ್ಟಣದ ಶ್ರೀ ವಿಘ್ನೇಶ್ವರ ಬಾಲಿಕಾ ಪ್ರೌಢಶಾಲೆಯಲ್ಲಿ ನಡೆದ ಮಕ್ಕಳ ದಿನಾಚರಣೆ ಪ್ರಯುಕ್ತ ಶಿಕ್ಷಕರ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತç ಹಾಗೂ ಟ್ರ್ಯಾಕ್ಸೂಟ್ ಅನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ವಿದ್ಯಾಸಂಸ್ಥೆ ಆಡಳಿತ ಮಂಡಳಿಯ ಉಪಾಧ್ಯಕ್ಷ ಕೃಷ್ಣರಾಜ್ ಮಾತನಾಡಿ, ಮಕ್ಕಳು ಉತ್ತಮ ನಡತೆ, ಸಂಸ್ಕಾರವನ್ನು ಮೈಗೂಡಿಸಿಕೊಂಡು ಉತ್ತಮ ಶಿಕ್ಷಣವನ್ನು ಸಹ ಪಡೆದು ತಂದೆ-ತಾಯಿ, ಗುರು-ಹಿರಿಯರಿಗೆ ಹಾಗೂ ನಾಡಿಗೆ ಕೀರ್ತಿ ತರಬೇಕು ಎಂದು ಕರೆ ನೀಡಿದರು.
ಕಾರ್ಯದರ್ಶಿ ಬೆಳ್ಳಿಯಪ್ಪ ಮಾತನಾಡಿ, ಶಿಕ್ಷಕರ ಕೊಡುಗೆಯನ್ನು ಶ್ಲಾಘಿಸಿದರು. ಮುಖ್ಯಶಿಕ್ಷಕಿ ಸುಚಿತ್ರಾ, ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಉಪನ್ಯಾಸಕರು, ಶಿಕ್ಷಕರು, ಸಿಬ್ಬಂದಿ ಹಾಜರಿದ್ದರು.ವೀರಾಜಪೇಟೆ: ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯಲ್ಲಿ ನಡೆದ ಪ್ರೌಢ ಹಾಗೂ ಪ್ರಾಥಮಿಕ ವಿಭಾಗದ ಜಿಲ್ಲಾಮಟ್ಟದ ಚೆಸ್ ಪಂದ್ಯಾಟದಲ್ಲಿ ವೀರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಢಶಾಲಾ ವಿಭಾಗದ ಪಂದ್ಯಾಟದಲ್ಲಿ ೧೦ನೇ ತರಗತಿಯ ವಿದ್ಯಾರ್ಥಿಗಳಾದ ಸೃಷ್ಟಿ ಬಿ.ಎಸ್., ಶ್ರೀವತ್ಸ ಯು.ಜಿ. ಹಾಗೂ ತರುಣ್ ಎನ್.ಎಂ. ಪ್ರಾಥಮಿಕ ವಿಭಾಗದ ಸ್ಪರ್ಧೆಯಲ್ಲಿ ೭ನೇ ತರಗತಿಯ ವಿದ್ಯಾರ್ಥಿಗಳಾದ ಮಾಳೇಟಿರ ಚಾಲ್ಸಿ, ಅಜಾನ್ ಎಂ. ಅವರುಗಳು ಸ್ಪರ್ಧಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ನಾಪೋಕ್ಲು: ಇಲ್ಲಿನ ಶ್ರೀರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಹತ್ತನೇ ತರಗತಿಯ ವಿದ್ಯಾರ್ಥಿ ತಿನಿತ್ ಕೆ.ಎ. ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಕೂಡಿಗೆಯಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ೨೦೦ ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
೧೦ನೇ ತರಗತಿಯ ವಿದ್ಯಾರ್ಥಿನಿ ಗಾನವಿ ಬಿ.ಎಂ. ಉದ್ದ ಜಿಗಿತ ತ್ರಿವಿಧ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ. ವಿದ್ಯಾರ್ಥಿ ನಿತೀಶ್ ನಂಜಪ್ಪ ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಹಾಗೂ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾನೆ. ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದಿದ್ದು ೧೦ನೇ ತರಗತಿಯ ವಿದ್ಯಾರ್ಥಿನಿ ಗಂಗಮ್ಮ ಬಿ. ಎಸ್. ವಿಭಾಗಮಟ್ಟಕ್ಕೆ ಆಯ್ಕೆ. ಟೇಬಲ್ ಟೆನ್ನಿಸ್ನಲ್ಲಿ ಏಳನೇ ತರಗತಿ ವಿದ್ಯಾರ್ಥಿನಿ ಪರಿಧಿ ಪೂವಮ್ಮ ಕೆ.ಬಿ. ವಿಭಾಗಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಆಯ್ಕೆಯಾದ ವಿದ್ಯಾರ್ಥಿಗಳಿಗೆ ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ಪ್ರಾಂಶುಪಾಲೆ ಬಿ.ಎಂ. ಶಾರದ, ಶಿಕ್ಷಕರಾದ ಮೂಡೇರ ಕಾಳಯ್ಯ, ಸವಿತಾ ಮಾರ್ಗದರ್ಶನ ನೀಡಿದ್ದರು.ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮದ ಕೆ.ಪಿ.ಎಸ್. ಶಾಲೆಯ ವಿದ್ಯಾರ್ಥಿ ರೈಸ್ಮಿಂಚ್ ಬಾಲಕರ ಗುಂಡು ಎಸೆತ ಮತ್ತು ತಟ್ಟೆ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.ಸಿದ್ದಾಪುರ: ನೆಲ್ಲಿಹುದಿಕೇರಿ ಗ್ರಾಮದ ಕೆ.ಪಿ.ಎಸ್. ಶಾಲೆಯ ವಿದ್ಯಾರ್ಥಿ ರೈಸ್ಮಿಂಚ್ ಬಾಲಕರ ಗುಂಡು ಎಸೆತ ಮತ್ತು ತಟ್ಟೆ ಎಸೆತ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ.ಸಿದ್ದಾಪುರ: ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಚೆನ್ನಯ್ಯನ ಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೈಡ್ಸ್ ವಿದ್ಯಾರ್ಥಿಗಳು ವಿಭಾಗೀಯ ಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಗೈಡ್ಸ್ ಶಿಕ್ಷಕಿ ಜಾಜಿ ಮೋಹನ್ ಅವರ ನೇತೃತ್ವದ ತಂಡದ ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ ಎಂದು ಚೆನ್ನಯ್ಯನ ಕೋಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರಾಜಮ್ಮ ದಿಲಿ ಕುಮಾರ್ ತಿಳಿಸಿದ್ದಾರೆ.ಮಡಿಕೇರಿ: ಕುಶಾಲನಗರದ ಅಗಸ್ತö್ಯ ಅಂತರರಾಷ್ಟಿçÃಯ ಪ್ರತಿಷ್ಠಾನದ ವತಿಯಿಂದ ವಾರ್ಷಿಕ ವಿಜ್ಞಾನ ಮೇಳವನ್ನು ಕುಶಾಲನಗರ ಜಿ.ಎಂ.ಪಿ.ಎಸ್. ಶಾಲೆಯಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ವಿವಿಧ ವರ್ಗಗಳ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.
ವ್ಯಾಪಕ ಶ್ರೇಣಿಯ ನವೀನ ಮಾದರಿಗಳು ಮತ್ತು ಪ್ರಯೋಗಗಳನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಚಿಂತನೆ, ಸೃಜನಶೀಲತೆ ಮತ್ತು ಸಮಸ್ಯೆ-ಪರಿಹರಿಸುವ ಕೌಶಲ್ಯಗಳನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿತ್ತು.
೫೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರಿಸರ, ಶಕ್ತಿ, ತಂತ್ರಜ್ಞಾನ, ಆರೋಗ್ಯ, ಭೌತಶಾಸ್ತç ಮತ್ತು ದೈನಂದಿನ ನಾವೀನ್ಯತೆಗಳಿಗೆ ಸಂಬAಧಿಸಿದ ಯೋಜನೆಗಳನ್ನು ಪ್ರದರ್ಶಿಸಿದರು. ಶಿಕ್ಷಕರು ಮತ್ತು ವಿಶೇಷ ಅತಿಥಿಗಳು ವಿದ್ಯಾರ್ಥಿಗಳ ಪ್ರಯತ್ನಗಳನ್ನು ಶ್ಲಾಘಿಸಿದರು. ವೈಜ್ಞಾನಿಕ ವಿಚಾರಗಳನ್ನು ಅನ್ವೇಷಿಸುವುದನ್ನು ಮುಂದುವರಿಸಲು ಅವರನ್ನು ಪ್ರೋತ್ಸಾಹಿಸಿದರು. ವಿಜ್ಞಾನ ಮೇಳವನ್ನು ಮುಖ್ಯ ಶಿಕ್ಷಕ ಸಣ್ಣಸ್ವಾಮಿ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಇಂದಿನ ಜಗತ್ತಿನಲ್ಲಿ ಪ್ರಾಯೋಗಿಕ ಕಲಿಕೆ ಮತ್ತು ಸೃಜನಶೀಲತೆಯನ್ನು, ಮಕ್ಕಳಲ್ಲಿ ತಾರ್ಕಿಕವಾಗಿ ಚಿಂತನೆಯನ್ನು ಮೂಡಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ ಎಂದರು.
ಕಾರ್ಯಕ್ರಮದಲ್ಲಿ ಸಹಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಅಗಸ್ತö್ಯ ಅಂತರರಾಷ್ಟಿçÃಯ ಪ್ರತಿಷ್ಠಾನದ ವಲಯ ಮುಖ್ಯಸ್ಥ ಪ್ರಸಾದ್, ಮಾರ್ಗದರ್ಶಕ ರವಿ ಆರ್. ಹಾಗೂ ಮಹಾಲಿಂಗಯ್ಯ ಹಾಜರಿದ್ದರು.ಗೋಣಿಕೊಪ್ಪ ವರದಿ: ಅತ್ತೂರು ನ್ಯಾಶನಲ್ ಅಕಾಡೆಮಿ ಶಾಲೆ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರೋಬಾಟಿಕ್ಸ್ ತಂತ್ರeಗೋಣಿಕೊಪ್ಪ ವರದಿ: ಅತ್ತೂರು ನ್ಯಾಶನಲ್ ಅಕಾಡೆಮಿ ಶಾಲೆ ವತಿಯಿಂದ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ರೋಬಾಟಿಕ್ಸ್ ತಂತ್ರಜ್ಞಾನ ಪ್ರಾಯೋಗಿಕ ತರಬೇತಿ ಓಜಸ್ವಿ ಫೌಂಡೇಶನ್ ಸಹಭಾಗಿತ್ವದಲ್ಲಿ ನಡೆಯಿತು.
ರೋಬಾಟಿಕ್ಸ್ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ತರಬೇತಿ ನೀಡಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಾಲತಿ ಕಾರ್ಯಕ್ರಮ ಉದ್ಘಾಟಿಸಿ ಉಪಕ್ರಮದ ಮಹತ್ವವನ್ನು ವಿವರಿಸಿದರು. ಮಕ್ಕಳು ವಿನೂತನ ತಂತ್ರಜ್ಞಾನಗಳನ್ನು ಅರಿತುಕೊಳ್ಳಲು ಮತ್ತು ಸೃಜನಾತ್ಮಕ ಚಿಂತನೆ ಬೆಳೆಸಲು ತರಬೇತಿಗಳು ಬಹು ಉಪಯುಕ್ತ ಎಂದರು.
ಓಜಸ್ವಿ ಫೌಂಡೇಶನ್ ಟ್ರಸ್ಟಿ ಡಾ. ಪಿ.ಸಿ. ಕವಿತಾ ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಪ್ರೇರಣೆ, ವಿಜ್ಞಾನಾಭಿಮಾನ, ತಾಂತ್ರಿಕ ನೈಪುಣ್ಯ ಬೆಳೆಸುವುದು ಓಜಸ್ವಿ ಫೌಂಡೇಶನ್ನ ಪ್ರಮುಖ ಗುರಿಯಾಗಿದೆ ಎಂದರು.
ರೋಬಾಟಿಕ್ ಮಾದರಿ ಬೈಪೆಡ್ ರೋಬೋಟ್ನ ಪ್ರಾಯೋಗಿಕ ಅಧಿವೇಶನವನ್ನು ಓಜಸ್ವಿ ಫೌಂಡೇಶನ್ ಇಂಪಾನಾ ಬೋಧಿಸಿದರು. ನ್ಯಾಷನಲ್ ಅಕಾಡಮಿ ಶಾಲೆಯ ವಿದ್ಯಾರ್ಥಿಗಳು, ಸರ್ಕಾರಿ ಶಾಲಾ ಮಕ್ಕಳಿಗೆ ರೋಬಾಟ್ ಮಾದರಿ ನಿರ್ಮಾಣದಲ್ಲಿ ಸಹಕಾರ ನೀಡಿದರು. ನ್ಯಾಷನಲ್ ಅಕಾಡೆಮಿ ಶಾಲೆಯ ಹಿರಿಯ ಶಿಕ್ಷಕಿ ರೋಜಿ ರಾಣಿ ಹಾಜರಿದ್ದರು.Á್ಞನ ಪ್ರಾಯೋಗಿಕ ತರಬೇತಿ ಓಜಸ್ವಿ ಫೌಂಡೇಶನ್ ಸಹಭಾಗಿತ್ವದಲ್ಲಿ ನಡೆಯಿತು.
ರೋಬಾಟಿಕ್ಸ್ ವಿಜ್ಞಾನ ಮತ್ತು ತಂತ್ರಜ್ಞಾನ ಕುರಿತ ತರಬೇತಿ ನೀಡಲಾಯಿತು. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಮಾಲತಿ ಕಾರ್ಯಕ್ರಮ ಉದ್ಘಾಟಿಸಿ ಉಪಕ್ರಮದ ಮಹತ್ವವನ್ನು ವಿವರಿಸಿದರು. ಮಕ್ಕಳು ವಿನೂತನ ತಂತ್ರಜ್ಞಾನಗಳನ್ನು ಅರಿತುಕೊಳ್ಳಲು ಮತ್ತು ಸೃಜನಾತ್ಮಕ ಚಿಂತನೆ ಬೆಳೆಸಲು ತರಬೇತಿಗಳು ಬಹು ಉಪಯುಕ್ತ ಎಂದರು.
ಓಜಸ್ವಿ ಫೌಂಡೇಶನ್ ಟ್ರಸ್ಟಿ ಡಾ. ಪಿ.ಸಿ. ಕವಿತಾ ಗ್ರಾಮೀಣ ಹಾಗೂ ಸರ್ಕಾರಿ ಶಾಲಾ ವಿದ್ಯಾರ್ಥಿಗಳಲ್ಲಿ ಪ್ರೇರಣೆ, ವಿಜ್ಞಾನಾಭಿಮಾನ, ತಾಂತ್ರಿಕ ನೈಪುಣ್ಯ ಬೆಳೆಸುವುದು ಓಜಸ್ವಿ ಫೌಂಡೇಶನ್ನ ಪ್ರಮುಖ ಗುರಿಯಾಗಿದೆ ಎಂದರು.
ರೋಬಾಟಿಕ್ ಮಾದರಿ ಬೈಪೆಡ್ ರೋಬೋಟ್ನ ಪ್ರಾಯೋಗಿಕ ಅಧಿವೇಶನವನ್ನು ಓಜಸ್ವಿ ಫೌಂಡೇಶನ್ ಇಂಪಾನಾ ಬೋಧಿಸಿದರು. ನ್ಯಾಷನಲ್ ಅಕಾಡಮಿ ಶಾಲೆಯ ವಿದ್ಯಾರ್ಥಿಗಳು, ಸರ್ಕಾರಿ ಶಾಲಾ ಮಕ್ಕಳಿಗೆ ರೋಬಾಟ್ ಮಾದರಿ ನಿರ್ಮಾಣದಲ್ಲಿ ಸಹಕಾರ ನೀಡಿದರು. ನ್ಯಾಷನಲ್ ಅಕಾಡೆಮಿ ಶಾಲೆಯ ಹಿರಿಯ ಶಿಕ್ಷಕಿ ರೋಜಿ ರಾಣಿ ಹಾಜರಿದ್ದರು.ಕೂಡಿಗೆ: ಕೂಡಿಗೆ ಜ್ಞಾನೋದಯ ಶಾಲೆಯ ೬ನೇ ತರಗತಿ ವಿದ್ಯಾರ್ಥಿ ಕುನಾಲ್ ದಾವಣಗೆರೆಯಲ್ಲಿ ನಡೆದ ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗ ವಹಿಸಿ ರಾಷ್ಟçಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ೧೦ನೇ ತರಗತಿ ವಿದ್ಯಾರ್ಥಿನಿ ಹಂಸವೇಣಿ ಜಾವಲಿನ್ ಎಸೆತ ವಿಭಾಗದಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ ಎಂದು ಮುಖ್ಯೋಪಾಧ್ಯಾಯರು ತಿಳಿಸಿದ್ದಾರೆ.ಕೊಡ್ಲಿಪೇಟೆ: ಕೊಡ್ಲಿಪೇಟೆ ಪ.ಪೂ ಕಾಲೇಜಿನಲ್ಲಿ ಮಕ್ಕಳ ದಿನಾಚರಣೆಯ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು.
ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿವಿಧ ಬಗೆಯ ಕಂಪೆನಿಗಳ ಲಾಂಛನಗಳನ್ನು ಬಿಡಿಸಿ ತಮ್ಮಲ್ಲಿರುವ ಕಲಾ ಪ್ರತಿಭೆಯನ್ನು ಪ್ರದರ್ಶಿಸಿದರು. ಹಾಗೆಯೇ ಕುಕ್ ವಿಥೌಟ್ ಫೈರ್ ಎಂಬ ಕೌಶಲ್ಯ ಕಾರ್ಯಕ್ರಮದಡಿಯಲ್ಲಿ ವಿವಿಧ ಬಗೆಯ ಆಹಾರ ಪದಾರ್ಥಗಳನ್ನು ತಯಾರಿಸಿದರು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಬಿ.ಕೆ. ಯತೀಶ್ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರಶಂಶಿಸಿದರು. ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕರು ಹಾಜರಿದ್ದರು.